Advertisement

ಹೆದ್ದಾರಿ ಚರಂಡಿ ಅವ್ಯವಸ್ಥೆ ಬಗ್ಗೆ ಕೂಡಲೇ ಕ್ರಮಕ್ಕೆ ಆಗ್ರಹ 

06:00 AM Jul 21, 2018 | Team Udayavani |

ಕುಂದಾಪುರ:  ಹೆದ್ದಾರಿ ಪ್ರಾಧಿಕಾರದವರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಚರಂಡಿ ಮಾಡಿಲ್ಲ. ಇದರಿಂದ ಬಸೂÅರು ಮೂರುಕೈಯಿಂದ ಸಂಗಮ್‌ವರೆಗೆ ಪ್ರಯಾಣ ಸಾಧ್ಯವಾಗುತ್ತಿಲ್ಲ. ಕೆಲವು ವಾಹನ ಸವಾರರು ರಸ್ತೆ ಗುಂಡಿಯಿಂದಾಗಿ ಬಿದ್ದಿದ್ದಾರೆ. ಪ್ರಾಣಹಾನಿಯಾಗುವ ಮುನ್ನ ಕ್ರಮ ಕೈಗೊಳ್ಳಬೇಕು ಎಂಬ ವಿಚಾರ  ಕುಂದಾಪುರ ಪುರಸಭೆಯ ವಿಶೇಷ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಯಿತು. 

Advertisement

ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ  ಉದಯ ಮೆಂಡನ್‌ ಅವರು ಸಮಸ್ಯೆ ಬಗ್ಗೆ ಮುಂಚಿತವಾಗಿ ಕ್ರಮಕೈಗೊಳ್ಳಬೇಕು ಎಂದರು. ಪೂರಕವಾಗಿ ಸಭೆಯಲ್ಲಿ  ಕೂಡಲೇ  ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಲಾಯಿತು. 

ಮಣ ಭಾರ ಮನೆ ತೆರಿಗೆ
ಕೋಡಿ ಪರಿಸರದಲ್ಲಿ ವಿಪರೀತ ತೆರಿಗೆ ಹಾಕಲಾಗುತ್ತದೆ. ಅಲ್ಲಿಗೆ ನೀರಿಲ್ಲ, ವಿದ್ಯುತ್‌ ಇಲ್ಲ, ಚರಂಡಿ ಇಲ್ಲ. ಆದರೆ ತೆರಿಗೆ ಮಾತ್ರ ಮೂರುಪಟ್ಟಿದೆ. ಇದು ಸರಿಯಲ್ಲ ಎಂದು ಜ್ಯೋತಿ ಗಣೇಶ್‌ ಹೇಳಿದರು. ತೆರಿಗೆಯನ್ನು ಬೇಕಾಬಿಟ್ಟಿ ಹಾಕುವಂತಿಲ್ಲ, ಪುರಸಭೆ ನಿರ್ಣಯದಂತೆ ಮಾಡಲಾಗಿದೆ ಎಂದು ಉಪಾಧ್ಯಕ್ಷರು ಹೇಳಿದರು. ಕಾರ್ಕಳ ಪುರಸಭೆಯ ತೆರಿಗೆ ದರವನ್ನು ಇಲ್ಲಿ ಹಾಕಲಾಗಿದೆ ಎಂದು ಪುಷ್ಪಾ ಶೇಟ್‌ ಹೇಳಿದರು.  

ನಿಯಮಬದ್ಧವಾಗಿಯೇ ತೆರಿಗೆ ವಸೂಲಿಯಾಗುತ್ತಿದೆ. ತೆರಿಗೆಯನ್ನು ನೇರ ಬ್ಯಾಂಕ್‌ಗೆ ಕಟ್ಟಲಾಗುತ್ತದೆ ಎಂದು ಮಖ್ಯಾಧಿಕಾರಿ ಸ್ಪಷ್ಟಪಡಿಸಿದರು. ಕಸದ ಲಾರಿಯೇ ಬರದಿದ್ದರೂ ಕಸದ ದರ ಕೂಡಾ ಕೋಡಿ ಭಾಗಕ್ಕೆ ಹೆಚ್ಚಿದೆ ಎಂದು ಜ್ಯೋತಿ ಅವರು ಆಕ್ಷೇಪಿಸಿದಾಗ,  ಕಸ ಗುಡಿಸುವುದು, ತ್ಯಾಜ್ಯ ಘಟಕ ಹಾಗೂ ಕಸ ಸಂಗ್ರಹಿಸುವುದು ಎಲ್ಲ ಸೇರಿ ದರ ವಿಧಿಸಲಾಗುತ್ತದೆ ಎಂದು ಪರಿಸರ ಎಂಜಿನಿಯರ್‌ ಮಂಜುನಾಥ ಶೆಟ್ಟಿ ಸ್ಪಷ್ಟಪಡಿಸಿದರು.

ಬಾಡಿಗೆ ಅಂಗಡಿಯವರು ಅತಿಕ್ರಮ
ಪುರಸಭೆಯಿಂದ ಅಂಗಡಿ ಬಾಡಿಗೆಗೆ ಪಡೆದವರು ಅತಿಕ್ರಮ ಮಾಡುತ್ತಾರೆ. ಅವರ ಸಾಮಾಗ್ರಿಗಳನ್ನು ರಸ್ತೆಯಲ್ಲಿಯೇ ಇಡುವ ಕಾರಣ ಪಾದಚಾರಿಗಳಿಗೆ, ಬಸ್‌ ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂದು ರವಿರಾಜ್‌ ಖಾರ್ವಿ ಹೇಳಿದರು. ಇದಕ್ಕೆ ಶ್ರೀಧರ ಸೇರೆಗಾರ್‌, ಚಂದ್ರ ಅಮೀನ್‌, ಶಿವರಾಮ ಪುತ್ರನ್‌ ಮೊದಲಾದವರು ಬೆಂಬಲ  ವ್ಯಕ್ತಪಡಿಸಿ ತೆರವುಗೊಳಿಸುವ ಕಾರ್ಯ ನಡೆಯಬೇಕು ಎಂದರು. ಈವರೆಗೆ ಹೇಳಿದ್ದು ಯಾವುದೂ ಮಾಡಿಲ್ಲ. ಆದ್ದರಿಂದ ಇದಾದರೂ ಮಾಡಿ. ಅಧಿಕಾರದಿಂದ ಇಳಿದ ಬಳಿಕವಾದರೂ ಜನರಿಗೆ ನೆನಪಿರುತ್ತದೆ ಎಂದು ಚಂದ್ರಶೇಖರ್‌ ಖಾರ್ವಿ ಹೇಳಿದರು. ಅಧ್ಯಕ್ಷೆ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಥವಾ ಹೆಚ್ಚುವರಿ ಬಾಡಿಗೆ ವಿಧಿಸಲಾಗುವುದು ಎಂದರು. ಕೆಲವರು ಪುರಸಭಾ ಕಟ್ಟಡವನ್ನು ಅನುಮತಿರಹಿತವಾಗಿ ನವೀಕರಣ ಮಾಡಿದ್ದಾರೆ ಎಂದು ಪ್ರಭಾಕರ್‌ ಕೋಡಿ  ಹೇಳಿದರು.

Advertisement

ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚಿದ ಕಾಮಗಾರಿ ಬಾಬ್ತು 36 ಲಕ್ಷ ರೂ.ಗಳು ಅಸಮರ್ಪಕ ಟೆಂಡರ್‌ ಎಂದಾದ ಕಾರಣ ಗುತ್ತಿಗೆದಾರನಿಗೆ ನೀಡಲು ಅಸಾಧ್ಯ ಎಂದು ಪುರಸಭಾ ಮುಖ್ಯಾಧಿಕಾರಿ ಸ್ಪಷ್ಟಪಡಿಸುವದರೊಂದಿಗೆ ಬಹುಚರ್ಚಿತ ವಿಷಯವೊಂದು ಮತ್ತೆ ಕಡತಕ್ಕೆ ಸೇರಿ ಹೋಯಿತು.  ಟೆಂಡರ್‌ ನಿಯಮಾವಳಿ ಪ್ರಕಾರ ನಡೆಯದ ಕಾರಣ ಟೆಂಡರ್‌ ರದ್ದಾಗಿದ್ದು ಕಾಮಗಾರಿ ನಡೆದರೂ ಹಣ ನೀಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಟೆಂಡರ್‌ ನಡೆದರೆ ಮಾತ್ರ ಹಣ ನೀಡಲು ಸಾಧ್ಯ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ಪಷ್ಟಪಡಿಸಿದರು.

ಅಧ್ಯಕ್ಷೆ ವಸಂತಿ ಮೋಹನ ಸಾರಂಗ, ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಕುಂದರ್‌, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

54 ಲಕ್ಷ ರೂ.ಗಳ ಇಂಟರ್‌ಲಾಕ್‌ ವ್ಯರ್ಥವಾಗದಿರಲಿ
ಕುಂದಾಪುರ:
ಶಾಸ್ತ್ರಿ ಸರ್ಕಲ್‌ನಿಂದ ಪಾರಿಜಾತ ಸರ್ಕಲ್‌ ಚರ್ಚ್‌ ರೋಡ್‌ವರೆಗೆ ಎರಡೂ ಬದಿ 54 ಲಕ್ಷ ರೂ.ಗಳಲ್ಲಿ ಮಾಡಲಾಗುವ ಇಂಟರ್‌ಲಾಕ್‌ ಕಾಮಗಾರಿ ಅಸಮರ್ಪಕವಾಗುತ್ತಿದೆ. ಹಣ ವ್ಯರ್ಥವಾಗದಿರಲಿ ಎಂದು ಪುರಸಭೆ ಸದಸ್ಯ ಚಂದ್ರಶೇಖರ್‌ ಖಾರ್ವಿ ಹೇಳಿದರು. 

ಈ ಬಗ್ಗೆ  ಉದಯವಾಣಿ ವರದಿ ಮಾಡಿದೆ. ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಬೇಕಾದ್ದು ಆಡಳಿತದ ಕರ್ತವ್ಯ ಎಂದರು.  ಇದಕ್ಕೆ ಉತ್ತರಿಸಿದ ಎಂಜಿನಿಯರ್‌ ಸಹಾಯಕ ಕಮಿಷನರ್‌ ಅವರ ಸೂಚನೆ ಮೇರೆಗೆ ಕಾಮಗಾರಿ ಆರಂಭಿಸಲಾಗಿದೆ.  ಮಣ್ಣು ಕುಸಿದು ಇಂಟರ್‌ಲಾಕ್‌ ಕುಸಿದಲ್ಲಿ ಬದಲಿ ವ್ಯವಸ್ಥೆ ಮಾಡಿ ಇಂಟರ್‌ಲಾಕ್‌ ಹಾಕಲಾಗಿದೆ ಎಂದರು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದು ಉಪಾಧ್ಯಕ್ಷ ರಾಜೇಶ್‌ ಕಾವೇರಿ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next