ಶಹಾಪುರ: ನೀರು ಬಳಕೆದಾರ ಸಂಘಗಳ ಪದಾಧಿಕಾರಿಗಳು, ಸದಸ್ಯರು ನೀರು ಬಳಕೆ ಕುರಿತು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇದರಲ್ಲಿ ರೈತರ ಸಹಭಾಗಿತ್ವ ಅಗತ್ಯವಿದ್ದು, ರೈತರು ನೀರು ನಿರ್ವಹಣೆ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ತಿಳಿಸಿದರು.
ಭೀಮರಾಯನ ಗುಡಿ ಕೃಷಿ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಕೃಷ್ಣಾ ಕಾಡಾ (ಸಹಕಾರ ವಿಭಾಗ) ವತಿಯಿಂದ ನಡೆದ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿ ಕಾರಿಗಳು ಹಾಗೂ ಸದಸ್ಯರಿಗೆ ನೀರು ನಿರ್ವಹಣೆ, ಪುನಶ್ಚೇತನ ಕುರಿತ ಕಾರ್ಯಾಗಾರ ಉದ್ಘಾಟನೆ ಮತ್ತು ಬಳಕೆದಾರರ
ಸಂಘಗಳಿಗೆ ತಲಾ ಒಂದು ಲಕ್ಷ ರೂ. ಚೆಕ್ ವಿತರಿಸಿ ಅವರು ಮಾತನಾಡಿದರು.
ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸುವ ಕಾರ್ಯವಾಗಬೇಕಿದೆ. ನೀರು ಬಳಕೆಗೆ ಸಂಬಂಧಿಸಿದ ಅಧಿಕಾರಿ ಇಲಾಖೆಯೊಂದಿಗೆ ಒಡಂಬಡಿಕೆ ಮತ್ತು ನೀರಿನ ಹಂಚಿಕೆಯಲ್ಲಿ ಸಮಾನತೆ ತರುವ ಕಾರ್ಯ ಸೇರಿದಂತೆ ಭೂಮಿ ಮತ್ತು ನೀರಿನ ಉತ್ಪಾದಕತೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಬಳಕೆದಾರರ ಸಂಘ ಮತ್ತು ರೈತರಿಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವುದು. ಅದಕ್ಕೆ ಬೇಕಾದ ಸಮರ್ಪಕ ಕೆಲಸವನ್ನು ಸರ್ಕಾರದ ಜೊತೆ ಸಂಬ ಂಧಿಸಿದ ಇಲಾಖೆಯ ಮುಖ್ಯಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸುವ ಕಾರ್ಯ ಯೋಜನೆ ರೂಪಸಲಾಗುವುದು ಎಂದರು.
ಬಳಕೆದಾರರ ಸಂಘದ ಕಚೇರಿ ಹಾಗೂ ಗೋದಾಮು ನಿರ್ಮಾಣಕ್ಕೆ ಇಲಾಖೆಯಿಂದ 7.30 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಅದರಲ್ಲಿ ಸಂಘವು ಪ್ರತಿಶತ 20ರಂತೆ 1.46 ಲಕ್ಷ ರೂ. ಸಾಲ ಕೊಡಬೇಕಾಗುವುದು. ಅಲ್ಲದೇ ಮೂಲ ಸೌಕರ್ಯ ಒದಗಿಸಲು ಮೂರು ಲಕ್ಷ ರೂ. ವರೆಗೆ ಅನುದಾನ
ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸದ್ಯ ಶಹಾಪುರ, ಸುರಪುರ, ಜೇವರ್ಗಿ, ಸಿಂದಗಿ, ಇಂಡಿ ವ್ಯಾಪ್ತಿಯ 83 ನೀರು ಬಳಕೆದಾರರ ಸಂಘಗಳಿಗೆ ತಲಾ ಒಂದು ಲಕ್ಷ ರೂ. ಚೆಕ್ ವಿತರಿಸಲಾಗಿದೆ. ಬಳಕೆದಾರರ ಸಂಘಗಳ ಪದಾಧಿ ಕಾರಿಗಳು, ಸದಸ್ಯರು ಜಾಗೃತರಾಗಿ ಕಾರ್ಯ ನಿರ್ವಹಿಸುವ ಮೂಲಕ ಪ್ರಗತಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕೃಷ್ಣಾ ಕಾಡಾ ಆಡಳಿತಾ ಧಿಕಾರಿ ಶರಣಪ್ಪ ಬೆಣೂರ, ಕಾಡಾ ಮುಖ್ಯ ಲೆಕ್ಕಾ ಧಿಕಾರಿ ರಾಜಕುಮಾರ, ಕೃಷ್ಣಾ ಕಾಡಾ ಸಹಕಾರ ಸಂಘಗಳ ಸಹಾಯಕ
ನಿಬಂಧಕ ಮಹ್ಮದ್ ತಾಹೇರ ಹುಸೇನ್, ನೀರು ಬಳಕೆದಾರರ ಮಹಾ ಮಂಡಳ ಅಧ್ಯಕ್ಷ ರಂಗಣ್ಣ ಡೆಂಗಿ, ಕಾಡಾ ನಿರ್ದೇಶಕ ಬಾಗೇಶ ಓತಿನಮಡು
ಇದ್ದರು. ಕಾರ್ಯಗಾರದಲ್ಲಿ ಬಳಕೆದಾರರ ಸಂಘದ ಪದಾ ಕಾರಿಗಳು, ಸದಸ್ಯರು ಮತ್ತಿತರರು ಭಾಗವಹಿಸಿದ್ದರು.