Advertisement

ಎತ್ತಿನಹೊಳೆ ಬೇಕೇ ಬೇಕು: ಎಸ್‌.ರವಿ

06:10 AM Feb 08, 2018 | Team Udayavani |

ವಿಧಾನಪರಿಷತ್ತು: ಯಾರು ಏನೇ ಟೀಕೆ ಮಾಡಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಜನತೆಗೆ ಎತ್ತಿನಹೊಳೆ ಬೇಕೇ ಬೇಕು ಎಂದು ಕಾಂಗ್ರೆಸ್‌ ಸದಸ್ಯ ಎಸ್‌.ರವಿ ಹೇಳಿದರು.

Advertisement

ಒಬ್ಬ ರೈತನಾಗಿ ಆ ಭಾಗದ ಜನರ ಕಷ್ಟ ಏನೆಂಬುದು ನನಗೆ ಗೊತ್ತು. ಕುಡಿಯಲು, ಬೆಳೆಯಲು ನೀರಿಲ್ಲ. ಇರುವ ನೀರಿನಿಂದ ಕಾಯಿಲೆಗಳು ಬರುತ್ತಿವೆ. ಹಾಗಾಗಿ, ಎತ್ತಿನಹೊಳೆ ಯೋಜನೆ ಜಾರಿಯಾಗಲೇಬೇಕು. ಇದಕ್ಕಾಗಿ ಈವರೆಗೆ 2,560 ಕೋಟಿ ರೂ. ವೆಚ್ಚ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಪ್ರಸ್ತಾವನೆಯನ್ನು ಅನುಮೋದಿಸಿ ಮಾತನಾಡಿದ ಜಯಮಾಲ, ಹಿಂದೂಪರ, ಮುಸ್ಲಿಂ ಪರ ಎಂದು ಹೇಳಲಾಗುತ್ತದೆ. ಆದರೆ, ನಮ್ಮ ಸರ್ಕಾರ ಮನುಷ್ಯ ಪರ. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದರೆ ಮಾತೃ ಹೃದಯ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತೃ ಹೃದಯ ಇರುವುದರಿಂದಲೇ ಇಷ್ಟೊಂದು ಜನಪರ ಕಾರ್ಯಕ್ರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next