Advertisement
ಅಧಿ ಕಾರ ಇದ್ದಾಗ ಒಂದುರೀತಿ, ಇಲ್ಲದಾಗ ಇನ್ನೊಂದುರೀತಿ ಮಾಡುತ್ತಾ ಬಂದ, ಮತ್ತೆ ವಿವಿಧ ಪಕ್ಷಗಳ ಟಿಕೆಟ್ ಹಿಡಿದು ಚುನಾವಣೆಗೆ ನಿಂತವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ದೇಶದ 12 ಮಹತ್ವದ ಬಂದರು 7 ಸಾವಿರ ಕೋಟಿ ರೂ. ಪ್ರತಿವರ್ಷ ಲಾಭಗಳಿಸುತ್ತಿರುವುದರಿಂದ ಬೇಲೆಕೇರಿ ಸಹಿತ ಜಿಲ್ಲೆಯ ಮೂರು ಬಂದರು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳಿಸಿ 4ವರ್ಷಗಳಾಗಿದ್ದು ಸತ್ಯ. ಹಿಂದೆ ಯಡಿಯೂರಪ್ಪನವರು ತಮ್ಮ ಎರಡು ಆಯವ್ಯಯದಲ್ಲಿ ಈ ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ. ನಂತರ ಯಡಿಯೂರಪ್ಪನವರನ್ನು ಉದಯವಾಣಿ ಪ್ರಶ್ನಿಸಿದಾಗ, ನಾನು ಈ ಯೋಜನೆಗಳ ಕುರಿತು ಈಗಲೂ ಪ್ರಸ್ತಾಪ ಮಾಡುತ್ತಿದ್ದೇನೆ, ಜಿಲ್ಲೆಯವರಿಗೆ ಆಸಕ್ತಿ ಇಲ್ಲ ಅಂದಿದ್ದರು. ಹೀಗಿದ್ದರೂ ಗಡ್ಕರಿ ಹೇಳಿದ್ದು ಸುಳ್ಳು ಎಂದು ದೇಶಪಾಂಡೆಯವರು ಹೇಳುತ್ತಾರೆ.
Related Articles
Advertisement
ಹುಲಿಗಾಗಿ ರಸ್ತೆ ಬಿಡಬೇಕೇ? ಉತ್ತರ ಕನ್ನಡ ಸಹಿತ ಸುತ್ತಲಿನ ನಾಲ್ಕಾರು ಜಿಲ್ಲೆಗಳಿಗೆ ಉಪಯುಕ್ತವಾಗುವ ಮೇಲಿನ ಎರಡು ಯೋಜನೆಗಳ ಪ್ರಸ್ತಾಪ ಬಂದಾಗ ಈಗ ಚುನಾವಣೆಗೆ ಬೇರೆ ಬೇರೆ ಪಕ್ಷದಿಂದ ನಿಂತವರು ವಿರೋಧ ಮಾಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ದಿನಕರ ಶೆಟ್ಟಿ, ಪ್ರದೀಪ ನಾಯ್ಕ ಮತ್ತು ಕೆಲವು ಖಾವಿಧಾರಿಗಳು ಈ ಯೋಜನೆಗಳನ್ನು ಬಹಿರಂಗವಾಗಿ ವಿರೋಧಿ ಸಿದ್ದಾರೆ. ದೇಶಪಾಂಡೆ ಸಹಿತ ಕಾಂಗ್ರೆಸ್ಸಿಗರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಮೇಲಿನ ಎರಡು ಯೋಜನೆಗಳನ್ನು ಜಾರಿಗೆ ತರುತ್ತದೆ ಎಂದು ಗಡ್ಕರಿ ಸಹಿತ ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಚುನಾವಣೆಗೆ ನಿಂತವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.
5ಸಾವಿರ ಕೋಟಿ ರೂಪಾಯಿಯಲ್ಲಿ ಬೇಲೆಕೇರಿ ಬಂದರು ಅಭಿವೃದ್ಧಿಯ ಪ್ರಸ್ತಾವನೆ ಬಂದಿದ್ದು ಸತ್ಯ. ಅಕ್ರಮ ಅದಿರು ಪ್ರಕರಣ ಅಲ್ಲಿ ನಡೆದಿರುವುದರಿಂದ ಬಂದರು ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ನಾವು ತದಡಿ, ಪಾವಿನಕುರ್ವಾ ಬಂದರು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹಿರಿಯ ಸಚಿವ ಜಿಲ್ಲೆಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಮೀನುಗಾರರನ್ನು ಮುಂದಿಟ್ಟುಕೊಂಡು ಇಂತಹ ಯೋಜನೆಗಳನ್ನು ವೃತ್ತಿಪರ ಪರಿಸರ ವಾದಿಗಳು ಪ್ರತಿಭಟನೆ ಮಾಡುವುದು, ಅದಕ್ಕೆ ರಾಜಕಾರಣಿಗಳು ಒಗ್ಗರಣೆ ಹಾಕುವುದು ನಡೆಯುತ್ತಾ ಬಂದಿದೆ. ಚುನಾವಣೆಯ ಮೊದಲೇ ಜಿಲ್ಲೆಯ ಎಲ್ಲ ಪಕ್ಷದ ಅಭ್ಯರ್ಥಿಗಳು ಈ ಯೋಜನೆಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.
ಜೀಯು, ಹೊನ್ನಾವರ