Advertisement

ಕಾಳಸಂತೆ;ರೆಮ್ಡಿಸಿವಿರ್ ಖರೀದಿಗೂ ಮುನ್ನ ಅಸಲಿ/ನಕಲಿ ಚುಚ್ಚುಮದ್ದಿನ ಬಗ್ಗೆ ತಿಳಿದುಕೊಳ್ಳಿ…

12:06 PM Apr 27, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ ವೈರಸ್ ಪ್ರಕರಣ ಉಲ್ಬಣವಾಗುತ್ತಿರುವ ನಡುವೆಯೇ ಕೋವಿಡ್ ಸೋಂಕಿತರಿಗೆ ರೆಮ್ಡಿಸಿವಿರ್ ಚುಚ್ಚುಮದ್ದು ಬಳಕೆ ಮತ್ತು ಅದರ ಸೀಮಿತ ಪರಿಣಾಮದ ಬಗ್ಗೆ ತಜ್ಞರು ಹೇಳಿದ್ದರೂ ಕೂಡಾ ದೇಶದಲ್ಲಿ ರೆಮ್ಡಿಸಿವಿರ್ ಗೆ ಹೆಚ್ಚಿನ ಬೇಡಿಕೆ ಇದೆ. ಭಾರತ ಕೋವಿಡ್ ಸೋಂಕಿನ ತುರ್ತು ಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ಜನರು ಜನಸಾಮಾನ್ಯರಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಎಚ್ಚರಿಸಿದೆ.

Advertisement

ಕೋವಿಡ್ ಚಿಕಿತ್ಸೆಗೆ ರೆಮ್ಡಿಸಿವಿರ್ ಪರಿಣಾಮಕಾರಿ ಎಂದು ತಿಳಿಸಿತ್ತು. ಇದರ ಪರಿಣಾಮ ದೇಶದಲ್ಲಿ ಬ್ಲ್ಯಾಕ್ ಮಾರುಕಟ್ಟೆಯಲ್ಲಿ ರೆಮ್ಡಿಸಿವಿರ್ ಅನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಇದರಿಂದಾಗಿ ರೆಮ್ಡಿಸಿವಿರ್ ಕೊರತೆಗೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.

ರೆಮ್ಡಿಸಿವಿರ್ ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ನಕಲಿ ರೆಮ್ಡಿಸಿವಿರ್ ಔಷಧ ಸರಬರಾಜು ಮಾಡಲಾಗುತ್ತಿದ್ದು, ಮುಗ್ಧ ಜನರು ಇದನ್ನು ಖರೀದಿಸಲು ದುಪ್ಪಟ್ಟು ಹಣವನ್ನು ವಿನಿಯೋಗಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ರೆಮ್ಡಿಸಿವಿರ್ ಲಸಿಕೆಗೆ ಸಾಮಾನ್ಯ ಬೆಲೆ 899 ರೂಪಾಯಿ ಹಾಗೂ ರೆಮ್ಡಿಸಿವಿರ್ ಒಂದು ಚಿಕ್ಕ ಬಾಟಲಿ ಬೆಲೆ 5,400 ರೂಪಾಯಿ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 20 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ವಿವರಿಸಿದೆ.

ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಈ ಸಂದರ್ಭದಲ್ಲಿ ದೆಹಲಿ ಅಪರಾಧ ದಳದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಮೋನಿಕಾ ಭಾರದ್ವಾಜ್, ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಒರಿಜಿನಲ್ ಹಾಗೂ ಫೇಕ್ ರೆಮ್ಡಿಸಿವಿರ್ ನಡುವಿನ ವ್ಯತ್ಯಾಸದ ಬಗ್ಗೆ ಕೆಲವು ಪೋಸ್ಟ್ ಗಳನ್ನು ಟ್ವೀಟ್ ಮಾಡಿದ್ದಾರೆ.

Advertisement

ಅಸಲಿ ಮತ್ತು ನಕಲಿ ರೆಮ್ಡಿಸಿವಿರ್ ಪತ್ತೆ ಹಚ್ಚುವುದು ಹೇಗೆ?
1)ನಕಲಿ ರೆಮ್ಡಿಸಿವಿರ್ ಪ್ಯಾಕ್ ಮೇಲೆ ಇಂಜೆಕ್ಷನ್ ಹೆಸರಿನ ಮೊದಲು Rx ಎಂದು ನಮೂದಿಸಿರುವುದಿಲ್ಲ.

2)ಕ್ಯಾಪಿಟಲ್ ಲೆಟರ್ ದೋಷ: ಅಸಲಿ ರೆಮ್ಡಿಸಿವಿರ್ ಪ್ಯಾಕ್ ನ ಮೂರನೇ ಲೈನ್ ನಲ್ಲಿ 100 mg/Vialಎಂದು ಬರೆದಿರುವುದನ್ನು ಗಮನಿಸಿ, ಆದರೆ ನಕಲಿ ಪ್ಯಾಕ್ ನಲ್ಲಿ vial ಕ್ಯಾಪಿಟಲ್ ಅಕ್ಷರದ ದೋಷ ಪತ್ತೆಹಚ್ಚಬಹುದು.

3)Alignment error: ರೆಮ್ಡಿಸಿವಿರ್ ಅಸಲಿ ಮತ್ತು ನಕಲಿ ಚುಚ್ಚುಮದ್ದಿನ ಪ್ಯಾಕ್ ನಲ್ಲಿ ಉತ್ಪನ್ನದ ಬ್ರ್ಯಾಂಡ್ ಹೆಸರಿನ ಜೋಡಣೆಯ ದೋಷ ಗಮನಿಸಿ. ನಕಲಿ ಪ್ಯಾಕ್ ನಲ್ಲಿ ಅಂತರ ಹೆಚ್ಚಿದೆ, ಅಸಲಿ ಪ್ಯಾಕ್ ನಲ್ಲಿ ಕಡಿಮೆ ಅಂತರವಿದೆ.

4)ಬ್ರ್ಯಾಂಡ್ ಹೆಸರಿನಲ್ಲಿ ದೋಷ: ಕ್ಯಾಪಿಟಲ್ ಅಕ್ಷರ ದೋಷ ಬ್ರ್ಯಾಂಡ್ ಹೆಸರಿನ Vial ಎಂದು ನಮೂದಿಸಿದ್ದು, ನಕಲಿ ಪ್ಯಾಕ್ ನಲ್ಲಿ vial ಎಂದಿದೆ.

5)ವಾರ್ನಿಂಗ್ ಲೇಬಲ್ ಕೆಂಪು ಬಣ್ಣ: ರೆಮ್ಡಿಸಿವಿರ್ ಅಸಲಿ ಪ್ಯಾಕ್ ನಲ್ಲಿರುವ ವಾರ್ನಿಂಗ್ ಲೇಬಲ್ ಬಣ್ಣ ಕೆಂಪು, ಆದರೆ ನಕಲಿ ಪ್ಯಾಕ್ ನಲ್ಲಿ ವಾರ್ನಿಂಗ್ ಲೇಬಲ್ ಬಣ್ಣ ಕಪ್ಪು.

6)ಪ್ರಮುಖ ಮಾಹಿತಿ ಇಲ್ಲ: ರೆಮ್ಡಿಸಿವಿರ್ ಎಚ್ಚರಿಕೆಯ ಲೇಬಲ್ ಕೆಳಗೆ ಪ್ರಮುಖ ಮಾಹಿತಿ ನೀಡಲಾಗಿದೆ. ಕೋವಿಫಿರ್ (ಬ್ರ್ಯಾಂಡ್ ಹೆಸರು) ಅನ್ನು ಗಿಲೀಡ್ ಸೈನ್ಸ್ ನ ಪರವಾನಗಿ ಅಡಿಯಲ್ಲಿ ಉತ್ಪಾದಿಸಲಾಗಿದೆ ಎಂದು ಉಲ್ಲೇಖಿಸಿದ್ದು, ಇದು ನಕಲಿ ಪ್ಯಾಕ್ ನಲ್ಲಿ ನಮೂದಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next