Advertisement
ತಾಲೂಕಿನ ತೆಂಕಲಕೊಪ್ಪಲಿನ ಸಮುದಾಯ ಭವನದಲ್ಲಿ ಜೂ.18ರ ಭಾನುವಾರ ರೈತ ಸಂಘದ ರಾಜ್ಯದ್ಯಕ್ಷ ಬಡಕಲಪುರ ನಾಗೇಂದ್ರರ ಅಧ್ಯಕ್ಷತೆಯಲ್ಲಿ ಕೃಷಿಕರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಹೊಸದಾಗಿ ನಿರ್ಮಿಸಲುದ್ದೇಶಿಸಿರುವ ಶ್ರೀರಂಗಪಟ್ಟಣ-ಕುಶಾಲನಗರ ರಾಷ್ಟ್ರೀಯ 275 ರ ರಸ್ತೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ಭೂಮಿ ಹೋರಾಟ ಸಮಿತಿ ಅಧ್ಯಕ್ಷ ಅವಿನಾಶ್ ಮತ್ತಿತರರು ಮಾತನಾಡಿ ಮೈಸೂರು ತಾಲೂಕಿನ ರೈತರ ಜಮೀನಿಗೆ 1.20 ಕೋಟಿ ನಿಗದಿಗೊಳಿಸಿದ್ದಾರೆ.
Related Articles
Advertisement
ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ, ಒಂದು ಬಾರಿ ರೈತರು ಭೂಮಿ ಕಳೆದುಕೊಂಡಲ್ಲಿ ಮತ್ತೆ ಸಂಪಾದನೆ ಕಷ್ಟಸಾಧ್ಯವಾಗಿದ್ದು, ಭೂಮಿಗೆ ಏಕರೂಪ ದರ ನಿಗದಿಪಡಿಸಬೇಕು. ಇಲ್ಲವೇ ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರು ಹೆದ್ದಾರಿ ನಿರ್ಮಾಣಕ್ಕೆ ಜಿಲ್ಲೆಯ ಸಹಕಾರ ನೀಡುವುದಿಲ್ಲ, ಈಗಾಗಲೇ ಹೆದ್ದಾರಿ ಭೂಮಿ ವಶಪಡಿಸಿಕೊಳ್ಳುವುದರ ವಿರುದ್ದ ಯಾವುದೇ ಹೋರಾಟ, ನ್ಯಾಯಾಲಯ ಮೆಟ್ಟಿಲೇರಲೂ ಸಹ ಸಂಘ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಬೆಂಕಿಪುರಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಬೆಟ್ಟದೂರು ಮಂಜು, ನಾಗಣ್ಣ, ವೆಂಕಟೇಶ್, ವಿಷಕಂಠಪ್ಪ, ಗುಂಜೇಗೌಡ ಸೇರಿದಂತೆ 200 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.