Advertisement

ನೆಕ್ಲೇಸ್‌ಗಳ ಮಾಡರ್ನ್ ವರ್ಶನ್‌: ಚಾಕರುಗಳು

03:35 PM Dec 08, 2017 | |

ಮಹಿಳೆಯರ ಆಭರಣ ಪ್ರಿಯತೆಯ ಬಗ್ಗೆ ಹೆಚ್ಚಿನದೇನು ಹೇಳಬೇಕಾಗಿಲ್ಲ. ಅಡಿಯಿಂದ ಮುಡಿಯವರೆಗೆ ಧರಿಸುವ ಎಲ್ಲಾ ಆಭರಣಗಳೂ ಹೆಣ್ಣಿಗೆ ಪ್ರಿಯವೇ. ಅದರಲ್ಲಿಯೂ ಮುಖದ ಸೌಂದರ್ಯವನ್ನು ಹೆಚ್ಚಿಸುವ ನೆಕ್ಲೇಸುಗಳಂತೂ ಹೆಂಗಳೆಯರ ಫೇವರೇಟ್ ಆಗಿರುತ್ತವೆ.  ಈ ನೆಕ್ಲೇಸುಗಳ ಮಾಡರ್ನ್ ವರ್ಶನ್‌ ಎನಿಸಿದ ಚಾಕರುಗಳು ಮಾಡರ್ನ್ ಮಹಿಳೆಯರ ಅಥವಾ ಕಾಲೇಜ… ಹುಡುಗಿಯರ ಹಾಟ… ಫೇವರೇಟ್ ಎನಿಸಿವೆ. ಆಧುನಿಕ ದಿರಿಸುಗಳನ್ನು ಧರಿಸುವವರಿಗೆ ಈ ಚಾಕರುಗಳು ಇಷ್ಟವಾಗುತ್ತವೆ. ಸದ್ಯದ ಟ್ರೆಂಡಿ ಆಭರಣಗಳಲ್ಲಿ ಮುಂಚೂಣಿಯಲ್ಲಿರುವಂತಹ ಆಭರಣಗಳು ಚಾಕರುಗಳು. ಇವುಗಳು ನೆಕ್ಲೇಸುಗಳ ವಿಧಗಳಲ್ಲೊಂದಾಗಿದ್ದು ಮಾಡರ್ನ್ ದಿರಿಸುಗಳಿಗೆ ಹೆಚ್ಚು ಸೂಕ್ತವೆನಿಸುವಂತಿರುತ್ತವೆ. ಇವುಗಳು ಹಿಂದೆಯೂ ಇದ್ದಂತಹ ಆಭರಣವಾಗಿದ್ದು ಮತ್ತೆ ಮರಳಿ ಟ್ರೆಂಡಿ ರೇಸಿಗೆ ಸೇರಿಕೊಂಡವುಗಳಾಗಿವೆ. ಕುತ್ತಿಗೆಯ ಆಭರಣವೇ ಆಗಿದ್ದರೂ ಸಖತ್‌ ಮಾಡರ್ನ್ ಟಚ್‌ ಇರುವ ಅಂತೆಯೇ ಕ್ಲಾಸೀ ಲುಕ್ಕನ್ನು ನೀಡುವಂಥವುಗಳಾಗಿವೆ. ಅಂತಹ ಕೆಲವು ಚಾಕರ್‌ ಬಗೆಗಳ ಬಗೆಗಿನ ಮಾಹಿತಿಯನ್ನು ನೀಡಲಾಗಿದೆ.

Advertisement

1ಟ್ರಿಪಲ್ ಬ್ಲ್ಯಾಕ್‌ ಚಾಕರ್‌ಗಳು: ಹೆಸರಿಗೆ ತಕ್ಕಂತೆ ಇವುಗಳು ಕಪ್ಪು ಬಣ್ಣದ ಮೂರು ಸ್ಟ್ರಿಪ್‌ಗ್ಳಿಂದ ತಯಾರಿಸಲಾದ ಚಾಕರುಗಳು. ಕಪ್ಪು ಅಥವಾ ಕಾಂಟ್ರಾಸ್ಟ್ ಬಿಳಿ ಬಣ್ಣದ ಬಟ್ಟೆಗಳಿಗೆ ಚೆನ್ನಾಗಿ ಒಪ್ಪುತ್ತವೆ.

2ಚಾರ್ಮ್ ಚಾಕರ್‌ಗಳು: ಲಕ್ಕಿ ಚಾರ್ಮಳಲ್ಲಿ ನಂಬಿಕೆ ಇರುವಂಥವರ ಫೇವರೇಟ್ ಎನಿಸಿದ ಬಗೆಯ ಚಾಕರುಗಳಿವಾಗಿವೆ. ಲಕ್ಕಿ ನಂಬರುಗಳು ಅಥವಾ ಲಕ್ಕಿ ಲೆಟರುಗಳು, ಅಥವಾ ಲಕ್ಕಿ ಪೆಂಡೆಂಟುಗಳಿರುವ ಚಾಕರುಗಳನ್ನು ಚಾರ್ಮ್ ಚಾಕರುಗಳೆಂದು ಕರೆಯಬಹುದು. ಬಹಳ ಸಿಂಪಲ್ ಮತ್ತು ಸ್ಟೈಲಿಶ್‌ ಆದ ಲುಕ್ಕನ್ನು ಕೊಡುತ್ತವೆ. ಧರಿಸಲು ಕೂಡ ಬಹಳ ಆರಾಮದಾಯಕವಾಗಿರುತ್ತವೆ.

3ಮೆಟಲ್ ಚಾಕರ್‌: ಮೆಟಲ್ ಚಾಕರುಗಳು ನೋಡಲು ಸುಂದರವೂ ಹಾಗೂ ಆಕರ್ಷಕವಾದ ಮಾದರಿಗಳಲ್ಲಿ ದೊರೆಯುತ್ತವೆ. ಇವುಗಳು ಹಲವು ಡಿಸೈನುಗಳಲ್ಲಿ ಮತ್ತು ಬ್ಲ್ಯಾಕ್‌ ಮೆಟಲ್, ವೈಟ… ಮೆಟಲ್ ಅಥವಾ ಇಮಿಟೇಶನ್‌ ಗೋಲ್ಡ… ವಿಧಗಳಲ್ಲಿಯೂ ದೊರೆಯುತ್ತವೆ. ಈ ಚಾಕರುಗಳು ಕುತ್ತಿಗೆಗೆ ಹತ್ತಿರವಾಗಿ ತೊಡುವುದರಿಂದ ರಿಚ್‌ ಲುಕ್ಕನ್ನು ನೀಡುತ್ತವೆ. ಮತ್ತು ದಿರಿಸಿನ ನೆಕ್ಕನ್ನು ಹೈಲೈಟ್ ಮಾಡುತ್ತವೆ. ಬಟ್ಟೆಯ ಬಣ್ಣ ಮತ್ತು ಮುಖದ ಬಣ್ಣಗಳ ಮೇಲೆ ಚಾಕರುಗಳನ್ನು ಆಯ್ದುಕೊಳ್ಳುವುದು ಸೂಕ್ತವಾದುದು. ಇಷ್ಟೇ ಅಲ್ಲದೆ ಸ್ಪೈರಲ್ ಮೆಟಲ್ ಚಾಕರುಗಳೂ ದೊರೆಯುತ್ತವೆ.

4ಚೈನ್‌ ಚಾಕರ್‌: ಚೈನ್‌ ಮಾದರಿಯ ಚಾಕರುಗಳಿವು. ಇವುಗಳಲ್ಲಿ ಸಿಂಗಲ್ ಲೇಯರ್‌ ಮತ್ತು ಡಬಲ್ ಅಥವಾ ಮಲ್ಟಿ ಲೇಯರ್ಡ್‌ ಚೈನ್‌ ಚಾಕರುಗಳೂ ಲಭಿಸುತ್ತವೆ. ಇವುಗಳ ವಿಶೇಷತೆಯೆಂದರೆ, ಕೇವಲ ಮಾಡರ್ನ್ ಅಷ್ಟೇ ಅಲ್ಲದೆ ಫ್ಯೂಷನ್‌ ದಿರಿಸುಗಳಿಗೂ ಬಹಳ ಚೆಂದವಾಗಿ ಒಪ್ಪುತ್ತವೆ. ಚೈನ್‌ ಚಾಕರುಗಳಲ್ಲಿ ಲಾಂಗ್‌ ಚೈನ್‌ ಮತ್ತು ಚಾಕರುಗಳ ಮಿಕ…ನಂತಿರುವ ಮಾದರಿಗಳೂ ಕೂಡ ಲಭಿಸುತ್ತವೆ. ಮಲ್ಟಿ ಲೇಯರ್ಡ್‌ ಆಗಿರುವುದರಿಂದ ಹೆವಿ ಆಭರಣಗಳ ಭರಾಟೆಯಿಲ್ಲದೆಯೂ ಒಪ್ಪವಾದ ಲುಕ್ಕನ್ನು ಪಡೆಬಹುದಾಗಿದೆ.
 
5ಲೆದರ್‌ ಚಾಕರ್‌: ಲೆದರ್‌ ಬಟ್ಟೆಯಿಂದ ತಯಾರಿಸಲಾದ ಚಾಕರುಗಳಿವಾಗಿದ್ದು ಹಾಟ್ ಲುಕ್ಕನ್ನು ನೀಡುವಲ್ಲಿ ಮುಂದಿವೆ. ದಿರಿಸಿನ ಬಣ್ಣವನ್ನಾಧರಿಸಿ ಲೆದರ್‌ ಚಾಕರುಗಳ ಶೇಡನ್ನು ಆಯ್ಕೆಮಾಡುವುದು ಒಳಿತು. ಧರಿಸುವ ಟಾಪ್‌ ವೇರಿಗೆ ಹೊಂದಿಕೆಯಾಗುವ ಲೆದರ್‌ ಚಾಕರುಗಳನ್ನು ಧರಿಸಬಹುದು. ಪ್ಲೆ„ನ್‌ ಬೆಲ್ಟಿನಂತಹ ಅಥವಾ ಹೆಣೆದಿರುವಂತಹ ಮಾದರಿಗಳಲ್ಲಿಯೂ ದೊರೆಯುವುದರಿಂದ ಆಯ್ಕೆಗೆ ವಿಫ‌ುಲವಾದ ಆಯ್ಕೆಗಳಿರುತ್ತವೆ.

Advertisement

6ಲೇಸ್‌ ಚಾಕರ್‌: ಹೆಚ್ಚಾಗಿ ಬಿಳಿಯ ಅಥವಾ ಕಪ್ಪು ಬಣ್ಣದ ಲೇಸ್‌ ಚಾಕರುಗಳು ದೊರೆಯುತ್ತವೆ. ಲೇಸ್‌ ಫ್ಯಾಬ್ರಿಕ್‌ನಿಂದ ತಯಾರಿಸಲಾದ ಚಾಕರುಗಳಿವಾಗಿದ್ದು ಕಾಂಟ್ರಾಸ್ಟ್ ಬಣ್ಣದ ಮಾಡರ್ನ್ ಬಟ್ಟೆಗಳಿಗೆ ಸೂಕ್ತವೆನಿಸುತ್ತವೆ. ಕ್ಯಾಷುವಲ…ವೇರ್‌ ಅಥವಾ ಪಾರ್ಟಿವೇರ್‌ ಆಗಿಯೂ ಬಳಸಬಹುದು. ಇವುಗಳೂ ಕೂಡ ವಿವಿಧ ಡಿಸೈನುಗಳಲ್ಲಿ ಮತ್ತು ಅಳತೆಗಳಲ್ಲಿ ದೊರೆಯುತ್ತವೆ.

7ವೆಲ್ವೆಟ… ಚಾಕರ್‌: ಇವುಗಳು ಲೇಸ್‌ ಚಾಕರುಗಳಂತೆಯೇ ಪಟ್ಟಿಯಾಕಾರದಲ್ಲಿ ದೊರೆಯುವ ಚಾಕರುಗಳಾಗಿವೆ. ವೆಲ್ವೆಟ್ ಬಟ್ಟೆಯಿಂದ ತಯಾರಿಸಲ್ಪಟ್ಟಿರುತ್ತವೆ ಹಾಗೂ ಗ್ರ್ಯಾಂಡ್‌ ಲುಕ್ಕನ್ನು ನೀಡುತ್ತವೆ ಎನ್ನಬಹುದಾಗಿದೆ. ಇವುಗಳು ಎಲ್ಲಾ ಬಗೆಯ ಬಣ್ಣಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಪೆಂಡೆಂಟ… ಇರುವ ಅಥವ ಇಲ್ಲದಿರುವ ಎರಡೂ ಬಗೆಯ ಮಾದರಿಗಳೂ ದೊರೆಯುತ್ತವೆ.

8ಬೊ ಚಾಕರ್‌: ಹೆಸರಿಗೆ ತಕ್ಕಂತೆ ಪೆಂಡೆಂಟ್ ಬದಲು ಬೋ ಇರುವಂತಹ ಚಾಕರುಗಳು. ಇವುಗಳು ಕೇವಲ ದೊಡ್ಡವರಿಗಷ್ಟೇ ಅಲ್ಲದೆ ಮಕ್ಕಳಿಗೂ ಹೊಂದುತ್ತವೆ. ಬ್ರಾಡ್‌ ನೆಕ್ಕಿರುವ ದಿರಿಸುಗಳಿಗೆ ಈ ಬಗೆಯ ಬೊ ಚಾಕರುಗಳು ಸುಂದರವಾಗಿ ಕಾಣುತ್ತವೆ. ಲಾಂಗ್‌ ಗೌನುಗಳು ಅಥವಾ ಇನ್ನಿತರ ಯಾವುದೇ ಮಾಡರ್ನ್ ದಿರಿಸುಗಳಿಗೆ  ಹೊಂದಿಕೊಳ್ಳುತ್ತವೆ. ಬಟ್ಟೆಗಳಿಂದ ತಯಾರಿಸಿದ ಬೋಗಳು ದೊರೆಯುವುದರಿಂದ ಹಲವು ಬಣ್ಣಗಳಲ್ಲಿ ದೊರೆಯುವುದರಿಂದ ದಿರಿಸಿಗೆ ಮ್ಯಾಚಿಂಗ್‌ ಮಾಡಿ ಬಳಸಬಹುದು. ಈ ಬಗೆಯ ಚಾಕರುಗಳಲ್ಲಿ ಒಂದು ಬದಿಯಲ್ಲಿ ಬೋವನ್ನು ಅಂಟಿಸಿರಲಾಗಿರುತ್ತದೆ.

9ವೈರ್‌ ಚಾಕರ್‌: ವೈರ್‌ ಮಾದರಿಯಲ್ಲಿರುವ ಚಾಕರುಗಳು ಕಾಲೇಜ… ಹೆಣ್ಣುಮಕ್ಕಳ ಹಾಟ್ ಫೇವರೆಟ್ ಎನಿಸಿವೆ. ಈ ಚಾಕರುಗಳು ವೈಟ್ ಮೆಟಲ್, ಬ್ಲ್ಯಾಕ್‌ ಮೆಟಲ್ ಅಥವಾ ಗೋಲ್ಡ… ಮೂರು ಬಗೆಯಲ್ಲಿಯೂ ದೊರೆಯುತ್ತವೆ. ಇವುಗಳು ಧರಿಸಲು ಸುಲಭವೂ ಹಾಗೂ ಕುತ್ತಿಗೆಯನ್ನು  ಒಪ್ಪವಾಗಿ ಅಲಂಕರಿಸುತ್ತವೆ. ಎಲ್ಲಾ ಬಣ್ಣದ ಬಟ್ಟೆಗಳಿಗೂ ಮ್ಯಾಚ್‌ ಆಗುತ್ತವೆ.

10ಕ್ರಿಸ್ಟಲ್ ಚಾಕರ್‌: ಕ್ರಿಸ್ಟಲ್ ಬೀಡುಗಳನ್ನು ಪೋಣಿಸಿ ತಯಾರಿಸಲಾದ ಚಾಕರುಗಳು ಇವುಗಳಾಗಿದ್ದು ಬೇಕಾದ ಬಣ್ಣಗಳಲ್ಲಿ ಮತ್ತು ಬೇಕಾದ ಆಕಾರಗಳಲ್ಲಿ, ಬೇಕಾದ ಅಳತೆಗಳಲ್ಲಿ ದೊರೆಯುವುದರಿಂದ ಆಯ್ಕೆಗೆ ವಿಫ‌ುಲ ಅವಕಾಶಗಳಿವೆ. ಫ‌ಂಕಿ ಲುಕ್ಕನ್ನು ನೀಡುವುದರಿಂದ ಮಕ್ಕಳು  ಕೂಡ ಧರಿಸಬಹುದಾಗಿದೆ.

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next