Advertisement

Karnataka: ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಅಗತ್ಯ ತಿದ್ದುಪಡಿ: ಮಧು ಬಂಗಾರಪ್ಪ

11:44 PM Feb 13, 2024 | Pranav MS |

ಬೆಂಗಳೂರು: ಪ್ರಾಥಮಿಕ ಶಾಲೆಯಿಂದ ಭಡ್ತಿ ಪಡೆದ ಶಿಕ್ಷಕರಿಗೆ ಆಗುತ್ತಿರುವ ವೇತನ ತಾರತಮ್ಯ ನಿವಾರಣೆಗೆ ವೇತನ ಏರಿಕೆ (ಹೆಚ್ಚಳ) ನಿಯಮಗಳು/ಆದೇಶಗಳಿಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ವಿಧಾನಪರಿಷತ್‌ನಲ್ಲಿ ಮಂಗಳವಾರ ನಿಯಮ 330ರಡಿ ವಿಷಯ ಪ್ರಸ್ತಾವಿಸಿದ ಸದಸ್ಯರಾದ ಮರಿತಿಬ್ಬೇಗೌಡ, ಎಸ್‌.ಎಲ್‌.ಭೋಜೇಗೌಡ, ಎಸ್‌.ವಿ. ಸಂಕನೂರ, ಶಿಕ್ಷಕರಲ್ಲಿರುವ ಭಡ್ತಿ ತಾರತಮ್ಯ ಬಗೆಹರಿಸಬೇಕು. 6ನೇ ವೇತನ ಆಯೋಗದ ವರದಿ ಅನ್ವಯ ಭಡ್ತಿ ಪಡೆಯದೆ ಇರುವವರಿಗೆ 15-25 ವರ್ಷಗಳ ಕಾಲಮಿತಿ ಭಡ್ತಿ ನೀಡದಿರುವುದರ ಜತೆಗೆ 20-25 ವರ್ಷಗಳ ಸ್ವಯಂಚಾಲಿತ ವೇತನ ಭಡ್ತಿಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ ಪಪೂ ಕಾಲೇಜುಗಳಿಗೆ ಭಡ್ತಿ ಪಡೆದ ಶಿಕ್ಷಕರು, ಉಪನ್ಯಾಸಕರಿಗೆ ಇರುವ ವೇತನ ತಾರತಮ್ಯ ನನ್ನ ಗಮನಕ್ಕೂ ಬಂದಿದೆ. ಕಾಲಮಿತಿಯಲ್ಲಿ ಇದನ್ನು ಸರಿಪಡಿಸಲಾಗುವುದು. ಇದಕ್ಕಾಗಿ ವೇತನ ಏರಿಕೆ ನಿಯಮಗಳಿಗೆ ತಿದ್ದುಪಡಿ ತರುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next