ತಾವು ಈಗಾಗಲೇ ಸೇರಿಕೊಂಡಿರುವ ಕಾಲೇಜಿನ ಶೈಕ್ಷಣಿಕ ವಾತಾವರಣ ಸೇರಿ ಅನೇಕ ವಿಷಯಗಳು ಇಷ್ಟವಾಗದ ಕಾರಣ ಕಾಲೇಜು ತ್ಯಜಿಸಿ ಬೇರೆ ಕಾಲೇಜು ಸೇರಿಕೊಳ್ಳುವುದು ಸಹಜ. ಆದರೆ, ಇಂತಹ ವಿದ್ಯಾರ್ಥಿಗಳು ನೀಟ್‌ನಲ್ಲಿ ಉತ್ತಮ ಅಂಕ ಪಡೆದಿದ್ದರೂ ಸರ್ಕಾರಿ ಕೋಟಾದ ಸೀಟು ಸುಲಭವಾಗಿ ಪಡೆದುಕೊಳ್ಳಲು ಅವಕಾಶ ಇಲ್ಲದಾಗಿದೆ.
Advertisement
ನೀಟ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚನೆ ನೀಡಿದೆ. ಅದರಂತೆ ಸಾವಿರಾರು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪ್ರಾಧಿಕಾರ ನಡೆಸಿರುವಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಈ ಎರಡು ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಅನೇಕರು ಈಗಾಗಲೇ ದಾಖಲೆ ಪರಿಶೀಲನೆ ಮಾಡಿಸಿಕೊಂಡಿದ್ದಾರೆ.
ಈಗಾಗಲೇ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ನೀಟ್‌ನಲ್ಲಿ ಉತ್ತಮ ರ್‍ಯಾಂಕ್ ಬಂದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ, ಕಾಲೇಜು ಪ್ರವೇಶದ ಸಂದರ್ಭದಲ್ಲಿ ನೀಡಿರುವ ಮೂಲ ದಾಖಲೆಗಳನ್ನು ಕಾಲೇಜು ಆಡಳಿತ ಮಂಡಳಿ ನೀಡಲು ನಿರಾಕರಿಸುತ್ತಿದೆ. ಹಾಗೆಯೇ ಪ್ರಾಧಿಕಾರವು ಮೂಲ ದಾಖಲೆ ಇಲ್ಲದೇ ಪ್ರವೇಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಇದರಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ತಾವು ಬಯಸಿದ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ.
Related Articles
ಇಕ್ಕಟ್ಟಿನಲ್ಲಿ ಸಿಲುಕ್ಕಿದ್ದಾರೆ.
Advertisement
ಮೂಲ ದಾಖಲೆಗಳನ್ನು ಈಗಾಗಲೇ ಕಾಲೇಜಿಗೆ ನೀಡಲಾಗಿದೆ. ನೀಟ್‌ನಲ್ಲಿ ಉತ್ತಮ ರ್‍ಯಾಂಕ್ ಬಂದಿರುವ ಹಿನ್ನೆಲೆಯಲ್ಲಿ ಕಾಲೇಜು ಬದಲಾವಣೆಗೆ ಮುಂದಾಗಿದ್ದು, ಕಾಲೇಜು ಆಡಳಿತ ಮಂಡಳಿ ಮೂಲ ದಾಖಲೆ ನೀಡಲು ನಿರಾಕರಿಸುತ್ತಿದ್ದಾರೆ. ಕಸ್ಟಡಿ ಪ್ರಮಾಣ ಪತ್ರ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ಪ್ರಾಧಿಕಾರದ ಅಧಿಕಾರಿಗಳು ಕಸ್ಟಡಿ ಪ್ರಮಾಣಪತ್ರ ನಿರಾಕರಿಸುತ್ತಿದ್ದಾರೆ. ನಮ್ಮ ಇಚ್ಛೆಯ ಕಾಲೇಜಿನಲ್ಲಿ ಸೇರಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ ಎಂದುವಿದ್ಯಾರ್ಥಿಗಳು ನೋವು ಹೇಳಿಕೊಂಡರು. – ರಾಜು ಖಾರ್ವಿ