Advertisement

ಸ್ವಚ್ಚ ಭಾರತ ನಗರ ಅಭಿಯಾನ: 60.5 ಗೃಹ ಶೌಚಾಲಯ ನಿರ್ಮಾಣ

07:15 PM Nov 19, 2018 | Team Udayavani |

ಹೊಸದಿಲ್ಲಿ : ಸ್ವಚ್ಚ ಭಾರತ ನಗರ ಅಭಿಯಾನದಡಿ ದೇಶದಲ್ಲಿ ಸುಮಾರು 60.5 ಲಕ್ಷ  ಖಾಸಗಿ  60.5 ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು ಸೋಮವಾರ ತಿಳಿಸಿದೆ.

Advertisement

ಸಚವಾಲಯದ ಪ್ರಕಾರ ಈ ತನಕ 4.7 ಲಕ್ಷ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಭಿಯಾನದಡಿ 5.07 ಲಕ್ಷ ಸಾರ್ವಜನಿಕ ಶೌಚಾಲಯ ನಿರ್ಮಾಣದ ಗುರಿಯನ್ನು ಹಾಕಲಾಗಿತ್ತು ಎಂಬ ವಿಷಯ “ವಿಶ್ವ ಶೌಚಾಲಯ ದಿನ’ದ ಅಂಗವಾಗಿ ಬಿಡುಗಡೆ ಮಾಡಲಾಗಿರುವ ಮಾಹಿತಿಯಿಂದ ಗೊತ್ತಾಗಿದೆ. 

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಎಚ್‌ಯುಎ ಕಾರ್ಯದರ್ಶಿ ದುರ್ಗಾ ಶಂಕರ್‌ ಮಿಶ್ರಾ ಅವರು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಬಯಲು ಶೌಚ ಮುಕ್ತವಾಗಿವೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next