Advertisement

Operation Kaveri Success: ಸುಡಾನ್​​ನಿಂದ ಮರಳಿದ 3,800 ಭಾರತೀಯರು

03:29 PM May 05, 2023 | Team Udayavani |

ನವದೆಹಲಿ: ಖಾರ್ಟೂಮ್‌ನಿಂದ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಭಾರತವು ಆಪರೇಷನ್ ಕಾವೇರಿಯನ್ನು ತೀವ್ರಗೊಳಿಸಿದ್ದರಿಂದ ಭಾರತವು ಯುದ್ಧ ಪೀಡಿತ ಸುಡಾನ್‌ನಿಂದ ಸುಮಾರು 3800 ನಾಗರಿಕರನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ.

Advertisement

47 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ C-130J ವಿಮಾನವು ಜೆಡ್ಡಾದಿಂದ ದೆಹಲಿಗೆ ಹೊರಟಿದೆ. ಈ ಮೂಲಕ ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3800 ಜನರನ್ನು ಈಗ ಸುಡಾನ್‌ನಿಂದ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಇದಕ್ಕೂ ಮುನ್ನ, ಗುರುವಾರ, ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 192 ಭಾರತೀಯರು ಅಹಮದಾಬಾದ್‌ಗೆ ಬಂದಿಳಿದರು. ಅವರನ್ನು ಭಾರತೀಯ ವಾಯುಪಡೆಯ C17 ವಿಮಾನದಲ್ಲಿ ಅಹಮದಾಬಾದ್‌, ಗುಜರಾತ್‌ಗೆ ಕರೆತರಲಾಯಿತು.

ಅದೇ ದಿನ 20 ಭಾರತೀಯರ ಎರಡು ಬ್ಯಾಚ್‌ 18 ವಿಮಾನಗಳಲ್ಲಿ ಚೆನ್ನೈ ಮತ್ತು ಬೆಂಗಳೂರಿಗೆ ಬಂದಿದ್ದಾರೆ.


ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, 9 ದಿನಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ “ಆಪರೇಷನ್ ಕಾವೇರಿ” ಅಡಿಯಲ್ಲಿ ಒಟ್ಟು 3,584 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ.

Advertisement

ಭಾರತೀಯ ನೌಕಾಪಡೆಯ 5 ಹಡಗುಗಳು ಮತ್ತು 16 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ಕಾರ್ಯಾಚರಣೆಯನ್ನು ನಡೆಸಲಾಯಿತು, ಇದರಲ್ಲಿ ವಾಡಿ ಸಯ್ಯಿದ್ನಾ ಮಿಲಿಟರಿ ವಾಯುನೆಲೆ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next