Advertisement

ಜೂನ್ ನಲ್ಲಿ 120 ಮಿಲಿಯನ್ ನಷ್ಟು ಕೋವಿಡ್ ಲಸಿಕೆಗಳು ಲಭ್ಯ : ಕೇಂದ್ರ ಆರೋಗ್ಯ ಸಚಿವಾಲಯ

05:03 PM May 30, 2021 | Team Udayavani |

ನವ ದೆಹಲಿ : ಕೋವಿಡ್ ಲಸಿಕೆಯ ಕೊರತೆಯ ಆರೋಪಗಳು ಕೇಳಿ ಬರುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಜೂನ್ ನಲ್ಲಿ 120  ಮಿಲಿಯನ್ ಡೋಸ್ ನಷ್ಟು ಕೋವಿಡ್ ಲಸಿಕೆಗಳು ಲಭ್ಯವಿರಲಿದೆ ಎಂದು ತಿಳಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಮೇ ತಿಂಗಳಲ್ಲಿ 79.4 ಮಿಲಿಯನ್ ಡೋಸ್ ಗಳು ಲಭ್ಯವಿದ್ದವು. ಜೂಣ್ ನಲ್ಲಿ 120 ಮಿಲಿಯನ್ ನಷ್ಟು ಲಸಿಕೆಗಳೂ ಲಭ್ಯವಿರಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳ ಸರಬರಾಜು ಹಂಚಿಕೆಯನ್ನು ಬಳಕೆಯ ಮಾದರಿ, ಜನಸಂಖ್ಯೆ ಮತ್ತು ಲಸಿಕೆ ವ್ಯರ್ಥದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಮಹಿಳಾ ಲೊಕೋ ಪೈಲಟ್ ಶಿರಿಶಾ ಕಾರ್ಯಕ್ಕೆ ಮೋದಿ ಶ್ಲಾಘನೆ

ಜೂನ್ ನಲ್ಲಿ ಒಟ್ಟು 6.09 ಕೋಟಿ ಲಸಿಕೆಗಳನ್ನು ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳ ವ್ಯಧ್ಯಕೀಯ ಸಿಬ್ಬಂದಿಗಳಿಗೆ, ಫ್ರಂಟ್ ಲೈನ್ ವರ್ಕರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಉಚಿವಾಗಿ ಕೇಂದ್ರ ಸರ್ಕಾರ ಸರಬರಾಜು ಮಾಡಲಿದೆ ಎಂದು ಮಾಹಿತಿ ನೀಡಿದೆ.

ಉಳಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 5.86 ಕೋಟಿ ಲಸಿಕೆಗಳ ಡೋಸ್ ಗಳು ಲಭ‍್ಯವಿರಲಿದೆ. ಒಟ್ಟ್ಉ ಜೂನ್ ನಲ್ಲಿ ಒಟ್ಟು ಹತ್ತಿರ ಹತ್ತಿರ 120 ಮಿಲಿಯನ್ (11, 95, 70,000)  ಕೋವಿಡ್ ಲಸಿಕೆ ಡೋಸ್ ಗಳು ಲಭ‍್ಯವಿರಲಿದೆ ಎಂದು ಸಚಿವಾಲಯ ತಿಳಿಸಿದೆ.

Advertisement

ಇನ್ನು, ಮೂರನೇ ಹಂತದ ಅಂದರೆ 18-44ವರ್ಷದವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಪೂರೈಕೆ ಮಾಡುವುದಿಲ್ಲ. ಲಸಿಕೆ ಉತ್ಪಾದಕರಿಂದ ರಾಜ್ಯ ಸರ್ಕಾರಗಳು ನೇರವಾಗಿ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿಯೇ ಇದ್ದು, ಆದಷ್ಟು ಶೀಘ್ರದಲ್ಲೇ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಅಭಯ ನೀಡಿದೆ.

 ಇದನ್ನೂ ಓದಿ : ನರಕದಲ್ಲಿ ಕೂಡಿ ಹಾಕಿದ್ದಾರೆ, ಮನೆಗೆ ಕಳ್ಸಿ: ಸೋಂಕಿತ ಮಹಿಳೆಯ ಗೋಳಾಟ

Advertisement

Udayavani is now on Telegram. Click here to join our channel and stay updated with the latest news.

Next