Advertisement

ಎನ್‌ಡಿಟೀವಿಯ 100 ನೌಕರರಿಗೆ ಅರ್ಧಚಂದ್ರ

05:30 AM Jul 26, 2017 | Karthik A |

ನವದೆಹಲಿ: ಅಚ್ಚರಿಯ ಕ್ರಮವೊಂದರಲ್ಲಿ ರಾಷ್ಟ್ರೀಯ ಸುದ್ದಿವಾಹಿನಿ ನ್ಯೂಡೆಲ್ಲಿ ಟೆಲಿವಿಷನ್‌ (ಎನ್‌ಡಿಟೀವಿ) ಸುಮಾರು 100 ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಹಿರಿಯ ಕ್ಯಾಮೆರಾಮನ್‌ಗಳು ಸೇರಿ ಹಲವರು ಕೆಲಸ ಕಳೆದುಕೊಂಡಿದ್ದಾರೆ.

Advertisement

ದೆಹಲಿ ಮತ್ತು ಮುಂಬೈ ಕಚೇರಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ತಾಂತ್ರಿಕ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ. ಮುಂದಿನ ಸುತ್ತಿ ನಲ್ಲಿ ಸಂಪಾದಕೀಯ ವಿಭಾಗದ ಹಲವರಿಗೆ ಗೇಟ್‌ಪಾಸ್‌ ಕೊಡಬಹುದು ಎನ್ನಲಾಗಿದೆ. ಮೊಬೈಲ್‌ ಪತ್ರಿಕೋದ್ಯಮದತ್ತ ಚಾನೆಲ್‌ ತೆರೆದುಕೊಳ್ಳುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next