Advertisement
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಕಿ ತಂಡವನ್ನು ಬಗ್ಗು ಬಡಿದ ವಿಶ್ವದ 6ನೇ ಶ್ರೇಯಾಂಕಿತ ಭಾರತೀಯ ತಂಡ ನಂತರ ನಡೆದ 14ನೇ ಸ್ಥಾನದಲ್ಲಿರುವ ಮಲೇಷ್ಯಾ, 11ನೇ ಶ್ರೇಯಾಂಕದ ಕೆನಡಾ ಹಾಗೂ ನೆದರ್‌ಲ್ಯಾಂಡ್ ವಿರುದ್ಧ ತನ್ನ ನೈಜ ಆಟ ಪ್ರದರ್ಶನ ಮಾಡುವಲ್ಲಿ ವಿಫಲವಾಗಿದೆ. ಇಂತಹ ಪರಿಸ್ಥಿತಿ ಇದೊಂದೆ ಟೂರ್ನಿಗೆ ಸೀಮಿತವಾಗಿಲ್ಲ. ಕಳೆದ ಹಲವು ಮಹತ್ವದ ಟೂರ್ನಿಗಳಲ್ಲಿ ಹೇಳಿಕೊಳ್ಳುವಂ ತ ಸ್ಥಾನಕ್ಕೆ ನೂ ಏರಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಪ್ರಯೋಗಾತ್ಮಕ ಆಟಕ್ಕೆ ಮುಂದಾಗುತ್ತಿದೆಯೇ ಹೊರತು ತಂತ್ರಗಾರಿಕೆಯ ಗೋಲು ಹೂಡೆವಲ್ಲಿ ವಿಫಲವಾಗುತ್ತಿದೆ.
ಹಾಕಿಯೇ ಉಸಿರು ಎನಿಸಿಕೊಂಡಿರುವ ಭಾರತೀಯ ಹಾಕಿ ತಂಡದಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಲೀಗ್ ಟೂರ್ನಿಗೆ ಭಾರತೀಯ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡೀತೆ? ಹೌದು, ಇದೇ ಸಾಲಿನಲ್ಲಿ ನಡೆದಿದ್ದ ಸುಲ್ತಾನ್ ಆಜಾÉನ್ ಷಾ ಕಪ್‌ನಲ್ಲಿ ಭಾರತ ತಂಡ ಸೆಮಿ ಫೈನಲ್‌ವರೆಗೂ ತಲುಪಿ ಕಂಚಿ ನ ಪದಕ ಪಡೆದುಕೊಂಡಿತ್ತು. ಅದೇ ತಂಡವನ್ನು ವಿಶ್ವ ಲೀಗ್‌ಗೂ ಉಳಿಸಿಕೊಂಡಿದ್ದರೆ ಟೂರ್ನಿಯಲ್ಲಿ ಇನ್ನೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂದಿನ ವರ್ಷ ನಡೆಯುವ ವಿಶ್ವ ಕಪ್ ಹಾಕಿಗೆ ನೇರ ಪ್ರವೇಶ ಪಡೆಯಬಹುದಿತ್ತೆಂಬುವುದು ಕ್ರೀಡಾ ಪಂಡಿತರ ಮಾತು. ವಿಫಲವಾಯಿತೆ ಓಲ್ಟಮನ್ಸ್ ತರಬೇತಿ?
ಯಾ ವಾ ಗಲೂ ಪ್ರಯೋಗಗಳಿಗೆ ಒತ್ತು ನೀಡುವ ಭಾರತೀಯ ಹಾಕಿ ತಂಡದ ತರಬೇತುದಾರ ಡ ಚ್ ಮೂಲದ ರೊಲಂಟ್ ಓಲ್ಟಮನ್ಸ್ ತಂತ್ರಗಾರಿಕೆ ಹೆಣೆಯುವಲ್ಲಿ ವಿಫಲವಾಗುತ್ತಿದ್ದಾರೆ ಎಂಬ ಮಾತುಗಳು ಸೋಲಿನ ಬಳಿಕ ಕೇಳಿ ಬರುತ್ತಿದೆ.
Related Articles
Advertisement
ಅವರ ಬಳಿಕ ಬಂದ ಕೋಚ್ ಅವಧಿಯಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಹಾಕಿ ತಂಡ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವುದು ಬೇಸರದ ಸಂಗತಿ.
2014ರಿಂದ 2017ರವೆರೆಗಿನ ತಂಡದ ಸಾಧನೆವರ್ಷ ಟೂರ್ನಿ ಸ್ಥಾನ
2014 ಕಾಮನ್‌ವೆಲ್ತ್ 2
2014 ಏಷ್ಯನ್ ಗೇಮ್ಸ್ ಚಿನ್ನ
2014 ವಿಶ್ವಕಪ್ 9
2014-15 ವಿಶ್ವಕಪ್ ಲೀಗ್ 3
2014 ಚಾಂಪಿಯನ್ ಟ್ರೋಫಿ 4
2016 ರಿಯೋ ಒಲಿಂಪಿಕ್ಸ್ 8
2016 ಏಷ್ಯನ್ ಚಾಂಪಿಯನ್ ಟ್ರೋಫಿ ಚಿನ್ನ
2017 ಆಜ್ಲಾನ್ ಷಾ ಕಪ್ ಕಂಚು
2017 ವಿಶ್ವಕಪ್ ಲೀಗ್ 6 250 ಟೂರ್ನಿಯಲ್ಲಿ ಬಳಸಲಾಗುವ ಬಾಲ್ ಬಾಯ್ಸ , ಗರ್ಲ್ಸ್ ಸಂಖ್ಯೆ
14,979 ವಿಂಬಲ್ಡನ್ ಸೆಂಟರ್‌ಕೋರ್ಟ್‌ನಲ್ಲಿರುವ ಸೀಟ್‌ಗಳು
39,000 ಆಲ್‌ಇಂಗ್ಲೆಂಡ್ ಕ್ಲಬ್‌ನ ಒಟ್ಟಾರೆ ಸೀಟಿಂಗ್ ಸಾಮರ್ಥ್ಯ
54,250 2016ರ ಚಾಂಪಿಯನ್‌ಶಿಪ್‌ನಲ್ಲಿ ಬಳಸಿದ ಒಟ್ಟು ಟೆನಿಸ್ ಚೆಂಡುಗಳ ಲೆಕ್ಕ
1,40,000 ಕಳೆದ ಬಾರಿ ಮಾರಾಟ ಮಾಡಲಾದ ಸ್ಟ್ರಾಬೆರಿಗಳ ಸಂಖ್ಯೆ
3,20,000 ವಿಂಬಲ್ಡನ್‌ನಲ್ಲಿ ಹಿಂದಿನ ವರ್ಷ ಮಾರಾಟವಾದ ಪಿಮ್ ಡ್ರಿಂಕ್ ಗ್ಲಾಸ್‌ಗಳ ಸಂಖ್ಯೆ. ಪಿಮ್ ಎಂಬುದು ಹಣ್ಣು ಹಾಗೂ ಐಸ್ ಬೆರೆತ ಒಂದು ಆಲ್ಕೋಹಾಲಿಕ್ ಪೇಯ!
3,16,00,000 2017ರ ವಿಂಬಲ್ಡನ್ ಬಹುಮಾನದ ಮೊತ್ತ, ಪೌಂಡ್‌ನಲ್ಲಿ ದೇವಲಾಪುರ ಮಹದೇವಸ್ವಾಮಿ