Advertisement
ಮುಂಬಯಿಯ ಪ್ರತಿಭಾನ್ವಿತ ಆರಂಭಕಾರ ಪೃಥ್ವಿ ಶಾ ನಾಯಕತ್ವ ಹೊಂದಿರುವ ಭಾರತ ತಂಡ, “ಗೋಡೆ’ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿದೆ. ಕಳೆದ ಸಲ ಫೈನಲ್‌ನಲ್ಲಿ ವೆಸ್ಟ್ ಇಂಡೀಸಿಗೆ ಶರಣಾಗಿದ್ದ ಭಾರತ, ಈ ಬಾರಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ದ್ರಾವಿಡ್ ಅವರದು.
Related Articles
ಜಾಸನ್ ಸಂಗ ನೇತೃತ್ವ ಹೊಂದಿರುವ ಆಸ್ಟ್ರೇಲಿಯ ಕೂಡ ಬಲಿಷ್ಠ ತಂಡ. ಮಾಜಿ ಕ್ರಿಕೆಟಿಗ ಸ್ಟೀವ್ ವೋ ಪುತ್ರ ಆಸ್ಟಿನ್ ವೋ, “ಕ್ರಿಕೆಟ್ ಆಸ್ಟ್ರೇಲಿಯ’ದ ಸಿಇಒ ಜೇಮ್ಸ್ ಸದರ್‌ಲ್ಯಾಂಡ್ ಅವರ ಪುತ್ರ ವಿಲ್ ಸದರ್‌ಲ್ಯಾಂಡ್ ಅವರೆಲ್ಲ ತಂಡದ ಆಕರ್ಷಣೆಗಳಾಗಿದ್ದಾರೆ. ಚಂಡೀಗಢ ಮೂಲದ ಆಲ್‌ರೌಂಡರ್ ಪರಮ್ ಉಪ್ಪಲ್ ಭಾರತದೆದುರು ಆಡುವುದನ್ನು ಕಾತರದಿಂದ ಕಾಯುತ್ತಿದ್ದಾರೆ.
Advertisement
ಭಾರತ 3 ಸಲ ಚಾಂಪಿಯನ್ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಈವರೆಗೆ 3 ಸಲ ಚಾಂಪಿಯನ್ ಆಗಿದೆ. ಈ ಫೈನಲ್ ಪಂದ್ಯಗಳತ್ತ ಇಣುಕು ನೋಟ… 2008: ಲಂಕೆಗೆ ತವರಲ್ಲೇ ಆಘಾತ
ಭಾರತ ಮೊದಲ ಸಲ ಕಿರಿಯರ ವಿಶ್ವಕಪ್ ಚಾಂಪಿಯನ್ ಆಗಿ ಮೂಡಿಬಂದದ್ದು 2000ದ 3ನೇ ಪಂದ್ಯಾವಳಿಯಲ್ಲಿ. ಕೊಲಂಬೊದಲ್ಲಿ ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಮೊಹಮ್ಮದ್ ಕೈಫ್ ಸಾರಥ್ಯದ ಭಾರತ ಆತಿಥೇಯ ಶ್ರೀಲಂಕಾವನ್ನೇ ಉರುಳಿಸಿ ಟ್ರೋಫಿ ಎತ್ತಿದ್ದು ವಿಶೇಷ. ಭಾರತದ ಗೆಲುವಿನ ಅಂತರ 6 ವಿಕೆಟ್. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 48.1 ಓವರ್‌ಗಳಲ್ಲಿ 178 ರನ್ನಿಗೆ ಸರ್ವಪತನ ಕಂಡಿತು. ಜೆಹಾನ್ ಮುಬಾರಕ್ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (58). ಶಲಭ್ ಶ್ರೀವಾಸ್ತವ 3 ವಿಕೆಟ್ ಕಿತ್ತರು. ಜವಾಬಿತ್ತ ಭಾರತ 40.4 ಓವರ್‌ಗಳಲ್ಲಿ 4 ವಿಕೆಟಿಗೆ 180 ರನ್ ಬಾರಿಸಿ ಇತಿಹಾಸ ನಿರ್ಮಿಸಿತು. ಅಜೇಯ 39 ರನ್ ಮಾಡಿದ ರಿತೀಂದರ್ ಸೋಧಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ನೀರಜ್ ಪಟೇಲ್ (ಅಜೇಯ 34) ಜತೆ ಮುರಿಯದ 5ನೇ ವಿಕೆಟಿಗೆ 64 ರನ್ ಪೇರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಯುವರಾಜ್ ಸಿಂಗ್ ಸರಣಿಶ್ರೇಷ್ಠರೆನಿಸಿದರು. 2008: ಕೊಹ್ಲಿ ಪಡೆಯ ಕಾರುಬಾರು
ಭಾರತ 2ನೇ ಸಲ ಚಾಂಪಿಯನ್ ಎನಿಸಿದ್ದು 2008ರ ಮಲೇಶ್ಯ ಪಂದ್ಯಾವಳಿಯಲ್ಲಿ. ತಂಡದ ನಾಯಕರಾಗಿದ್ದವರು ವಿರಾಟ್ ಕೊಹ್ಲಿ. ಫೈನಲಿಗೆ ಬಂದ ತಂಡ “ಚೋಕರ್’ ದಕ್ಷಿಣ ಆಫ್ರಿಕಾ. ಚೇಸಿಂಗ್ ವೇಳೆ ಮಳೆ ಸುರಿದುದರಿಂದ ಡಿ-ಎಲ್ ನಿಯಮ ಅಳವಡಿಸಲಾಯಿತು. ಆಫ್ರಿಕಾ 12 ರನ್ನುಗಳಿಂದ ಲಾಗ ಹಾಕಿತು! ಮೊದಲು ಬ್ಯಾಟಿಂಗ್ ಮಾಡಿದ ಭಾರತ 45.4 ಓವರ್‌ಗಳಲ್ಲಿ 159 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಪಾರ್ನೆಲ್, ಅರ್ನಾಲ್ಡ್, ಆ್ಯಡಮ್ಸ್ ತಲಾ 2 ವಿಕೆಟ್ ಹಾರಿಸಿದರು. ಭಾರತದ ಪರ ತನ್ಮಯ್ ಶ್ರೀವಾಸ್ತವ ಸರ್ವಾಧಿಕ 46 ರನ್ ಹೊಡೆದರು. ಮಳೆಯಿಂದ ದಕ್ಷಿಣ ಆಫ್ರಿಕಾ ಗುರಿಯನ್ನು 25 ಓವರ್‌ಗಳಲ್ಲಿ 116 ರನ್ನಿಗೆ ಪುನರ್ ನಿಗದಿಗೊಳಿಸಲಾಯಿತು. ವೇನ್ ಪಾರ್ನೆಲ್ ಪಡೆಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 103 ರನ್ ಮಾತ್ರ. 7 ರನ್ನಿಗೆ 2 ವಿಕೆಟ್ ಕಿತ್ತ ಅಜಿತೇಶ್ ಅರ್ಗಾಲ್ ಪಂದ್ಯಶ್ರೇಷ್ಠ, ನ್ಯೂಜಿಲ್ಯಾಂಡಿನ ಟಿಮ್ ಸೌಥಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2012: ಆಸೀಸ್‌ಗೆ ಮುಖಭಂಗ
ಭಾರತದ 3ನೇ ವಿಶ್ವ ಕಿರೀಟ ಪಟ್ಟ ಹೆಚ್ಚು ಸ್ಮರಣೀಯ. ಕಾರಣ, 2012ರ ಈ ಕೂಟದಲ್ಲಿ ಉನ್ಮುಕ್¤ ಚಂದ್ ಪಡೆ ಆಸ್ಟ್ರೇಲಿಯವನ್ನು ಅವರ ತವರಿನಲ್ಲೇ ಸದೆಬಡಿದಿತ್ತು. ಟೌನ್ಸ್‌ವಿಲ್ಲೆಯಲ್ಲಿ ನಡೆದ ಈ ಫೈನಲ್‌ನಲ್ಲಿ ಭಾರತದ ಗೆಲುವಿನ ಅಂತರ 6 ವಿಕೆಟ್. ಆಸ್ಟ್ರೇಲಿಯ 8 ವಿಕೆಟಿಗೆ 225 ರನ್ ಗಳಿಸಿದರೆ, ಕಪ್ತಾನ ಉನ್ಮುಕ್¤ ಚಂದ್ ಅವರ ಅಜೇಯ 111 ರನ್ ಸಾಹಸದಿಂದ ಭಾರತ 47.4 ಓವರ್‌ಗಳಲ್ಲಿ 4 ವಿಕೆಟಿಗೆ 227 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಆರಂಭಿಕನಾಗಿ ಇಳಿದ ಚಂದ್ 130 ಎಸೆತಗಳನ್ನೆದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ಬಾರಿಸಿ ಕಾಂಗರೂ ದಾಳಿಯನ್ನು ಧೂಳೀಪಟ ಮಾಡಿದರು. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಭಾರತದ ಪರ ಸಂದೀಪ್ ಶರ್ಮ 4 ವಿಕೆಟ್ ಉಡಾಯಿಸಿದರು. ಸರಣಿಶ್ರೇಷ್ಠ ಗೌರವ ಆಸ್ಟ್ರೇಲಿಯದ ಸ್ಪಿನ್ನರ್ ವೊಲಿಯಂ ಬೊಸಿಸ್ಟೊ ಪಾಲಾಯಿತು. ಅಂಡರ್-19 ವಿಶ್ವಕಪ್: ರವಿವಾರದ ಪಂದ್ಯಗಳು
ಪಂದ್ಯ ಸ್ಥಳ ಆರಂಭ
ಅಯರ್‌ಲ್ಯಾಂಡ್-ಶ್ರೀಲಂಕಾ ವಾಂಗರಿ ಬೆಳಗ್ಗೆ 3.00
ಕೀನ್ಯಾ-ದಕ್ಷಿಣ ಆಫ್ರಿಕಾ ಲಿಂಕನ್ ಬೆಳಗ್ಗೆ 3.00
ಭಾರತ-ಆಸ್ಟ್ರೇಲಿಯ ಮೌಂಟ್ ಮಾಂಗನೂಯಿ ಬೆಳಗ್ಗೆ 5.30