ಸಂಸದೀಯ ಹಣಕಾಸು ಸಮಿತಿ ಅಧ್ಯಕ್ಷ ಎಂ. ವೀರಪ್ಪಮೊಯ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೃತೀಯ ರಂಗಗಳು ನಿರ್ಣಾಯಕ
ಧೋರಣೆ ತಾಳಿಲ್ಲ.
Advertisement
ಮುಂಬರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ನಡೆಯಲಿದೆ. ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಸೀಟು ಹಂಚಿಕೆ ಮಾಡಲಾಗುವುದು ಎಂದರು. ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಕುರಿತು ಸಮಗ್ರಮಾಹಿತಿ ಪಡೆಯಲಾಗಿದ್ದು, ಕೇಂದ್ರ ಸರಕಾರ ಜಿಲ್ಲೆಗೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಎಲ್ಲ ನಷ್ಟವನ್ನು ತುಂಬಲು ರಾಜ್ಯ ಸರಕಾರದಿಂದಷ್ಟೇ ಸಾಧ್ಯವಿಲ್ಲ. ಕೇಂದ್ರವು ಎನ್‌ಡಿಆರ್‌ಎಫ್ ಪರಿಹಾರ ಕಾರ್ಯವನ್ನು ಕೈಗೊಂಡರೆ ಮಾತ್ರ ಸಾಲದು, ವಿಶೇಷ ಪ್ಯಾಕೇಜನ್ನು ಘೋಷಿಸುವ ಅಗತ್ಯವಿದೆ. ಮತ್ತೂಂದು ಜಿಯಾಲಜಿಕಲ್ ಸರ್ವೆಯ ಅನಿವಾರ್ಯತೆಯೂ ಇದೆ ಎಂದರು.