Advertisement

ಎನ್‌ಡಿಎ ಸಂಸದರಿಂದ ವೇತನ ತ್ಯಾಗ: ಸಚಿವ ಅನಂತಕುಮಾರ್‌ 

12:33 PM Apr 05, 2018 | Team Udayavani |

ನವದೆಹಲಿ: ಸಂಸತ್‌ನಲ್ಲಿ ಕಲಾಪ ನಡೆಯದೇ ಇರುವ ಹಿನ್ನೆಲೆಯಲ್ಲಿ 23 ದಿನಗಳ ವೇತನ ಸ್ವೀಕರಿಸದೇ ಇರಲು ಎನ್‌ಡಿಎ ಸಂಸದರು ನಿರ್ಧರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳಿಗೆ ಮುಜುಗರ ಉಂಟು ಮಾಡುವ ಹೊಸ ತಂತ್ರವನ್ನು ಕೇಂದ್ರ ಪ್ರಯೋಗಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ನವದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ಮೋದಿ ಮತ್ತು ಎನ್‌ಡಿಎಯ ಇತರ ಮೈತ್ರಿ ಪಕ್ಷಗಳ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

Advertisement

ಸಂಸತ್‌ನಲ್ಲಿ ಕಲಾಪ ನಡೆಯದೇ ಇರಲು ಕಾಂಗ್ರೆಸ್‌ ಕಾರಣ. ಅದಕ್ಕೆ ಇತರ ಪ್ರತಿಪಕ್ಷಗಳೂ ಬೆಂಬಲ ನೀಡುತ್ತಿವೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಹೆಚ್ಚು ಅಸಹಿಷ್ಣುತೆಯ ದೋರಣೆ ಪ್ರದರ್ಶಿಸುತ್ತಿದೆ. ಎಲ್ಲ ವಿಚಾರಗಳನ್ನು ಚರ್ಚಿಸಲೂ ಸರ್ಕಾರ ಸಿದ್ಧವಿರುವುದಾಗಿ ಎಂದಿದ್ದಾರೆ ಅನಂತಕುಮಾರ್‌.

11 ಬಾರಿ ಕಲಾಪ ಮುಂದೂಡಿಕೆ: ಇದೇ ವೇಳೆ ಸಂಸತ್‌ನಲ್ಲಿ 20 ದಿನ ಯಾವುದೇ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ರಾಜ್ಯಸಭೆಯಲ್ಲಿ ಬುಧವಾರ ಯಾವುದೇ ರೀತಿ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಬರೋಬ್ಬರಿ ಹನ್ನೊಂದು ಬಾರಿ ಕಲಾಪ ಮುಂದೂಡಿಕೆಯಾಗಿದೆ.  ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಲೇ ಕೋಲಾಹಲದ ವಾತಾವರಣ ಉಂಟಾಯಿತು. ಬೆಳಗ್ಗಿನ ಅವಧಿಯಲ್ಲಿಯೇ ನಾಲ್ಕು ಬಾರಿ ಕಲಾಪ ಮುಂದೂಡಿಕೆಯಾಗಿತ್ತು. ಲೋಕಸಭೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಗಾಗಿ ಎಐಎಡಿಎಂಕೆ ಸಂಸದರು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next