Advertisement

Bypolls ನಂತರ ರಾಜ್ಯಸಭೆಯಲ್ಲಿ ಬಹುಮತ ಸಾಧಿಸಲು ಕಣ್ಣಿಟ್ಟಿರುವ ಎನ್ ಡಿಎ

06:12 PM Aug 11, 2024 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ನಿಗದಿಯಾಗಿರುವ 12 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತವನ್ನು ಸಾಧಿಸುವ ನಿರೀಕ್ಷೆಯಿದೆ. ಸರಕಾರ ವಕ್ಫ್ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಶಾಸನಗಳಿಗೆ ಅನುಮೋದನೆ ಪಡೆಯಲು ಬಹುಮತ ಅಗತ್ಯವಾಗಿದೆ.

Advertisement

ಸದ್ಯ 229 ರ ಬಲದ ಮೇಲ್ಮನೆಯಲ್ಲಿ ಬಿಜೆಪಿ 87 ಸಂಸದರನ್ನು ಹೊಂದಿದ್ದು ಮಿತ್ರಪಕ್ಷಗಳ ಸೇರಿ ಸಂಖ್ಯೆ 105 ಇದೆ. ಆರು ನಾಮನಿರ್ದೇಶಿತ ಸದಸ್ಯರು, ಸಾಮಾನ್ಯವಾಗಿ ಸರಕಾರದೊಂದಿಗೆ ತಮ್ಮ ಮತವನ್ನು ಚಲಾಯಿಸುತ್ತಾರೆ. ಹೀಗಾಗಿ NDA ಬಲ 111 ಕ್ಕೆ ತಲುಪುತ್ತದೆ. ಅಂದರೆ 115 ರ ಬಹುಮತದ ಸಂಖ್ಯೆಗಿಂತ ನಾಲ್ಕು ಸ್ಥಾನ ಕಡಿಮೆ.

ಮೇಲ್ಮನೆಯಲ್ಲಿ ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದ್ದು, ಮಿತ್ರಪಕ್ಷಗಳು ಸಂಖ್ಯೆ 58 ಇದ್ದು ವಿಪಕ್ಷ ಮೈತ್ರಿಯ ಸಂಖ್ಯೆಯನ್ನು 84 ಕ್ಕೆ ತಲುಪುತ್ತದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷ 11 ಸದಸ್ಯರನ್ನು ಹೊಂದಿದ್ದು, ಬಿಜೆಡಿ ಎಂಟು ಸದಸ್ಯರನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next