Advertisement

Moodbidri: ಎನ್‌ಡಿಎ ಪರೀಕ್ಷೆ; ಆಳ್ವಾಸ್‌ನ 12 ಮಂದಿ ತೇರ್ಗಡೆ

12:38 AM Sep 25, 2024 | Team Udayavani |

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗದ ಮೂಲಕ ನಡೆಸಲಾದ ರಾಷ್ಟ್ರಮಟ್ಟದ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಲ್‌ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್‌ ಪದವಿ ಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

Advertisement

ಪುನರ್ವ, ಸುಮನ್‌ ಭಟ್‌, ದುಷ್ಯಂತ್‌, ಆದಿತ್ಯ, ಅಖೀಲ್‌ ಜೆ.ಎಚ್‌., ನಿಖಿಲ್‌ ಭಟ್‌, ವಿಶ್ವವಿಜಿತ್‌, ವೈಭವ್‌, ರೋಶನ್‌ ಶೆಟ್ಟಿ, ದಿಗಂತ್‌, ಸಿದ್ಧಾಂತ್‌ ಮಠಪತಿ ಮತ್ತು ಆಕಾಶ್‌ ಪೂಜಾರ್‌ ತೇರ್ಗಡೆಯಾದವರು.

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ರಾಷ್ಟೀಯ ರಕ್ಷಣ ಅಕಾಡೆಮಿ- ಎನ್‌ಡಿಎ) ಮತ್ತು ಇಂಡಿಯನ್‌ ನೇವಲ್‌ ಅಕಾಡೆಮಿ (ಭಾರತೀಯ ನೌಕಾ ಅಕಾಡೆಮಿ- ಐಎನ್‌ಎ)ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ನಡೆಸುವ ಪ್ರವೇಶ ಪರೀಕ್ಷೆ ಇದಾಗಿದ್ದು, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರವೇಶ ಬಾಗಿಲಿನಂತೆ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next