Advertisement
ನಟ ಸಿದ್ಧಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮಹಾರಾಷ್ಟ್ರ ಪೊಲೀಸರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಪತ್ರ ಬರೆದಿದೆ.
Related Articles
Advertisement
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಶರ್ಮಾ, ನೆಹ್ವಾಲ್ ಅವರ ಪೋಸ್ಟ್‌ನಲ್ಲಿ “ಆಕ್ಷೇಪಾರ್ಹ ಟೀಕೆ” ಗಾಗಿ ನಟನ ಖಾತೆಯನ್ನು ತಕ್ಷಣವೇ ನಿರ್ಬಂಧಿಸಲು ಮತ್ತು ಸಿದ್ಧಾರ್ಥ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಟ್ವಿಟರ್ ಇಂಡಿಯಾದ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ತಮ್ಮ ಟ್ವೀಟ್ ಕುರಿತಾಗಿನ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಸಿದ್ಧಾರ್ಥ್, “ಅಗೌರವಯುತವಾದ ಯಾವುದನ್ನೂ ಬರೆದಿಲ್ಲ, ಹೇಳಿಲ್ಲ ಮತ್ತು ಪ್ರೇರೇಪಿಸಲಾಗಿಲ್ಲ” ಎಂದು ಹೇಳಿದ್ದಾರೆ.
ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿ , “ಅವರು ಏನು ಹೇಳಿದ್ದಾನೆಂದು ನನಗೆ ಅರ್ಥವಾಗಲಿಲ್ಲ. ನಾನು ಅವರನ್ನು ನಟನಾಗಿ ಇಷ್ಟಪಡುತ್ತಿದ್ದೆ ಆದರೆ ಇದು ಒಳ್ಳೆಯದಲ್ಲ. ಅವರು ಉತ್ತಮ ಪದಗಳೊಂದಿಗೆ ವ್ಯಕ್ತಪಡಿಸಬಹುದಿತ್ತು. ಅಂತಹ ಪದಗಳು ಮತ್ತು ಕಾಮೆಂಟ್‌ಗಳ ಬಗ್ಗೆ ನೀವು ಗಮನಹರಿಸಿದ್ದೀರಿ. ಭಾರತದ ಪ್ರಧಾನಿಯ ಭದ್ರತೆಯು ಒಂದು ಸಮಸ್ಯೆಯಾಗಿದ್ದರೆ, ದೇಶದಲ್ಲಿ ಯಾವುದು ಸುರಕ್ಷಿತವಾಗಿದೆ ಎಂದು ನನಗೆ ಖಚಿತವಿಲ್ಲ ಎಂದಿದ್ದಾರೆ.
ಸೈನಾ ತಂದೆ ಹರ್ವಿರ್ ಸಿಂಗ್ ಅವರು ಪಿಟಿಐಗೆ ಪ್ರತಿಕ್ರಿಯಿಸಿ , ”ಯಾವುದೇ ವಿವಾದದಲ್ಲಿ ಇರದ ಸೈನಾ ವಿರುದ್ಧ ಯಾರೂ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. ಒಳ್ಳೆಯ ಅಭಿರುಚಿಯಿಲ್ಲದ ಇಂತಹ ಕಮೆಂಟ್‌ಗಳು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಸೈನಾ ಅವರ ಪತಿ ಬ್ಯಾಡ್ಮಿಂಟನ್ ಆಟಗಾರ ಪಾರುಪಳ್ಳಿ ಕಶ್ಯಪ್ ಅವರು ಸಿದ್ಧಾರ್ಥ್ ಟ್ವೀಟ್ ಅನ್ನು ಖಂಡಿಸಿದ್ದಾರೆ.”ಇದು ನಮಗೆ ಅಸಮಾಧಾನವನ್ನುಂಟುಮಾಡಿದೆ .. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಆದರೆ ಉತ್ತಮ ಪದಗಳನ್ನು ಆರಿಸಿಕೊಳ್ಳಿ ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ.