ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿಆರ್ ಬಿ) ಈ ಬಾರಿಯ ಅಪರಾಧ ದಾಖಲೆಗಳ ಮಾಹಿತಿ ಪ್ರಕಟಿಸಿದೆ. ದೇಶದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋಲ್ಕತ್ತಾ ನಗರವು ಸತತ ಮೂರನೇ ಬಾರಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಕೋಲ್ಕತ್ತಾ ನಗರದಲ್ಲಿ 2022 ರಲ್ಲಿ ಪ್ರತಿ ಲಕ್ಷ ಜನರಿಗೆ 86.5 ಗುರುತಿಸಬಹುದಾದ ಅಪರಾಧ ಪ್ರಕರಣಗಳನ್ನು ವರದಿಯಾಗಿದೆ. ಎರಡನೇ ಸ್ಥಾನದಲ್ಲಿ ಪುಣೆ (280.7 ಪ್ರಕರಣಗಳು) ಮತ್ತು ಮೂರನೇ ಸ್ಥಾನದಲ್ಲಿ ಹೈದರಾಬಾದ್ (299.2 ಪ್ರಕರಣಗಳು) ನಗರವಿದೆ ಎಂದು ಎನ್ ಸಿಆರ್ ಬಿ ಡೇಟಾ ತಿಳಿಸಿದೆ.
ಭಾರತೀಯ ದಂಡ ಸಂಹಿತೆ (IPC) ಮತ್ತು ಎಸ್ಎಲ್ಎಲ್ (ವಿಶೇಷ ಮತ್ತು ಸ್ಥಳೀಯ ಕಾನೂನುಗಳು) ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಗುರುತಿಸಬಹುದಾದ ಅಪರಾಧಗಳಾಗಿವೆ.
ಇದನ್ನೂ ಓದಿ:Heritage; ತುಳುನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಶಿರ್ವ ನಡಿಬೆಟ್ಟು ಚಾವಡಿ ಮನೆ
ಎನ್‌ಸಿಆರ್‌ಬಿ ವರದಿಯ ಪ್ರಕಾರ, ಕೋಲ್ಕತ್ತಾ 2021 ರಲ್ಲಿ ಪ್ರತಿ ಲಕ್ಷ ಜನರಿಗೆ 103.4 ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು ಈ ವರ್ಷ 86.5 ಕ್ಕೆ ಇಳಿದಿದೆ. 2020 ರಲ್ಲಿ ಇದು 129.5 ಆಗಿತ್ತು.
2021 ರಲ್ಲಿ, ಪುಣೆ ಮತ್ತು ಹೈದರಾಬಾದ್ ಪ್ರತಿ ಲಕ್ಷ ಜನಸಂಖ್ಯೆಗೆ ಕ್ರಮವಾಗಿ 256.8 ಮತ್ತು 259.9 ಅಪರಾಧಗಳನ್ನು ವರದಿ ಮಾಡಿತ್ತು.
20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 19 ನಗರಗಳ ಹೋಲಿಕೆಯ ನಂತರ ಶ್ರೇಯಾಂಕಗಳನ್ನು ನೀಡಲಾಗಿದೆ.