Advertisement
ನವದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ದೇಶದ ಗಡಿ ಭಾಗದಲ್ಲಿರುವ ಸ್ಥಳಗಳಲ್ಲಿ ಲಕ್ಷಕ್ಕೂ ಅಧಿಕ ಎನ್‌ಸಿಸಿ ಕೆಡೆಟ್‌ಗಳನ್ನು ನೇಮಿಸಲಾಗಿದೆ. ಹೆಣ್ಣು ಮಕ್ಕಳು ಇನ್ನೂ ಹೆಚ್ಚಾಗಿ ಎನ್‌ಸಿಸಿ ಸೇರಬೇಕು. ಕೆಡೆಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿ ಬಗ್ಗೆ ಜಾಗೃತಿ ಮೂಡಿಸಬೇಕು. ವೋಕಲ್ ಫಾರ್ ಲೋಕಲ್, ಡ್ರಗ್ಸ್ ಮುಕ್ತ ಭಾರತದ ಬಗ್ಗೆಯೂ ಜಾಗೃತಿ ಮೂಡಿಸಬೇಕು’ ಎಂದಿದ್ದಾರೆ. ತಾವೂ ಒಬ್ಬ ಎನ್‌ಸಿಸಿ ಕೆಡೆಟ್ ಆಗಿದ್ದೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯಿದೆ ಎಂದರು.
ರ್‍ಯಾಲಿ ವೇಳೆ ಪ್ರಧಾನಿ ಮೋದಿಯವರು ತೊಟ್ಟಿದ್ದ ಟೋಪಿ ಎಲ್ಲರ ಗಮನ ಸೆಳೆದಿದೆ. ಸಿಖ್ ಕೆಡೆಟ್‌ನ ಟರ್ಬನ್ ಅನ್ನು ಅವರು ಧರಿಸಿದ್ದರು. ರೈಫೆಲ್ ಹಸಿರು ಬಣ್ಣದ ಟರ್ಬನ್‌ಗೆ ಕೆಂಪು ಬಣ್ಣದ ಗರಿ ಗಳಿದ್ದವು. ಈ ಹಿಂದೆ ಗಣರಾಜ್ಯೋತ್ಸವ ದಿನದಂದು ಮೋದಿಯವರು ತೊಟ್ಟಿದ್ದ ಉತ್ತರಾಖಂಡದ ಸಾಂಪ್ರದಾಯಿಕ ಟೋಪಿಯೂ ಗಮನ ಸೆಳೆದಿತ್ತು.