Advertisement

ರೂಪಾಗೆ ನಮ್ಮ ಬೆಂಗಳೂರು ಪ್ರಶಸ್ತಿ ಕೊಡುವುದಾಗಿ ಹೇಳೇ ಇಲ್ಲ: NBF

03:35 PM Mar 27, 2018 | Team Udayavani |

ಬೆಂಗಳೂರು : “ಡಿ ರೂಪಾ ಅವರಿಗೆ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಕೊಡುವುದಾಗಿ ನಾವು  ಹೇಳಿಯೇ ಇಲ್ಲ; ಹಾಗಿರುವಾಗ ಅದನ್ನು ಆಕೆ ತಿರಸ್ಕರಿಸರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಹೇಳಿಕೆಯೊಂದರಲ್ಲಿ ಸಷ್ಟೀಕರಣ ನೀಡಿದೆ. 

Advertisement

‘ನಗದು ಬಹುಮಾನಕ್ಕಾಗಿ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಹಿರಿಯ ಪೊಲೀಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ತಿರಸ್ಕರಿಸಿದರೆನ್ನಲಾದ’ ಕೆಲ ದಿನಗಳ ತರುವಾಯ ಈ ಹೇಳಿಕೆ ಬಿಡುಗಡೆ ಮಾಡಿರುವ ನಮ್ಮ ಬೆಂಗಳೂರು ಪ್ರತಿಷ್ಠಾನವು “ಐಪಿಎಸ್‌ ಅಧಿಕಾರಿಗೆ ನಾವು ಪ್ರಶಸ್ತಿ ಕೊಡುವೆವೆಂದು ಹೇಳಿಯೇ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಅತ್ಯಂತ ಬಲವಾದ ಹೇಳಿಕೆಯೊಂದರಲ್ಲಿ ಪ್ರತಿಷ್ಠಾನವು, “2018ರ ನಮ್ಮ ಬೆಂಗಳೂರು ಪ್ರಶಸ್ತಿಯ 9ನೇ ಆವೃತ್ತಿಯ ಸರಕಾರಿ ಅಧಿಕಾರಿ ವರ್ಗದಲ್ಲಿ  ನಾಮಕರಣಗೊಂಡಿದ್ದ ಅಧಿಕಾರಿಯೋರ್ವರ ಅನುಚಿತ ವರ್ತನೆಯಿಂದ ನಮಗೆ ದುಃಖ, ಆಘಾತ ಉಂಟಾಗಿದೆ. ಬೆಂಗಳೂರಿನ ಪ್ರತಿಷ್ಠಿತ ತೀರ್ಪುಗಾರರ ಮಂಡಳಿಯು ನಗರದ ಹೀರೋಗಳನ್ನು ಗುರುತಿಸಿ ಗೌರವಿಸುವ ಈ ವರೆಗಿನ ಸುದೀರ್ಘ‌ ಇತಿಹಾಸದಲ್ಲಿ  ಫೈನಲ್‌ ವಿನ್ನರ್‌ ಆಗಿ ಮೂಡಿ ಬಾರದ ನಾಮಿನಿಯೊಬ್ಬರು ಪ್ರಶಸ್ತಿಗಾಗಿ ನಿರಂತರವಾಗಿ ಯತ್ನಿಸಿರುವುದು ಮತ್ತು ಅನಂತರದಲ್ಲಿ ಅಪ್ರಬುದ್ಧ, ನಂಜಿನ ವರ್ತನೆಯನ್ನು ತೋರಿರುವ ಉದಾಹರಣೆಯೇ ಇಲ್ಲ. ಈ ನಾಮಿನಿಯು ಪ್ರಶಸ್ತಿಗಾಗಿ ತೀರ್ಪುಗಾರರೊಂದಿಗೆ, ಎನ್‌ಬಿಎಫ್ ತಂಡದವರು ಮತ್ತು ಟ್ರಸ್ಟಿಗಳೊಂದಿಗೆ ಹಲವು ಬಾರಿ ಸಂಪರ್ಕ ನಡೆಸಿದ್ದರು’ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಡಿ ರೂಪಾ ಮೌದ್ಗಿಲ್‌ ಅವರನ್ನು ಹೆಸರಿಸದೆಯೇ ಎನ್‌ಬಿಎಫ್ ತನ್ನ ಹೇಳಿಕೆಯಲ್ಲಿ “ಈ ಎಲ್ಲ ನಾಟಕೀಯತೆಗಳಲ್ಲಿ  ಆಕೆಗೆ ನಿರಾಶೆಯಾಗಿರುವುದು ಅತ್ಯಂತ ಸ್ಪಷ್ಟವಿದೆ. ಆದರೆ ನಾವು ಆಕೆಯ ಈ ನಿರಾಶೆಯನ್ನು ನಿವಾರಿಸಲಾರೆವು; ಎಲ್ಲ ನಾಮಿನಿಗಳು ವಿಜೇತರೆಂಬ ನಮ್ಮ ಅಭಿಪ್ರಾಯವನ್ನು ಮಾತ್ರವೇ ನಾವು ಪುನರುಚ್ಚರಿಸಬಲ್ಲೆವು’ ಎಂದು  ಪ್ರಕಟನೆ ತಿಳಿಸಿದೆ 

Advertisement

Udayavani is now on Telegram. Click here to join our channel and stay updated with the latest news.

Next