Advertisement
ರವೀಂದ್ರ ಕಲಾಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಧ್ವನಿವರ್ಧಕ ಹಾಗೂ ಬೆಳಕಿನ ವ್ಯವಸ್ಥೆ ಮಾತ್ರ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ನಯನ ಸಭಾಂಗಣಕ್ಕೆ ಪೂರ್ಣ ದುರಸ್ತಿ ಮಾಡಿ ಹೊಸ ರೂಪ ನೀಡುವ ಉದ್ದೇಶ ಇಲಾಖೆ ವ್ಯಕ್ತಪಡಿಸಿದೆ.
Related Articles
Advertisement
ಬಿಬಿಎಂಪಿಗೆ ಸಂಬಂಧಿಸಿದ ಪೈಪ್‌ಗ್ಳು ನಯನ ಸಭಾಂಗಣದ ಪಕ್ಕ ಹಾದುಹೋಗಿರುವುದರಿಂದ ಮಳೆಗಾಲದಲ್ಲಿ ಸಭಾಂಗಣಕ್ಕೆ ನೀರು ನುಗ್ಗುವ ಸಮಸ್ಯೆಯೂ ಇದೆ. ಸಭಾಂಗಣದ ಅಕ್ಕ ಪಕ್ಕ ಇರುವ ಗ್ರೀನ್ ರೂಂ ಹಾಗೂ ವೇದಿಕೆ ಕೆಳಗೆ ನೀರು ನುಗ್ಗಿ ಕಾರ್ಯಕ್ರಮ ನಡೆಸಲು ಸಮಸ್ಯೆಯುಂಟಾಗುತ್ತಿದೆ. ಅಲ್ಲದೆ, ಸಭಾಂಗಣ ನೆಲಮಟ್ಟದಕ್ಕಿಂತ ಕೆಳಗಿರುವುದರಿಂದ ಈ ಸಮಸ್ಯೆ ಹೆಚ್ಚು.
ಏನೆಲ್ಲಾ ಬದಲಾವಣೆ?: ನಯನ ಸಭಾಂಗಣವನ್ನು ನೂತನವಾಗಿ ಅಭಿವೃದ್ಧಿ ಪಡಿಸಲು ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. ಆದರೆ, ಸಭಾಂಗಣವನ್ನು ಮುಚ್ಚದೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದೆ.
ಈ ಹಿಂದೆ ರವೀಂದ್ರ ಕಲಾಕ್ಷೇತ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ ಬದಲಾವಣೆ ಮಾಡಲಾಗಿತ್ತು. ಈಗ ನಯನ ಸಭಾಂಗಣಕ್ಕೆ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಏರ್ ಕಂಡಿಷನಿಂಗ್ ಮತ್ತು ನೂತನ ಆಸನಗಳ ವ್ಯವಸ್ಥೆ ಮಾಡಿಸಲು ಅಂದಾಜು 30-50 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನ ಮುಗಿದ ಬಳಿಕ ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಟೆಂಡರ್ ಕೆರಯಲಾಗುವುದು. ಧ್ವನಿವರ್ಧಕ, ಬೆಳಕು ಹಾಗೂ ಆಸನಗಳ ಬದಲಾವಣೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು. ಅವುಗಳ ನಿರ್ವಹಣೆ ಕಡೆಗೂ ಗಮನ ನೀಡಲಾಗುವುದು. ಇದರೊಂದಿಗೆ ನೀರು ನುಗ್ಗುವ ಸಮಸ್ಯೆ ಬಗೆಹರಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ನಿದೇರ್ಶಕರು ತಿಳಿಸಿದ್ದಾರೆ.
ನಯನ ಸಭಾಂಗಣದಲ್ಲಿ ನೀರು ನಿಲ್ಲುವುದರ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮಳೆಗಾಲ ಮುಗಿದ ನಂತರ ಸಮಸ್ಯೆ ಬಗೆಹರಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.-ಎನ್.ಆರ್.ವಿಶುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ * ಶ್ರುತಿ ಮಲೆನಾಡತಿ