Advertisement
ಆಂಗ್ಲಮಾಧ್ಯಮ ಆರಂಭ:
Related Articles
Advertisement
ಮೂಲಸೌಕರ್ಯಗಳ ಸಮಸ್ಯೆ:
ಶೌಚಾಲಯ ಶಾಲೆಯ ಕಾಂಪೌಡ್‌ನ ಹೊರಗಡೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೆರ್ಗಾಲ್ ಗ್ರಾ.ಪಂ. ವತಿಯಿಂದ ಒಂದು ಶೌಚಾಲಯ ನಿರ್ಮಿಸುವ ಭರವಸೆಯನ್ನು ಸ್ಥಳೀಯ ಜನಪ್ರತಿನಿಧಿಗಳು ನೀಡಿದ್ದಾರೆ. ಮಕ್ಕಳಿಗೆ ಕೈ ತೊಳೆಯುವ ಘಟಕ, ಗ್ರಂಥಾಲಯ, ಪ್ರಯೋಗಾಲಯ ಅಗತ್ಯವಿದೆ. 8 ವರ್ಷಗಳಿಂದ ಕ್ರೀಡಾ ಸಾಮಗ್ರಿಗಳು ಶಾಲೆಗೆ ಬಂದೇ ಇಲ್ಲ. ಕುರ್ಚಿ, ಯಂತ್ರೋಪಕರಣಗಳು, ಕಂಪ್ಯೂಟರ್, ಮೇಜು, ಪ್ರೊಜೆಕ್ಟರ್‌ಗಳ ಆವಶ್ಯಕತೆ ಇದೆ. ಅಡುಗೆ ಕೋಣೆ, ನೀರಿನ ಬಾವಿ ಇದ್ದ ಜಾಗ ರಾ.ಹೆ.ಗೆ ಸೇರಿದ್ದು ಹೆದ್ದಾರಿ ಪ್ರಾಧಿಕಾರದವರು ಬಾವಿಯನ್ನು ಮುಚ್ಚಿಸಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.
ಕೊಠಡಿಗಳ ಕೊರತೆ :
ಶಾಲೆಯಲ್ಲಿ 6 ಕೊಠಡಿಗಳು ಇದ್ದು ಪ್ರಸ್ತುತ 4 ತರಗತಿ ಕೋಣೆಗಳ ಕೊರತೆ ಉಂಟಾಗಿದೆ. ಸುಮಾರು 80 ವರ್ಷ ಹಿಂದೆ ನಿರ್ಮಿಸಿರುವ ಪ್ರಸ್ತುತ 7ನೇ ತರಗತಿ ಇರುವ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು ಶಿಥಿಲಾವಸ್ಥೆಯಲ್ಲಿದೆ. ಮುಖ್ಯಶಿಕ್ಷಕರ ಕಚೇರಿ ಸೇರಿದಂತೆ 4 ಕಟ್ಟಡಗಳು ಅಗತ್ಯವಾಗಿದೆ. ಎಸ್‌ಡಿಎಂಸಿ, ಹಳೆವಿದ್ಯಾರ್ಥಿಗಳ ಸಂಘ, ದಾನಿಗಳಿಂದಾಗಿ 2 ತರಗತಿ ಕೊಠಡಿ, ರಂಗ ಮಂದಿರ ನಿರ್ಮಾಣಗೊಂಡಿದೆ.
ಆಂಗ್ಲ ಮಾಧ್ಯಮ ಆರಂಭ:
ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ ವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ವಾಗುತ್ತಿದೆ. ಮೂಲ ಸೌಕರ್ಯಗಳ ವ್ಯವಸ್ಥೆ ಸರಿಪಡಿಸಿದರೆ ಇನ್ನಷ್ಟು ವಿದ್ಯಾರ್ಥಿಗಳ ದಾಖಲಾತಿಯಾಗಬಹುದು. – ವಿಷ್ಣು, ಪ್ರಭಾರ ಮುಖ್ಯಶಿಕ್ಷಕ
ಕೊಠಡಿಗಳ ಕೊರತೆ:
ತುರ್ತು ಮುಖ್ಯ ಶಿಕ್ಷಕರ ನೇಮಕ ಆಗಬೇಕಿದೆ ಹಾಗೂ ಕೊಠಡಿಗಳ ಕೊರತೆಯಿಂದ ರಂಗಮಂದಿರ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. –ಸುಂದರ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ
-ಕೃಷ್ಣ ಬಿಜೂರು