Advertisement

ಬಿತ್ತನೆ ಬೀಜಗಳ ದರ ಇಳಿಸಿ: ಶಶಿರೇಖಾ

06:47 PM Jun 05, 2020 | Naveen |

ನಾಯಕನಹಟ್ಟಿ: ರಾಜ್ಯದಲ್ಲಿ ರೈತರು ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೀಗಾಗಿ ಶೇಂಗಾ ಬಿತ್ತನೆ ಬೀಜಗಳ ದರವನ್ನು ಕಡಿಮೆ ಮಾಡಬೇಕು ಎಂದು ಜಿಪಂ ಸದಸ್ಯೆ ಎಚ್‌.ಪಿ.ಶಶಿರೇಖಾ ಒತ್ತಾಯಿಸಿದ್ದಾರೆ.

Advertisement

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಬಿತ್ತನೆ ಶೇಂಗಾ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ರೈತರು ಕೊರೊನಾ ಸಂದರ್ಭದಲ್ಲಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ತಾವು ಬೆಳೆದ ಹೂವು, ಹಣ್ಣು, ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಕೂಲಿ ದೊರೆಯುತ್ತಿಲ್ಲ. ಹೀಗಾಗಿ ಬಿತ್ತನೆ ಬೀಜ ಖರೀದಿಸಲು ಕಷ್ಟಪಡುವಂತಾಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಸರಕಾರ ಬಿತ್ತನೆ ಬೀಜದ ದರವನ್ನು ಕಳೆದ ವರ್ಷಕ್ಕಿಂತ 145 ರೂ.ಗಳಷ್ಟು ಹೆಚ್ಚಿಸಿದೆ. ಹೆಚ್ಚಿಸಿದ ದರವನ್ನು ಕಡಿತಗೊಳಿಸಿ ಕಳೆದ ವರ್ಷದ ದರಕ್ಕೆ ಮಾರಾಟ ಮಾಡಬೇಕು. ಅ ಧಿಕಾರಿಗಳು ಜನರ ಒತ್ತಾಯ ಸರಕಾರಕ್ಕೆ ತಲುಪಿಸಬೇಕು. ಕೃಷಿ ಇಲಾಖೆ ನೀಡುವ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ರೈತರು ಪಡೆದಿರಬೇಕು ಎಂದು ಹೇಳಿದರು. ಕೃಷಿ ಅಧಿಕಾರಿ ಎನ್‌. ಸುಮಂತ ನಾಯಕ ಮಾತನಾಡಿದರು. ಕೃಷಿ ಸಹಾಯಕ ಶ್ರೀನಿವಾಸ್‌, ಓಬಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next