Advertisement

ದಕ್ಷಿಣದಲ್ಲೂ ನಕ್ಸಲರ ಬಸ್ತಾರ್‌ ಮಾದರಿ? ; ಕೇಂದ್ರ, ಕೇರಳ ಗುಪ್ತಚರ ಸಂಸ್ಥೆಗಳ ವರದಿ

09:33 AM Nov 22, 2019 | Team Udayavani |

ಹೊಸದಿಲ್ಲಿ: ನಕ್ಸಲೀಯರು ಕೇರಳದಲ್ಲಿ ನೆಲೆಯೂರುವ ಮೂಲಕ ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಲು ಮುಂದಾಗುತ್ತಿದ್ದಾರೆ. ಛತ್ತೀಸ್‌ಗಢದ ದಕ್ಷಿಣದ ಬಸ್ತಾರ್‌ ಪ್ರದೇಶ ಅವರ ನೆಲೆ ಹೇಗೋ, ಅದರಂತೆಯೇ ಕೇರಳ, ಕರ್ನಾಟಕ ಮತ್ತು ತಮಿಳುನಾಡನ್ನು (ಕೆಕೆಟಿ) ನೆಲೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

Advertisement

ಅದಕ್ಕೆ ಪೂರಕವಾಗಿ ಕಲ್ಲಿಕೋಟೆ ಜಿಲ್ಲೆಯ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪಿ.ಮೋಹನನ್‌ ಇತ್ತೀಚೆಗೆ ‘ಇಸ್ಲಾಮಿಕ್‌ ಮೂಲಭೂತವಾದಿಗಳು ಕೇರಳದಲ್ಲಿ ನೆಲೆಯೂರಲು ನಕ್ಸಲೀಯರಿಗೆ ನೆರವು ನೀಡುತ್ತಿದ್ದಾರೆ’ ಎಂದು ಹೇಳಿದ್ದರು. ಅವರ ಮಾತುಗಳ ಬಗ್ಗೆ ಟೀಕೆಗಳು ವ್ಯಕ್ತವಾಗಿದೆಯಾದರೂ, ದೂರಗಾಮಿ ಪರಿಸ್ಥಿತಿಯನ್ನು ಗಮನಿಸಿದರೆ ನಕ್ಸಲೀಯರು ಕೇರಳದಲ್ಲಿ ವಿಸ್ತರಿಸುವ ಜಾಲದ ರಭಸ ನೋಡಿದಾಗ ಅದು ಹೌದು ಎನ್ನಿಸದೇ ಇರದು ಎಂದು ಕೇಂದ್ರ ಮತ್ತು ಕೇರಳದ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ.

ದಂಡಕಾರಣ್ಯ ವಲಯದಿಂದ ಕೆಕೆಟಿ ವಲಯಕ್ಕೆ ನಕ್ಸಲೀಯರು ಜಾಲ ವಿಸ್ತರಣೆ ಮಾಡುತ್ತಿರುವ ಬಗ್ಗೆ ಬಹು ಸ್ತರದ ಗುಪ್ತಚರ ಸಂಸ್ಥೆಗಳ ಸಭೆಯಲ್ಲಿ ಮಾಹಿತಿ ನೀಡಲಾಗಿತ್ತು.

ಕರ್ನಾಟಕ, ಕೇರಳ, ತಮಿಳುನಾಡುಗಳ ಪೈಕಿ ಕೇರಳದಲ್ಲಿ ವಿಶೇಷವಾಗಿ ನಕ್ಸಲೀಯರ ಚಟುವಟಿಕೆ ಹೆಚ್ಚಾಗುತ್ತಿರುವುದು ಖಚಿತವಾಗಿದೆ. ನಕ್ಸಲೀಯರ ಪಶ್ಚಿಮ ಘಟ್ಟ ವಿಶೇಷ ವಲಯ ಸಮಿತಿ (WGSZC) ಎಂಬ ಸಂಘಟನೆ ಸ್ಥಾಪಿಸಲಾಗಿದೆ. ಅದರ ಮೂಲಕ ನೇಮಕ ಮತ್ತು ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂಬ ಅಂಶ ಖಚಿತಪಟ್ಟಿದೆ. 2018ರಲ್ಲಿ ಗುಪ್ತಚರ ಇಲಾಖೆ ನೀಡಿದ್ದ ವರದಿಯಲ್ಲೂ ಕೆಲ ಕಳವಳ ಕಾರಿ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು.

ಸತತ ಕಾರ್ಯಾಚರಣೆ: ಕರ್ನಾಟಕ, ತಮಿಳುನಾಡುಗಳಲ್ಲಿ ನಕ್ಸಲರ ವಿರುದ್ಧ ಸತತ ಕಾರ್ಯಾಚರಣೆ ನಡೆಯುತ್ತಿರುವುದು ಅವರಿಗೆ ತೊಡಕಾಗಿದೆ. ಹೀಗಾಗಿ, ಅವರು ಕೇರಳದ ಅರಣ್ಯದಲ್ಲಿ ತಳವೂರಲು ಸಹಾಯಕವಾಗಿದೆ ಎಂದು ಆ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಹೀಗಾಗಿಯೇ 2018ರ ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ಮುನ್ನೆಚ್ಚರಿಕೆಯನ್ನೂ ನೀಡಿತ್ತು.

Advertisement

ವರದಿ ಅಂಶಗಳು
– ಕಾಡುಗಳ್ಳ ವೀರಪ್ಪನ್‌ ಕಾರ್ಯವೆಸಗುತ್ತಿದ್ದ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ತಾಣ.

– ಕರ್ನಾಟಕ, ತಮಿಳುನಾಡು ಪೊಲೀಸ್‌ ಇಲಾಖೆಗಳು ವೀರಪ್ಪನ್‌ ಕಾರ್ಯಾಚರಣೆ ನಿಗ್ರಹಿಸುವ ನಿಟ್ಟಿನಲ್ಲಿ ಸ್ಥಾಪಿಸಿಕೊಂಡಿದ್ದ ರಹಸ್ಯ ಮಾಹಿತಿ ಜಾಲವನ್ನು ಈಗಲೂ ಉಳಿಸಿಕೊಂಡಿವೆ.

– ಕೆಕೆಟಿ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಯಾವ ಭಾಗ ಯಾವ ರಾಜ್ಯಕ್ಕೆ ಸೇರಿದ್ದು ಎಂದು ಖಚಿತವಾಗಿ ಗುರುತಿಸಲು ಸಾಧ್ಯವಿಲ್ಲದ್ದು ಅವರಿಗೆ ಅನುಕೂಲ.

Advertisement

Udayavani is now on Telegram. Click here to join our channel and stay updated with the latest news.

Next