Advertisement
ಛತ್ತೀಸ್‌ಗಢದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ಒಟ್ಟು 18 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಪ್ರಮುಖ ಕ್ಷೇತ್ರ ಗಳಾದ ಕೊಂಡಗಾಂವ್‌ನಲ್ಲಿ ಶೇ. 61.47ರಷ್ಟು ಮತದಾನ ವಾಗಿದ್ದರೆ, ಕೇಶಕಾಲ್‌ನಲ್ಲಿ ಶೇ. 63.51ರಷ್ಟು, ಕಾಂಕರ್‌ನಲ್ಲಿ ಶೇ. 62, ಬಾತ್ಸಾರ್‌ನಲ್ಲಿ ಶೇ. 58, ದಾಂತೇವಾಡದಲ್ಲಿ ಶೇ. 49, ಕೈರಾಗಢದಲ್ಲಿ ಶೇ. 70.14, ಡೊಗಾರ್‌ಗಾಂವ್‌ನಲ್ಲಿ ಶೇ. 71 ಹಾಗೂ ಖುಜ್ಜಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 72ರಷ್ಟು ಮತದಾನವಾಗಿದೆ.
Related Articles
ಬಿಲಾಸ್ಪುರ್: “ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ತಾಯಿ-ಮಗ, ನೋಟು ಅಮಾನ್ಯ ವಿಚಾರದಲ್ಲಿ ಮೋದಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ’ ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಾಲಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರತ್ತದೆ ಟೀಕಿಸಿದ್ದಾರೆ. ನ.20ರಂದು ನಡೆಯಲಿರುವ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಲಾಸ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. “ನೋಟು ಅಮಾನ್ಯಗೊಂಡಿದ್ದರಿಂದ ತಮಗೆ ಒದಗಬಹುದಾದ ಅಪಾಯವನ್ನು ಮನಗಂಡು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದನ್ನು ಅವರು ಮರೆತಿದ್ದಾರೆ. ಈ ನಿರ್ಧಾರದಿಂದಾಗಿ ಹಲವಾರು ನಕಲಿ ಕಂಪೆನಿಗಳ ವ್ಯವಹಾರ ಬಯಲಿಗೆ ಬಂದಿದೆ’ ಎಂದಿದ್ದಾರೆ. ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ “ಹಿಂದೊಮ್ಮೆ ರಾಜೀವ್ ಗಾಂಧಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಿದ ಪ್ರತಿ 15 ಪೈಸೆ ಮಾತ್ರ ಫಲಾನುಭವಿಗಳಿಗೆ ಸಿಗುತ್ತದೆ. ಉಳಿದ 85 ಪೈಸೆ ವರ್ಗಾವಣೆಯಾಗುತ್ತಿದೆ ಎಂದಿದ್ದರು. ಅದನ್ನು ಯಾವ ಕೈ ನುಂಗಿತ್ತು ಎಂದು ಪ್ರಶ್ನಿಸಿದ್ದಾರೆ.
Advertisement
ಸಂಸ್ಕೃತ ವಿವಿ ಸ್ಥಾಪನೆ, ಶಾಲೆಗಳಲ್ಲಿ ಯೋಗತೆಲಂಗಾಣ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಯೋಗ ಕಲಿಕೆ, ಸಂಸ್ಕೃತ ವಿವಿ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳ ಕಲ್ಯಾಣ ಮಂಡಳಿ ಸ್ಥಾಪಿಸುವ ವಾಗ್ಧಾನ ಮಾಡಲಾಗಿದೆ. ಶಬರಿಮಲೆ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಉಚಿತ ಪ್ರವಾಸ, ಮದ್ಯ ಮಾರಾಟಕ್ಕೆ ಅವಕಾಶ, ವರ್ಷಕ್ಕೆ ಒಂದು ಲಕ್ಷ ಗೋವುಗಳ ವಿತರಣೆಗೂ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದೆ. ತೆಲಂಗಾಣಕ್ಕೆ ಅಧಿಸೂಚನೆ
ಮುಂದಿನ ತಿಂಗಳ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸೋಮವಾರ ಪ್ರಕಟಣೆ ಹೊರಡಿಸಿದೆ. ನ.12ರಿಂದ 19ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಉಂಟು. ನ.20ಕ್ಕೆ ನಾಮಪತ್ರ ಪರಿಶೀಲನೆ. ರಾಜಸ್ಥಾನ: ಬಿಜೆಪಿ ಪಟ್ಟಿ ಬಿಡುಗಡೆ
ಡಿ.7ರಂದೇ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 16 ಮಂದಿ ಆಕಾಂಕ್ಷಿಗಳು ಉಮೇದ್ವಾರಿಕೆ ಸಲ್ಲಿಸಿದ್ದಾರೆ. ರಾಜಸ್ಥಾನ ಚುನಾವಣೆಗಾಗಿ 131 ಮಂದಿ ಹುರಿಯಾಳುಗಳ ಪಟ್ಟಿಯೂ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ, ಸ್ಪೀಕರ್ ಕೈಲಾಶ್ ಮೇಘಾÌಲ್, ಸಚಿವರಾದ ಗುಲಾಬ್ ಚಂದ್ ಕಟಾರಿಯಾ, ವಸುದೇವ್ ದೇವಾನಿ ಸ್ಪರ್ಧಿಸಲು ಅವಕಾಶ ಪಡೆದ ಪ್ರಮುಖರಲ್ಲಿ ಸೇರಿದ್ದಾರೆ. ಹಾಲಿ ಶಾಸಕರ ಪೈಕಿ 26 ಮಂದಿಗೆ ಟಿಕೆಟ್ ನೀಡಲಾಗಿಲ್ಲ. ಉಳಿದ 85 ಮಂದಿಗೆ ಅವಕಾಶ ನೀಡಲಾಗಿದೆ.