ರಾಯು³ರ/ಹೈದರಾಬಾದ್: ಈ ತಿಂಗಳ 12ರಂದು ಮೊದಲ ಹಂತದ ಮತದಾನ ನಡೆಯಲಿರುವ ಛತ್ತೀಸ್‌ಗಡದಲ್ಲಿ ಪ್ರಚಾರ ರಂಗೇರಿದೆ. ಕಾಂಗ್ರೆಸ್ ನಾಯಕ ರಾಜ್‌ಬಬ್ಬರ್ ನಕ್ಸಲ್ ದಾಳಿಯ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ನಕ್ಸಲ್ ಸಮಸ್ಯೆ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜನಂದಗಾಂವ್‌ನ ಅಂಬಾಗಡ ಚೌಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ರವಿವಾರ ಮಾತನಾಡಿದ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ನಕ್ಸಲ್ ಸಮಸ್ಯೆಯನ್ನು ಕ್ರಾಂತಿ ಎಂದೂ, ಅದನ್ನು ತಡೆಯಲು ಸಾಧ್ಯವಿಲ್ಲ ಎಂದೂ ಮಾತನಾಡಿರುವುದನ್ನು ಆಕ್ಷೇಪಿಸಿದ ಶಾ, “ರಾಹುಲ್ ಗಾಂಧಿಯ ವರಿಗೆ ಕ್ರಾಂತಿ ಎಂದರೆ ಏನೆಂದೇ ಗೊತ್ತಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
2 ಪಕ್ಷಗಳ ಹೊಂದಾಣಿಕೆ: ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್ ರಹಸ್ಯ ಹೊಂದಾ ಣಿಕೆ ಮಾಡಿಕೊಂಡಿವೆ ಎಂದು ಕಾಂಗ್ರೆಸ್ ನಾಯಕ ಎಸ್. ಜೈಪಾಲ್ ರೆಡ್ಡಿ ಆರೋಪಿಸಿ ದ್ದಾರೆ. “ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಗೋಚರವಾದ ಅಲೆ ಇದೆ. ಹೀಗಾಗಿ, ಪಕ್ಷವೇ ಚುನಾವಣೆಯಲ್ಲಿ ಜಯ ಗಳಿಸಲಿದೆ ಎಂದಿದ್ದಾರೆ.
172 ಅಭ್ಯರ್ಥಿಗಳು: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶನಿವಾರ 155 ಮಂದಿ ಅಭ್ಯರ್ಥಿ ಗಳ ಮೊದಲ ಪಟ್ಟಿ, ರವಿವಾರ 17 ಮಂದಿಯ 2ನೇ ಪಟ್ಟಿ ಬಿಡುಗಡೆ ಮಾಡಿದೆ.
ಎನ್‌ಟಿಆರ್ ಹುಟ್ಟಿಬರಲಿ
ಮುಂದಿನ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಕಾಂಗ್ರೆಸ್ ಜತೆಗೆ ಕೈಜೋಡಿಸಲು ಮುಂದಾಗಿ ರುವ ಟಿಡಿಪಿಯ ನಿಲುವಿಗೆ ಪಕ್ಷದ ಸಂಸ್ಥಾಪಕ ಎನ್.ಟಿ. ರಾಮರಾವ್ ಪತ್ನಿ ಲಕ್ಷ್ಮೀ ಪಾರ್ವತಿ ವಿಶೇಷ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬೆಳವಣಿಗೆ ತಡೆಯಲು ಅಸುನೀಗಿರುವ ಪತಿ ಮತ್ತೆ ಹುಟ್ಟಿ ಬರಬೇಕು ಎಂದು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಅವರ ಸಮಾಧಿ ಮುಂದೆ ನಾಲ್ಕು ಪುಟಗಳ ಪತ್ರವನ್ನೂ ಬರೆದಿದ್ದಾರೆ.