Advertisement

ಛತ್ತೀಸ್‌ಗಢ : ಪೊಲೀಸ್‌ ಎನ್‌ಕೌಂಟರ್‌ಗೆ ಓರ್ವ ನಕ್ಸಲ್‌ ಬಲಿ

12:38 PM Apr 05, 2018 | Team Udayavani |

ರಾಯಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್‌ ಹತನಾಗಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

Advertisement

ಜಿಲ್ಲೆಯ ಮೀಸಲು ಪಡೆಯ ತಂಡ ಇಟಾಂಪಾರಾ ಗ್ರಾಮದ ಸಮೀಪದ ಅರಣ್ಯದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ಹೋಗಿದ್ದಾಗ ಅಲ್ಲಿದ್ದ ನಕ್ಸಲರು ಗುಂಡಿನ ಕಾಳಗ ನಡೆಸಿದರು. ಆಗ ಓರ್ವ ನಕ್ಸಲ್‌ ಪೊಲೀಸ್‌ ಗುಂಡಿಗೆ ಬಲಿಯಾದ ಎಂದು ಬಿಜಾಪುರ ಪೊಲೀಸ್‌ ಸುಪರಿಂಟೆಂಡೆಂಟ್‌ ಮೋಹಿತ್‌ ಗರ್ಗ್‌ ತಿಳಿಸಿದ್ದಾರೆ.

ನಕ್ಸಲರು ಅಡಗಿಕೊಂಡಿರುವ ಇಟಾಂಪಾರಾ ಗ್ರಾಮ ಸಮೀಪದ ಅರಣ್ಯ ಪ್ರದೇಶವನ್ನು ಡಿಆರ್‌ಜಿ ಪಡೆ ಸುತ್ತು ವರಿದಿದ್ದು ಕಾರ್ಯಾಚರಣೆ ಇನ್ನೂ ಮುಂದುವರಿದಿದೆ; ಆದರೆ ಬಲವಾದ ಗಾಳಿ ಮತ್ತು ಮಳೆ ಕಾರ್ಯಾಚರಣೆಗೆ ಸವಾಲಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next