Advertisement
ಈಚೆಗೆ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬೆನ್ನಲ್ಲೇ ತಮಿಳುನಾಡಿನ ತಿರಪತ್ತೂರು ಪೊಲೀಸ್ ಠಾಣೆಯಲ್ಲಿ ಹೊಸಗದ್ದೆ ಪ್ರಭಾ ಶರಣಾಗಿದ್ದಾಳೆ. ಪತಿ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೇ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡು ವೆಲ್ಲೂರು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ. ಪತಿ ಬಂಧನದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಪತಿ ಕೃಷ್ಣಮೂರ್ತಿ ಬಂಧನದ ಬಳಿಕ ತಾನೂ ಪೊಲೀಸರಿಗೆ ಶರಣಾಗಿದ್ದಾಳೆ.
Related Articles
Advertisement
ಇದನ್ನೂ ಓದಿ:ಫಿಲಿಪೈನ್ಸ್ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 112 ಸಾವು
ಆದರೆ ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾಗುತ್ತಿದ್ದಂತೆ, ನಕ್ಸಲರ ಜಾಡಿನ ಮಾಹಿತಿ ಪೊಲೀಸರಿಗೆ ಲಭಿಸತೊಡಗಿತ್ತು. ಕಳೆದ ತಿಂಗಳಷ್ಟೆ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾದರು. ಇದಾದ ಒಂದು ತಿಂಗಳಲ್ಲಿ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಮಲೆನಾಡಿನ ಹಲವು ನಕ್ಸಲರು ಈಗ ಶರಣಾಗತಿಯಾಗಲು ನಿರ್ಧರಿಸಿದ್ದು, ಅವರ ಶರಣಾಗತಿಗೆ ಪೂರಕ ವೇದಿಕೆಯನ್ನು ಕರ್ನಾಟಕ ಪೊಲೀಸರು ಕಲ್ಪಿಸಬೇಕಿದೆ.
ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ 40ಕ್ಕೂ ಅಧಿಕ ಕೇಸ್‌ಗಳಿವೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ, ಬಸ್ ಸುಟ್ಟ ಪ್ರಕರಣ ಸೇರಿದಂತೆ ಶಿವಮೊಗ್ಗದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದೆ. ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿತ್ತು. ಹೊಸಗದ್ದೆ ಪ್ರಭಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಕೊನೆಗೂ ಪೊಲೀಸರಿಗೆ ಶರಣಾಗಿದ್ದಾಳೆ.