Advertisement

CRPF: ನಕ್ಸಲ್‌ ಎನ್‌ಕೌಂಟರ್‌- ಸಿಆರ್‌ಪಿಎಫ್ ಸಬ್‌ಇನ್‌ಸ್ಪೆಕ್ಟರ್‌ ಹುತಾತ್ಮ

08:08 PM Dec 17, 2023 | Pranav MS |

ರಾಯ್ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಭಾನುವಾರ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್ ಸಬ್‌-ಇನ್‌ಸ್ಪೆಕ್ಟರ್‌ವೊಬ್ಬರು ಮೃತಪಟ್ಟು, ಕಾನ್‌ಸ್ಟೇಬಲ್‌ವೊಬ್ಬರು ಗಾಯಗೊಂಡಿದ್ದಾರೆ. ಈ ಮೂಲಕ ಪ್ರಸಕ್ತ ತಿಂಗಳೊಂದರಲ್ಲೇ ನಕ್ಸಲರೊಂದಿಗಿನ ಎನ್‌ಕೌಂಟರ್‌ ವೇಳೆ ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಯ ಸಂಖ್ಯೆ 3ಕ್ಕೇರಿದ್ದು, ಗಾಯಗೊಂಡವರ ಸಂಖ್ಯೆ 7ಕ್ಕೇರಿದಂತಾಗಿದೆ.

Advertisement

ಜಗರ್‌ಗುಂಡಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ನಕ್ಸಲ್‌ನಿಗ್ರಹ ಕಾರ್ಯಾಚರಣೆ ವೇಳೆ, ಅಡಗಿದ್ದ ನಕ್ಸಲರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾರೆ. ಕೆಲ ಹೊತ್ತು ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರ ಮೂಲದ ಎಸ್‌ಐ ಸುಧಾಕರ್‌ ರೆಡ್ಡಿ ಹುತಾತ್ಮರಾಗಿದ್ದಾರೆ. ಕಾನ್‌ಸ್ಟೇಬಲ್‌ ರಾಮು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next