ಬಾಲಾಘಾಟ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶನಿವಾರ ಇಬ್ಬರು ಪ್ರಮುಖ ನಕ್ಸಲ್ ಮಹಿಳೆಯರನ್ನು ಎನ್‌ಕೌಂಟರ್ ಮಾಡಿದ್ದಾರೆ. ಇವರ ತಲೆಗೆ ತಲಾ 14 ಲಕ್ಷ ರೂ.ಗಳ ಬಹುಮಾನವನ್ನು ಮಧ್ಯ
ಪ್ರದೇಶ ಪೊಲೀಸರು ಘೋಷಿಸಿದ್ದರು. ಮಾವೋವಾದಿ ಸಂಘಟನೆಗೆ ಸೇರಿದ ಭೋರಮ್‌ದೇವ್ ಸಮಿತಿಯ ಕಮಾಂಡರ್, ಕ್ಷೇತ್ರ ಸಮಿತಿ ಸದಸ್ಯೆ (ಎಸಿಎಂ) ಸುನೀತಾ ಹಾಗೂ ವಿಸ್ತರ್ ದಲಮ್‌ನ ಕ್ಷೇತ್ರ ಸಮಿತಿ ಸದಸ್ಯೆ ಸರಿತಾ ಕಾಟಿಯಾ ಮೃತರು. ಶನಿವಾರ ಮುಂಜಾನೆ ಬಾಲಾಘಾಟ್ ಜಿಲ್ಲೆಯ ಗಹಿì ಪೊಲೀಸ್ ಠಾಣೆ ವ್ಯಾಪ್ತಿಯ ಕಡ್ಲಾ ಅರಣ್ಯ ಪ್ರದೇಶದಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇವರಿಂದ ಬಂದೂಕುಗಳು, ಕಾಟ್ರಿìಡ್ಜ್ಗಳು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಕಡ್ಲಾ ಅರಣ್ಯದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.