Advertisement

ನಕ್ಸಲರ ನೆತ್ತರ ಹೆಜ್ಜೆ : ದಶಕದಲ್ಲಿ ದೇಶ ಕಂಡ ನಕ್ಸಲ್‌ ದಾಳಿ

12:56 AM Apr 05, 2021 | Team Udayavani |

ನಕ್ಸಲರ ಅಟ್ಟಹಾಸ ಅಡಗಿ ಹಲವು ಪ್ರದೇಶಗಳಲ್ಲಿ ಶಾಂತಿ- ನೆಮ್ಮದಿ ಮನೆಮಾಡಿದೆ. ಆದರೆ ಮಾವೋವಾದಿಗಳ “ರೆಡ್‌ ಕಾರಿಡಾರ್‌’ನ ಪ್ರಮುಖ ರಾಜ್ಯಗಳಲ್ಲಿ ಇನ್ನೂ ಕೆಂಪು ರಕ್ಕಸರ ಅಟ್ಟಹಾಸ ಜೀವಂತವಿದೆ. ಈ 10 ವರ್ಷದಲ್ಲಿ ಬೆಚ್ಚಿ ಬೀಳಿಸಿದ ಪ್ರಮುಖ ನಕ್ಸಲ್‌ ದಾಳಿಗಳ ಕಿರುನೋಟ ಇಲ್ಲಿದೆ…

Advertisement

2010, ಫೆ.15, ಸಿಲ್ಡಾ (ಪ. ಬಂಗಾಲ)
2010! ಭಾರತಕ್ಕೆ ದುಬಾರಿ ವರ್ಷ. ನಕ್ಸಲರ ನಿರ್ಮೂಲನೆಗಾಗಿ ಪ. ಬಂಗಾಲ ಸರಕಾರ “ಆಪರೇಷನ್‌ ಪೀಸ್‌ ಹಂಟ್‌’ ಕಾರ್ಯಾಪಡೆ ರಚಿಸಿತ್ತು. ಇದರಿಂದ ರೊಚ್ಚಿಗೆದ್ದ ಮಾವೋವಾದಿಗಳು ಸಿಲ್ಡಾ ಕ್ಯಾಂಪ್‌ ಮೇಲೆ ದಾಳಿ ನಡೆಸಿ 24 ಅರೆಸೇನಾ ಸಿಬಂದಿಯನ್ನು ಬರ್ಬರವಾಗಿ ಹತ್ಯೆಗೈದಿದ್ದರು.

2010, ಎ.6., ದಾಂತೇವಾಡ (ಚತ್ತೀಸ್‌ಗಢ)
ದಾಂತೇವಾಡ ಜಿಲ್ಲೆಯಲ್ಲಿ 300ಕ್ಕೂ ಅಧಿಕ ನಕ್ಸಲರು ತರಬೇತಿಯಲ್ಲಿ ನಿರತರಾಗಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ಗೈದಿದ್ದರು. ಈ ವೇಳೆ 76 ಯೋಧರು ಹುತಾತ್ಮರಾಗಿ, 8 ಮಾವೋವಾದಿಗಳು ಹತರಾಗಿದ್ದರು.

2010, ಮೇ 28, ಪ. ಮಿಡ್ನಾಪುರ (ಪ. ಬಂಗಾಲ)
ಕೋಲ್ಕತಾ- ಮುಂಬಯಿ”ಜ್ಞಾನೇಶ್ವರಿ ಎಕ್ಸ್‌ಪ್ರಸ್‌’ ರೈಲನ್ನು ನಡುರಾತ್ರಿ ನಕ್ಸಲರು ಹಳಿ ತಪ್ಪಿಸಿದ ಪರಿಣಾಮ, ಟ್ರೈನ್‌ ಎದುರು ಬರುತ್ತಿದ್ದ ಗೂಡ್ಸ್‌ ರೈಲಿಗೆ ಢಿಕ್ಕಿ ಹೊಡೆದು 148 ಮಂದಿ ಸಾವನ್ನಪ್ಪಿದ್ದರು.

2012, ಮಾ.27, ಗಡಚಿರೋಲಿ (ಮಹಾರಾಷ್ಟ್ರ )
40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್‌ ಅನ್ನು ಟಾರ್ಗೆಟ್‌ ಮಾಡಿ, ನಕ್ಸಲರು ನೆಲಬಾಂಬ್‌ ಸ್ಫೋಟಿಸಿದ್ದರು. 12 ಯೋಧರ ಸ್ಥಳದಲ್ಲೇ ಸಾವನ್ನಪ್ಪಿ, ಇತರ 28 ಮಂದಿಗೆ ಗಂಭೀರ ಗಾಯವಾಗಿತ್ತು.

Advertisement

2014, ಮಾ.11, ತೊಂಗಾ³ಲ್‌ (ಚತ್ತೀಸ್‌ಗಢ)
ಸುಕ್ಮಾ ಜಿಲ್ಲೆಯ ತೊಂಗ್ಬಾಲ್‌ನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದ ವೇಳೆ ನಕ್ಸಲರು ದಾಳಿ ನಡೆಸಿ, 15 ಸಿಆರ್‌ಪಿಎಫ್ ಯೋಧರು, ಒಬ್ಬ ನಾಗರಿಕ ಹುತಾತ್ಮರಾಗಿದ್ದರು. 2017ರಲ್ಲೂ ಸುಕ್ಮಾ ಜಿಲ್ಲೆಯಲ್ಲೇ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ನಡೆದ ನಕ್ಸಲರ ದಾಳಿಗೆ 25 ಯೋಧರು ವೀರ ಮರಣವನ್ನಪ್ಪಿದ್ದರು.

2019, ಮೇ 1, ಗಡಚಿರೋಲಿ (ಮಹಾರಾಷ್ಟ್ರ)
ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ 15 ಪೊಲೀಸರು ವೀರ ಮರಣ ಅಪ್ಪಿದ್ದರು. ಬಳಿಕ 25 ವಾಹನಗಳಿಗೆ ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದ್ದರು.

2020, ಮಾರ್ಚ್‌ 21, ಸುಕ್ಮಾ (ಚತ್ತೀಸಗಡ)
ಸುಕ್ಮಾ ಜಿಲ್ಲೆಯ ಮಿನಾ³ ಅರಣ್ಯದಲ್ಲಿ 23 ನಕ್ಸಲರನ್ನು ಹೊಡೆದುರುಳಿಸಲಾಗಿತ್ತು. ಇದೇ ಎನ್ ಕೌಂಟರ್‌ನಲ್ಲಿ 17 ವೀರಯೋಧರು ಹುತಾತ್ಮರಾಗಿದ್ದರು.

ನಕ್ಸಲ್‌ ನಿಗ್ರಹಕ್ಕೆ ಕ್ರಮಗಳು
ಪೊಲೀಸ್‌ ಪಡೆಗೆ ಆಧುನಿಕ ಸ್ಪರ್ಶ, ಕೋಬ್ರಾ ಪಡೆ ರಚನೆ, ಗುಪ್ತಚರ ಜಾಲ ಹೆಚ್ಚಳ ರಾಜ್ಯದ ಭದ್ರತ ಸಂಬಂಧಿ ಮೂಲ ಸೌಕರ್ಯ ಹೆಚ್ಚಳ, ನಕ್ಸಲ್‌ ವಲಯಗಳಲ್ಲಿ ವಿಶೇಷ ಮೂಲ ಸೌಕರ್ಯ ಯೋಜನೆ ಭದ್ರತ ಪಡೆಯ ಬಲವರ್ಧನೆಗೆ “ಸಮಾಧಾನ್‌’ ಯೋಜನೆ, ಸಿಪಿಐ (ಮಾವೋವಾದಿ) ಸಂಘಟನೆಗೆ ನಿಷೇಧ.

Advertisement

Udayavani is now on Telegram. Click here to join our channel and stay updated with the latest news.

Next