ಮುಂಬಯಿ: ಯೋಧರನ್ನು ಕ್ಷಿಪ್ರವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ದೇಶದ ಸೇನಾ ಪಡೆ ಶೀಘ್ರವೇ ಡ್ರೋನ್‌ಗಳ ಬಳಕೆ ಮಾಡಲಿದೆ. ಈ ನಿಟ್ಟಿನಲ್ಲಿ ಪ್ರಥಮ ಎಂಬಂತೆ ಭಾರತೀಯ ನೌಕಾಪಡೆ “ವರುಣ’ ಎಂಬ ಹೆಸರಿನ ಡ್ರೋನ್ ಅನ್ನು ಬಳಕೆ ಮಾಡಲು ಮುಂದಾಗಿದೆ.
ಸಮುದ್ರ ತೀರದಿಂದ ಕಡಲ ನಡುವೆ ಇರುವ ಯುದ್ಧ ನೌಕೆಗೆ ಯೋಧರನ್ನು ಕಳುಹಿಸುವ ನಿಟ್ಟಿನಲ್ಲಿ ಅದನ್ನು ಬಳಕೆ ಮಾಡಲಾಗುತ್ತದೆ.
ಪುಣೆ ಮೂಲದ ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್ ಪ್ರೈ.ಲಿ. ಎಂಬ ರಕ್ಷಣ ಸ್ಟಾರ್ಟ್‌ಅಪ್ ಸಂಸ್ಥೆ ಹೊಸ ಮಾದರಿಯ ಡ್ರೋನ್ ಅನ್ನು ಸಂಶೋಧಿಸಿ ಅಭಿವೃದ್ಧಿಗೊಳಿಸಿದೆ.
ಕಂಪೆನಿ ಹೇಳಿಕೊಂಡಿರುವ ಪ್ರಕಾರ ಡ್ರೋನ್ 130 ಕೆ.ಜಿ. ಭಾರವನ್ನು ಹೊತ್ತುಕೊಂಡು 25 ಕಿ.ಮೀ. ದೂರವನ್ನು ಮೂವತ್ತು ನಿಮಿಷಗಳಲ್ಲಿ ತಲುಪಲಿದೆ. ರಿಮೋಟ್ ಕಂಟ್ರೋಲ್ ಮೂಲಕ ಅದಕ್ಕೆ ಫೀಡ್ ಮಾಡಿದ ದಾರಿಗಳಲ್ಲಿ ಮಾತ್ರ ಸಂಚರಿಸಲಿದೆ. ಅದನ್ನು ಏರ್ ಆ್ಯಂಬುಲೆನ್ಸ್, ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲು ಸಾಧ್ಯವಿದೆ.