Advertisement

ಭಾರತೀಯ ನೌಕಾಪಡೆಗೆ ಮತ್ತಷ್ಟು  ಬಲ

10:11 AM Dec 04, 2018 | Team Udayavani |

ಹೊಸದಿಲ್ಲಿ: ಎರಡು ದಿನಗಳ ಹಿಂದಷ್ಟೇ 3,000 ಕೋಟಿ ರೂ.ಗಳ ಶಸ್ತ್ರಾಸ್ತ್ರ  ಖರೀದಿ ಹಾಗೂ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಷ್ಯಾದ ಎರಡು ಯುದ್ಧ ನೌಕೆಗಳನ್ನು ಖರೀದಿಸಲು ಸಮ್ಮತಿಸಿದ್ದ ಕೇಂದ್ರ ಸರಕಾರವು ನೌಕಾಪಡೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 56 ಸಮರ ನೌಕೆಗಳು ಹಾಗೂ ಜಲಾಂತರ್ಗಾಮಿಗಳು ನೌಕಾಪಡೆಗೆ ಶೀಘ್ರವೇ ಸೇರ್ಪಡೆಯಾಗಲಿವೆ. ಜತೆಗೆ ಈಗಾಗಲೇ ಯುದ್ಧ ವಿಮಾನ ಹೊತ್ತು ಸಾಗುವ ಸಾಮರ್ಥ್ಯವಿರುವ ನೌಕೆಗಳ ಜತೆಗೆ ಅದೇ ಮಾದರಿಯ ಮತ್ತೂಂದು ನೌಕೆಯನ್ನು ಖರೀದಿಸಲು ನಿರ್ಧರಿಸಲಾಗಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ, ‘ನೌಕಾಪಡೆಗಾಗಿ ಈಗಾಗಲೇ 32 ಯುದ್ಧ ನೌಕೆಗಳು ನಿರ್ಮಾಣವಾಗುತ್ತಿವೆ. ಹೊಸ 56 ಯುದ್ಧ ನೌಕೆಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಭಾರತದ ಸಾಗರ ಗಡಿಯೊಳಗೆ ಅಂದಾಜು 2.5 ಲಕ್ಷ ಮೀನುಗಾರರ ದೋಣಿಗಳನ್ನು ಸ್ವಯಂಚಾಲಿತವಾಗಿ ಗುರುತಿಸಬಲ್ಲ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸುವ ಕಾರ್ಯ ಶುರುವಾಗಿದೆ ಎಂದಿದ್ದಾರೆ.

ವೈಫ‌ಲ್ಯವಲ್ಲ
ಅಂಡಮಾನ್‌ ಸಮೀಪದ ಸೆಂಟಿನೆಲ್‌ ದ್ವೀಪದ ಆದಿವಾಸಿಗಳಿಂದ ಇತ್ತೀಚೆಗೆ ಜಾನ್‌ ಅಲೆನ್‌ ಚೌ ಎಂಬ ಅಮೆರಿಕದ ಪ್ರಜೆ ಹತ್ಯೆಗೀಡಾದ ಪ್ರಕರಣಕ್ಕೆ ನೌಕಾ ಭದ್ರತೆಯಲ್ಲಾದ ವೈಫ‌ಲ್ಯ ಕಾರಣವಲ್ಲ ಎಂದು ಲಾಂಬಾ ಸ್ಪಷ್ಟನೆ ನೀಡಿದ್ದಾರೆ.

ಗಂಭೀರ ಕಾರ್ಯಕ್ರಮಕ್ಕೆ ಐಎನ್‌ಎಸ್‌ ವಿರಾಟ್‌
59 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಗೊಂಡಿರುವ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನು ಮುಂದೆ ಘನತೆಯ ಕಾರ್ಯಕ್ರಮಗಳಿಗಾಗಿ ಮಾತ್ರವೇ ಬಳಸಲು ತೀರ್ಮಾನಿಸಲಾಗಿದೆ ಎಂದು ವೈಸ್‌ ಅಡ್ಮಿರಲ್‌ ಗಿರೀಶ್‌ ಲೂಥ್ರಾ ತಿಳಿಸಿದ್ದಾರೆ. ವಿರಾಟ್‌ ನಿವೃತ್ತಿ ಅನಂತರ ಅನೇಕ ರಾಜ್ಯಗಳು ಅದನ್ನು ತಮ್ಮ ಪ್ರವಾಸೋದ್ಯಮದ ಭಾಗವಾಗಿ ಅಥವಾ ಮ್ಯೂಸಿಯಂ ಆಗಿ ಪರಿವರ್ತಿಸಲು ಅವಕಾಶ ನೀಡುವಂತೆ ಕೋರಿವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಘನತೆಯುಕ್ತ ಚಟುವಟಿಕೆಗಳನ್ನು ನಡೆಸುವುದಿದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದವರು ಹೇಳಿದರು.

ಹಿಂದೂ ಮಹಾಸಾಗರದಲ್ಲಿ ಚೀನದ ನೌಕಾಪಡೆ ಆಗಾಗ ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಭಾರತೀಯ ನೌಕಾಪಡೆಗೆ ಈ ಬಗ್ಗೆ ಮಾಹಿತಿಯಿದ್ದು, ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ.
– ಎನ್‌.ಎಂ. ಅಲೋಕ್‌ ಭಟ್ನಾಗರ್‌, ನೌಕಾಪಡೆಯ ರಿಯರ್‌ ಅಡ್ಮಿರಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next