Advertisement

ನಾವೂರು: ಕಾಂಕ್ರೀಟ್‌ ಮಿಶ್ರಣ ಘಟಕದ ವಿರುದ್ಧ ಡಿಸಿಗೆ ದೂರು

09:08 PM Mar 07, 2023 | Team Udayavani |

ಬಂಟ್ವಾಳ: ನಾವೂರು ಗ್ರಾಮದ ಅಗ್ರಹಾರ ಬೀದಿಯಲ್ಲಿ ಕಾರ್ಯಾಚರಿಸುತ್ತಿರುವ ಸಿಮೆಂಟ್‌ ಕಾಂಕ್ರೀಟ್‌ ಮಿಶ್ರಣ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಾರ ಬೀದಿ ನಿವಾಸಿಗಳು ದ.ಕ.ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Advertisement

ಸಿಮೆಂಟ್‌ ಕಾಂಕ್ರೀಟ್‌ ಮಿಶ್ರಣ ಘಟಕವು ಕಳೆದ 3 ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದು, ಇದರ ಸ್ಥಾಪನೆಗೆ ಸಂಬಂಧಿಸಿ ಯಾವುದೇ ನಾಮಫಲಕ, ಯೋಜನೆಗೆ ಸಂಬಂಧಪಟ್ಟ ವಿವರಗಳನ್ನು ಘಟಕದ ಮುಂದೆ ಹಾಕಿಲ್ಲ. ಜನವಸತಿಗೆ ಪ್ರದೇಶದಲ್ಲೇ ಮಾಲಿನ್ಯಕಾರಕ ಘಟಕದ ಸ್ಥಾಪನೆಗೆ ಅನುಮತಿ ನೀಡಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ ಎಂಬ ಸಂಶಯ ಕೂಡ ಮೂಡುತ್ತಿದೆ.

ಇಲ್ಲಿನ ಧೂಳನ್ನು ನಿಯಂತ್ರಣದ ತಾಂತ್ರಿಕ ವ್ಯವಸ್ಥೆ ಕೂಡ ಇಲ್ಲವಾಗಿದ್ದು, ಇದರಿಂದ ಅಲರ್ಜಿ, ಶ್ವಾಸಕೋಶದ ಸೋಂಕು ಮೊದಲಾದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿವೆ. ಮಕ್ಕಳು ಮತ್ತು ಹಿರಿಯ ನಾಗರಿಕರು ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ. ಮನೆಗಳ ತುಂಬಾ ಸಿಮೆಂಟಿನ ಧೂಳು ತುಂಬಿಕೊಳ್ಳುತ್ತಿದ್ದು ಧೂಳಿನಿಂದ ಬಾವಿ, ಟ್ಯಾಂಕ್‌ ನೀರು ಕಲುಷಿತಗೊಳ್ಳುವ ಜತೆ ತೋಟ, ತರಕಾರಿ ಬೆಳೆಗಳಿಗೂ ಹಾನಿಯಾಗುತ್ತಿದೆ ಎಂದು ಡಿಸಿಯವರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next