Advertisement
ನವರಾತ್ರಿಯ ಆಚರಣೆಯ ಹತ್ತು ಕಡೆಯಲ್ಲಿ ಹತ್ತಾರು ಬಗೆ. ಈ ಸಮಯದಲ್ಲಿ ತಿರುಪತಿಯಲ್ಲಿ ಹತ್ತಾರು ಉತ್ಸವಗಳೊಂದಿಗೆ ಬ್ರಹ್ಮೋತ್ಸವ ನಡೆಯುತ್ತದೆ. ಕರ್ನಾಟಕದ ಮನೆ ಮನೆಯಲ್ಲೂ ನಮ್ಮ ದೇಶದ ಮೂಲೆಮೂಲೆಯಲ್ಲೂ ಮಣ್ಣಿನ ಪ್ರತೀಕವನ್ನು (ಬೊಂಬೆ) ಇಟ್ಟು ಪೂಜಿಸಿ ಸಿಹಿತಿಂಡಿ ವಿತರಣೆಯ ಸಡಗರ ನಡೆಯುತ್ತದೆ. ತುಳುನಾಡಿನ ಪರಿಸರದಲ್ಲಿ ಒಂಬತ್ತು ದಿನ ಹಗಲು-ರಾತ್ರಿಗಳಲ್ಲಿ ದೇವೀ ಮಹಾತೆ¾ ಪಾರಾಯಣ, ಪಂಚಾಮೃತ ಅಭಿಷೇಕ ಪೂರ್ವಕ ಕಲೊ³àಕ್ತ ಪೂಜೆ, ಸುವಾಸಿನೀ ಆರಾಧನೆಗಳು ಶ್ರೀದೇವಿಯ ದೇವಾಲಯಗಳಲ್ಲಿ ನಡೆಯುತ್ತವೆ.
Related Articles
Advertisement
ಲಲಿತಾ ಪಂಚಮಿಐದನೇ ದಿನ ಲಲಿತಾ ಪಂಚಮೀ “ಹೃದಯೇ ಲಲಿತಾದೇವೀ’ ಎಂದು ಕವಚ ಮಂತ್ರವು ಉಲ್ಲೇಖೀಸುವ ಹೃದಯದಲ್ಲಿ ನಿಂತು ಲಾಲಿತ್ಯ ವನ್ನಿತ್ತು ಪೊರೆಯುವ “ಲಲಿತಾ’ ಎಂಬ ಹೆಸರಿನ ದುರ್ಗೆಯನ್ನು ನಾನಾ ತೆರನಾದ ಪರಿಮಳ ಯುಕ್ತ ಪುಷ್ಪಗಳಿಂದ ಅರ್ಚನೆ ಮಾಡಿ ವಿಶಿಷ್ಟ ವಾಗಿ ಅನ್ನಾರಾಧನೆಯನ್ನು ಮಾಡುತ್ತಾರೆ. ಈ ದಿನದ ಪೂಜೆಯಿಂದ ಸಂತುಷ್ಟಳಾದ ಭಗವತಿ ಲಲಿತೆಯು ನಮ್ಮ ಮನಸ್ಸನ್ನು ಸುಖ ಸಂತೋಷದೆಡೆಗೆ ಒಯ್ಯುತ್ತಾಳೆ. ಸರಸ್ವತೀ ಪೂಜೆ
ನವರಾತ್ರಿಯ ಮಧ್ಯೆ ಬರುವ ಮೂಲಾ ನಕ್ಷತ್ರದಂದು ಸರಸ್ವತೀ ಪೂಜೆಯ ಆರಂಭ. ಶ್ರವಣ ನಕ್ಷತ್ರ ಕೊನೆಯ ಭಾಗದಲ್ಲಿ ಪೂಜಾ ವಿಸರ್ಜನೆ ಮಾಡುವುದು. “ಮೂಲೇನಾ ವಾಹಯೇದ್ ದೇವೀಂ ಶ್ರವಣಾಂತೇ ವಿಸರ್ಜಯೇತ್’ ಎಂಬುದು ಶಾಸ್ತ್ರದ ಮಾತು. ಮೂಲ, ಶ್ರವಣಗಳು ಮಧ್ಯಾಹ್ನ ವ್ಯಾಪಿನಿಯಾಗಿರಬೇಕು. ಮೂಲಾ ನಕ್ಷತ್ರದ ದಿನದಂದು ದೇವ ಪೂಜೆಯಾದ ಮೇಲೆ ದೇವರ ಸನಿಹದಲ್ಲಿ ಮಣಿ ವ್ಯಾಸಪೀಠವನ್ನು ಇಟ್ಟು ಪುಸ್ತಕಗಳನ್ನು ಪ್ರೇರಿಸಿ ಇಡಬೇಕು. ಗೀತಾ ಪುಸ್ತಕ , ವೇದ ಪುಸ್ತಕವಲ್ಲದೆ ಪ್ರಾಚೀನ ತಾಡವಾಲೆಗಳಿದ್ದಲ್ಲಿ ಅದನ್ನೂ ಶುಚಿಗೊಳಿಸಿ ಪೀಠದಲ್ಲಿಡಬೇಕು. ವೀಣೆ, ಅಕ್ಷರ ಮಾಲೆ ಗಳನ್ನೂ ಸನಿಹದಲ್ಲಿಟ್ಟು ವ್ಯಾಸ ಪ್ರತಿಷ್ಠೆ ಮಾಡಿ ಶಾರದೆಯನ್ನು ಪೂಜಿಸಬೇಕು. ಪುಷ್ಪಾಕ್ಷತೆಯನ್ನು ಹಾಕಿ ವ್ಯಾಸದೇವರನ್ನೂ ಸರಸ್ವತೀ ದೇವಿಯನ್ನೂ ಪುಸ್ತಕದಲ್ಲಿ ಆವಾಹಿಸಬೇಕು ಮತ್ತು ಶ್ರೀ ದೇವರಿಗೆ ಮಧುರ ಪದಾರ್ಥವನ್ನು ನಿವೇದಿಸಿ ಆರತಿಯನ್ನು ಬೆಳಗಿಸಬೇಕು. ಅನಂತರ ಪ್ರಾರ್ಥನೆ ಮಾಡಬೇಕು.
ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀತ್ವಾಮಹಂ ಪ್ರಾರ್ಥಯೇನ್ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿಮೇ
ಎಂಬುದಾಗಿ ಪ್ರಾರ್ಥಿಸಿ ಶ್ರೀಕೃಷ್ಣಾರ್ಪಣವೆನ್ನಬೇಕು. ಪ್ರತೀದಿನ ಅಂದರೆ ಪ್ರತಿಷ್ಠೆ ಅನಂತರ ಸಪ್ತಮಿ, ಅಷ್ಟಮಿ, ನವಮಿಯಂದು ಪೂಜೆಯಾಗಿ ವಿಜಯದಶಮಿಯಂದು ಶ್ರವಣ ನಕ್ಷತ್ರದ ಮಧ್ಯಾಹ್ನ ವ್ಯಾಪಿನಿಯಾದ ಸಮಯ ದಲ್ಲಿ ಶಾರದಾ ಪೂಜೆ ಮಾಡಿ ಶಾರದಾ ವಿಸರ್ಜನೆ ಮಾಡಬೇಕು. ಈ ದಿನದ ತನಕ ಅನಧ್ಯಯನ ಇರುತ್ತದೆ. ವೇದ ವೇದಾಂತಗಳ ಪಾಠ ಮಾಡುವಂತಿಲ್ಲ. ಈ ದಿನ ನಾಲ್ಕು ಅಕ್ಷರವನ್ನು ಪ್ರತಿಯೊಬ್ಬರೂ ಬರೆಯಬೇಕು. ಈ ದಿನ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವ ಸಂಪ್ರದಾಯವಿದೆ. ಆಯುಧ ಪೂಜೆ
ಮಹಾನವಮಿಯಂದು ತಪ್ಪಿದರೆ ವಿಜಯ ದಶಮಿಯಂದು ಆಯುಧಪೂಜೆ ಯನ್ನು ಮಾಡಬೇಕು. ಆ ಸಮಯದಲ್ಲಿ ನಮ್ಮ ಸೌಕರ್ಯದ ವಾಹನಗಳನ್ನು, ಬೃಹತ್ ಯಂತ್ರಗಳನ್ನು ಹಾಗೆಯೇ ಇತರ ಮಾರಕ ಆಯುಧಗಳನ್ನೂ ತೊಳೆದು ಪೂಜಿಸಬೇಕು. ಯಂತ್ರ ದೇವತೆಗಳಾದ ದುರ್ಗೆ ಮತ್ತು ನರಸಿಂಹ ದೇವರನ್ನು ಪೂಜಿಸಿ ಪ್ರಾರ್ಥನೆ ಮಾಡಬೇಕು. ಮಂಗಳಾರತಿ ಮಾಡಿ ದೃಷ್ಟಿ ತೆಗೆಯಬೇಕು. ಬೂದು ಕುಂಬಳಕಾಯಿ ಅಥವಾ ತೆಂಗಿನಕಾಯಿಯಲ್ಲಿ ಕರ್ಪೂರ ದೀಪವನ್ನು ಹಚ್ಚಿ ವಾಹನಾದಿಗಳಿಗೆ ಒಂದು ಸುತ್ತು ತಂದು ನೆಲಕ್ಕೆ ಹೊಡೆದು ಒಡೆಯಬೇಕು. ಪ್ರಾರ್ಥಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಯಂತ್ರವನ್ನು ಚಾಲನೆ ಮಾಡಬೇಕು. ಅಶ್ವಯುಜ ಮಾಸದ ಶುಕ್ಲ ಪಕ್ಷದ ಈ ದಿನಗಳು ನಮ್ಮನ್ನು ಭಗ ವಂತನ ಚಿಂತನೆಯೆಡೆಗೆ ಒಯ್ಯುತ್ತದೆ. ದೈಹಿಕ, ಮಾನಸಿಕ ಮತ್ತು ವ್ಯವಹಾರಿಕವಾದ ತೊಂದರೆಗಳು ನಿವಾರಣೆಯಾಗಿ ಸಸ್ಯ ಸಂಪತ್ತು ಸಮೃದ್ಧಿಯಾಗಿ, ಸಕಲ ಪ್ರಾಣಿಗಳು ಮತ್ತು ಮನುಕುಲ ಆರೋಗ್ಯದಿಂದ ಬಾಳುವಂತಾಗಲಿ ಎಂದು ನಾವೆಲ್ಲರೂ ಜಗದಂಬಿಕೆಯಲ್ಲಿ ಪ್ರಾರ್ಥಿಸುವ. – ವಿದ್ವಾನ್ ಜನಾರ್ದನ ಆಚಾರ್ಯ, ನಂದಿಕೂರು