Advertisement

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮಕ್ಕೆ ಚಾಲನೆ

01:05 PM Oct 07, 2021 | Team Udayavani |

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಡಗರ ಸಂಭ್ರಮದ ಮಂಗಳೂರು ದಸರಾಗೆ ಗುರುವಾರ ಸಂಭ್ರದ ಚಾಲನೆ ದೊರಕಿದೆ.

Advertisement

ಬೆಳಗ್ಗೆ 9ಕ್ಕೆ ಗುರುಪ್ರಾರ್ಥನೆ ಯೊಂದಿಗೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಗಣ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.

ಅ. 7ರಿಂದ 16ರವರೆಗೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನಪೂಜಾರಿ ಅವರ ಮಾರ್ಗದರ್ಶನದಂತೆ “ನಮ್ಮ ದಸರಾ- ನಮ್ಮ ಸುರಕ್ಷೆ’ಘೋಷ ವಾಕ್ಯದಡಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗ ನಡೆಯಲಿದೆ.

Advertisement

ದಸರಾ ಹಿನ್ನೆಲೆಯಲ್ಲಿ ನಗರಾದ್ಯಂತ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.ಕುದ್ರೋಳಿ-ಮಣ್ಣಗುಡ್ಡೆ -ಲೇಡಿಹಿಲ್‌ ವೃತ್ತ-ಲಾಲ್‌ಬಾಗ್‌
ಜಂಕ್ಷನ್‌- ಪಿವಿಎಸ್‌-ನವಭಾರತ್‌ ವೃತ್ತ- ಹಂಪನಕಟ್ಟೆ- ಮೋಹಿನಿ ವಿಲಾಸ-ರಥಬೀದಿ-ನ್ಯೂಚಿತ್ರ ಚಿತ್ರಮಂದಿರ-ಕುದ್ರೋಳಿ ದೇವಸ್ಥಾನ ಸಹಿತ ಸುಮಾರು 6 ಕಿ.ಮೀ. ನಷ್ಟು ಉದ್ದದ ರಸ್ತೆಗೆ 11 ದಿನಗಳ ಅವಧಿಗೆ ಮನಪಾದಿಂದ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಅದೇ
ರೀತಿ, ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವ ಹಿನ್ನೆಯಲ್ಲಿಯೂ ಸುತ್ತಮುತ್ತ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಕೆಲವೊಂದು ಖಾಸಗಿ, ಸರಕಾರಿ ಕಟ್ಟಡಗಳಲ್ಲಿಯೂದೀಪಾಲಂಕಾರ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next