Advertisement
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೋಗೆ 35 ರೂ., ಬಿನ್ಸ್ 40 ರೂ., ಸೌತೆಕಾಯಿ 55 ರೂ., ಕ್ಯಾರೇಟ್ 25 ರೂ., ಈರುಳ್ಳಿ 50 ರೂ., ಬದನೆ 35 ರೂ., ಕ್ಯಾಲಿಫ್ಲವರ್ 35 ರೂ., ಕ್ಯಾಪ್ಸಿಕಂ 40 ರೂ., ಬೆಂಡೆ 40 ರೂ., ಸುವರ್ಣ ಗಡ್ಡೆ 40 ರೂ., ಶುಂಠಿ 50 ರೂ., ಕ್ಯಾಬೇಜ್ 35 ರೂ. ದರದಲ್ಲಿ ಮಾರಾಟವಾಗುತ್ತಿದೆ. ತರಕಾರಿ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ 5 ರೂ.ನಿಂದ 10 ರೂ. ವರೆಗೆ ಏರಿಕೆಯಾಗಿದೆ.
ಶಂಕರಪುರ ಮಲ್ಲಿಗೆ ಒಂದು ಅಟ್ಟಿಗೆ 1,200 ರೂ., ಒಂದು ಮಾರು ಸೇವಂತಿಗೆ 80, ಜೀನಿಯಾ 40, ಗೊಂಡೆ 80, ಬಿಳಿ ಸೇವಂತಿಗೆ 80, ಗುಲಾಬಿ 100, ಮಾರಿಗೋಲ್ಡ್ 100 ರೂ. ಇದೆ. ಒಂದು ಕೆ.ಜಿ ಮೂಸಂಬಿ 80 ರೂ., ಕಿತ್ತಳೆ 160 ರೂ., ಸಪೋಟ 70 ರೂ., ದಾಳಿಂಬೆ 120 ರೂ., ಪಪ್ಪಾಯಿ 45 ರೂ., ಅನಾನಸು 60 ರೂ., ಮಾವು 100 ರೂ., ದ್ರಾಕ್ಷಿ 100 ರೂ., ಕಲ್ಲಂಗಡಿ 40 ರೂ., ಸೀಬೆಕಾಯಿ 100 ರೂ. ಇದೆ.
Related Articles
ನವರಾತ್ರಿ ವ್ಯಾಪಾರ ಜೋರಾಗಿದೆ. ಹೂವು ಒಂದೇ ದಿನದಲ್ಲಿ ಖಾಲಿಯಾಗುತ್ತಿದೆ. ಆದರೆ ಮಾರುಕಟ್ಟೆ ಉತ್ತಮ ಹೂವುಗಳು ಪೂರೈಕೆಯಾಗುತ್ತಿಲ್ಲ. ಕೆಲವು ಹೂವು ಒಂದು ದಿನದಲ್ಲಿ ಬಾಡಿ ಹೋಗುತ್ತದೆ. ಇದರಿಂದಾಗಿ ಹೂವಿನ ವ್ಯಾಪಾರಿಗಳಿಗೆ ನಷ್ಟವುಂಟಾಗುತ್ತಿದೆ.
-ರವಿ, ಹೂವಿನ ವ್ಯಾಪಾರಿ ಉಡುಪಿ
Advertisement
ಬೆಲೆ ಏರಿಕೆತರಕಾರಿ ಬೆಲೆ ಏಕಾಏಕಿಯಾಗಿ ಏರಿಕೆ ಯಾಗಿದೆ. ಆದರೂ ಜನರು ಖರೀದಿಗೆ ಮುಂದಾಗಿದ್ದಾರೆ. ಕೃಷ್ಣಾಷ್ಟಮಿ ಹಾಗೂ ಗಣೇಶೋತ್ಸವಕ್ಕಿಂತ ವ್ಯಾಪಾರ ಜೋರಾಗಿ ನಡೆಯುತ್ತಿದೆ.
-ಅಬೂಬಕ್ಕರ್, ತರಕಾರಿ ವ್ಯಾಪಾರಿ