Advertisement

ಶಿಶುವಿನ ರೀತಿ ನವೋದ್ಯಮ ಪೋಷಿಸಿ: ಅರವಿಂದ

12:52 PM Jan 28, 2017 | Team Udayavani |

ಹುಬ್ಬಳ್ಳಿ: ನವೋದ್ಯಮ ಎನ್ನುವುದು ಶಿಶು ಇದ್ದಂತೆ. ಅದನ್ನು ಪೋಷಿಸಿ, ಬೆಳೆಸುವ ಮೂಲಕ ಸದೃಢವನ್ನಾಗಿಸುವುದೇ ಉದ್ಯಮಿಯ ಸವಾಲು ಹಾಗೂ ಸಾಮರ್ಥ್ಯದ ಪರೀಕ್ಷೆಯಾಗಿದೆ ಎಂದು  ಓಲಾ ಕಂಪನಿ ಉಪಾಧ್ಯಕ್ಷ ಅರವಿಂದ ಸಿಂಘಾತಿಯಾ ಹೇಳಿದರು. 

Advertisement

ದೇಶಪಾಂಡೆ ಪ್ರತಿಷ್ಠಾನದ  ಸ್ಯಾಂಡ್‌ಬಾಕ್ಸ್‌ ಸಾರ್ಟ್‌ಅಪ್‌ ಆಯೋಜಿಸಿದ್ದ ನವೋದ್ಯಮ ಸಂವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓಲಾ ಕಂಪನಿ ಇಂದು ದೇಶಮಟ್ಟದಲ್ಲಿ ಬೆಳೆಯಬೇಕಾದರೆ ಅದನ್ನು ಮಗುವಿನ ರೂಪದಲ್ಲಿ ಪೋಷಿಸಿ, ಬೆಳೆಸಿದ್ದೇ ಕಾರಣ. ನವೋದ್ಯಮಿಗಳು ತಮ್ಮ  ಉದ್ಯಮವನ್ನು ಮಗುವಂತೆ ರಕ್ಷಣೆ ಮಾಡುವುದು ಅವಶ್ಯ ಎಂದರು. 

ಉದ್ಯಮವೇ ವಿಶ್ವದ ಭವಿಷ್ಯ: ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ|  ಗುರುರಾಜ ದೇಶಪಾಂಡೆ ಮಾತನಾಡಿ, ಉದ್ಯಮವೇವಿಶ್ವದ ಭವಿಷ್ಯವಾಗಿದೆ. ಉದ್ಯಮವೆಂದರೆ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ  ಪರಿಹಾರ ರೂಪಿಸುವುದಾಗಿದೆ ಎಂದರು. 

ವಿಶ್ವಕ್ಕೆ ಸುಮಾರು 70ಮಿಲಿಯನ್‌ ಉದ್ಯಮಿಗಳ ಆವಶ್ಯಕತೆ ಇದೆ. ಇದರಲ್ಲಿ  ಭಾರತದ ಪಾಲು  ಸುಮಾರು 10 ಮಿಲಿಯನ್‌ ಆಗಿದೆ. 1980ರ ದಶಕ ಸೇವಾ ವಲಯ ಉದ್ಯಮದ ದಶಕವಾಗಿತ್ತು. ಈ ಸಂದರ್ಭದಲ್ಲಿಯೇ ಇನ್ಫೋಸಿಸ್‌ ನಂತಹ  ಹಲವು ವಿಖ್ಯಾತ ಕಂಪನಿಗಳು ಜನ್ಮತಳೆದವು. 

1990ರ ದಶಕ ಉತ್ಪನ್ನಗಳ ಆಧಾರಿತ ಉದ್ಯಮದ ಕಾಲಘಟ್ಟವಾಗಿದ್ದು, ವಿಶೇಷವಾಗಿ  ಅಮೆರಿಕಾದ ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದವು. ಉದ್ಯಮಿಯಾದವರು ಸಮಸ್ಯೆಗಳ ಪರಿಹಾರಕ್ಕೆ ಸದಾ ಚಿಂತಿಸುತ್ತಾರೆ. ಸ್ಯಾಂಡ್‌ ಬಾಕ್ಸ್‌  ನವೋದ್ಯಮದ ಚಿಂತನೆ, ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತ ಬಂದಿದೆ. 

Advertisement

ನವೋದ್ಯಮಿಗಳಿಗೆ ಸೂಕ್ತ ವಾತಾವರಣ ಇದೆ ಎಂದರು.  ಧಾರವಾಡದ ಐಐಟಿಯ ನಿಯೋಜಿತ ನಿರ್ದೇಶಕ ಪ್ರೊ| ಪಿ. ಶೇಷು ಮಾತನಾಡಿ, ಹುಬ್ಬಳ್ಳಿಯಂತಹ ಎರಡನೇ ಹಂತದ ನಗರದಲ್ಲಿ  ಉದ್ಯಮ  ಬೆಳವಣಿಗೆ ನಿಟ್ಟಿನಲ್ಲಿ ಇಂತಹ ಯತ್ನಗಳು ನಿಜಕ್ಕೂ ಸಂತಸದಾಯಕ ವಿಚಾರ. ಧಾರವಾಡ ಐಐಟಿ ಅಭಿವೃದ್ಧಿ, ಪ್ರಯೋಗಶೀಲತೆಗೆ  ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು. 

ಶ್ರೀನಿವಾಸ ದೇಶಪಾಂಡೆ ಮಾತನಾಡಿ, ದೇಶದ ಅತಿದೊಡ್ಡ ಇನ್‌ಕುÂಬೇಷನ್‌ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗುತ್ತಿರುವುದು ಸಂತಸ ತಂದಿದೆ. ಉದ್ಯಮಿ ಆಗಬೇಕೆಂದು ಬಯಸಿದ್ದೆ. ಆದರೆ, ಸರಕಾರಿ ಅಧಿಕಾರಿಯಾದೆ. ನನ್ನ  ಆಶಯವನ್ನು ನನ್ನ ಮಗ ಡಾ| ಗುರುರಾಜ ದೇಶಪಾಂಡೆ ಈಡೇರಿಸಿದ್ದಾನೆ ಎಂದರು. ದೇಶಪಾಂಡೆ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಇದ್ದರು. 

ಪ್ರತಿಷ್ಠಾನದ ಸಿಇಒ ನವೀನ ಝಾ ಮಾತನಾಡಿದರು. ಇನ್ಫೊಸಿಸ್‌ನ ಗುರುರಾಜ ದೇಶಪಾಂಡೆ ಇದ್ದರು. ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಅಡಿಯಲ್ಲಿ ನವೋದ್ಯಮ ಆರಂಭಿಸಿದ ಉದ್ಯಮಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next