Advertisement
ಜು. 15 ರಂದು ಚೆಂಬೂರು ಫೈನ್‌ಆರ್ಟ್ಸ್ ಆಡಿಟೋರಿಯಂನಲ್ಲಿ ಜರಗಿದ ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಗಳೇ ಸಂಪತ್ತಾಗಿದ್ದು, ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ ಎಂದರೆ ಅದು ಸಾಮಾನ್ಯ ಮಾತಲ್ಲ. ಇಂದಿನ ಸಮಾರಂಭವು ಉತ್ತಮ ರೀತಿಯಲ್ಲಿ ನಡೆದಿದ್ದು, ನಾಡಿನ ಕಲೆ, ಸಂಸ್ಕೃತಿಯು ವಿದ್ಯಾರ್ಥಿಗಳಿಂದ ಮೇಳೈಸಿದೆ. ಕಲೆಯ ಮೇಲಿನ ಅವರ ಅಭಿರುಚಿ ಹಾಗೂ ನಿಷ್ಠೆ ಅವರನ್ನು ಮುಂದೆ ಉತ್ತಮ ನಾಗರಿಕರನ್ನಾಗಿ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ.
Related Articles
ಸಮಾರಂಭದಲ್ಲಿ ಸಂಸ್ಥೆಯ ಸ್ಥಾಪಕ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರಾದ ಕೆ. ಎಸ್. ಬಂಗೇರ, ಎಂ. ಬಿ. ಸಾಲ್ಯಾನ್, ಎಸ್. ಬಿ. ಕೋಟ್ಯಾನ್, ಆರ್. ಬಿ. ಶೆಟ್ಟಿ, ಎಲ್. ಬಿ. ಪಿಜಾರ್, ವೈ. ಎಸ್. ಶೆಟ್ಟಿ ಮೊದಲಾದವರನ್ನು ಅತಿಥಿ-ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಎಸ್. ಬಂಗೇರ ಅವರು, ಕನ್ನಡಿಗರು ಒಟ್ಟು ಸೇರಿ ಸಮಾಜ ಸೇವೆಯ ದೃಷ್ಟಿಯಿಂದ ನಿರ್ಮಿಸಿದ ಈ ಸಂಸ್ಥೆ ಮುಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈದು ಇಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
Advertisement
ವೇದಿಕೆಯಲ್ಲಿ ಉದ್ಯಮಿ ಕೃಷ್ಣ ವೈ. ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು. ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್. ಶೆಟ್ಟಿ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಸುನೀಲ್ ಎಸ್. ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೇಶವ ಟಿ. ನಾಯಕ್, ಜತೆ ಕಾರ್ಯದರ್ಶಿ ಪ್ರಶಾಂತ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ದಯಾನಂದ ಬಿ. ಹೆಗ್ಡೆ ಉಪಸ್ಥಿತರಿದ್ದರು.
ಸಮಿತಿಯ ಸದಸ್ಯ ರವಿ ಹೆಗ್ಡೆ ಹೆರ್ಮುಂಡೆ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸತೀಶ್ ಎರ್ಮಾಳ್ ನಿರ್ವಹಿಸಿದರು. ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ರಚಿಸಿರುವ ಗೀತೆಯನ್ನು ಪದ್ಮನಾಭ ಸಸಿಹಿತ್ಲು ಅವರ ಸಂಗೀತ ಸಂಯೋಜನೆಯೊಂದಿಗೆ ಶಾಲಾ ವಿದ್ಯಾರ್ಥಿಗಳು ಹಾಡಿದರು.
ಐವತ್ತು ವರ್ಷಗಳ ಹಿಂದೆ ಥಾಣೆ ಪರಿಸರದ ತುಳು-ಕನ್ನಡಿಗರು ಸಂಘಟಿತರಾಗಿ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳ ಬದುಕನ್ನು ರೂಪಿಸಿ ನೂರಾರು ಕುಟುಂಬಗಳಿಗೆ ಅನ್ನವನ್ನು ನೀಡುತ್ತಿದೆ. ಉತ್ತಮ ಶಿಕ್ಷಕ-ಶಿಕ್ಷಕಿಯರು ಹಾಗೂ ಆಡಳಿತ ಸಮಿತಿಯ ಒಗ್ಗಟ್ಟಿನ ಕಾರ್ಯದಿಂದ ಶಾಲೆಯು ನಿರಂತರವಾಗಿ ಶೇ. 100 ಫಲಿತಾಂಶನ್ನು ತರುತ್ತಿರುವುದು ನಮಗೆ ಸಂತೋಷದ ಸಂಗತಿಯಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಹೊಸ ಕಟ್ಟಡ ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ಅವರ ಯೋಗದಾನವನ್ನು ಮರೆಯುವಂತಿಲ್ಲ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಇದು ಸಂಸ್ಥೆಯ ಧ್ಯೇಯೋದ್ಧೇಶವೂ ಆಗಿದೆ. ಈ ನಿಟ್ಟಿನಲ್ಲಿ ದಾನಿಗಳ, ಶಿಕ್ಷಣಪ್ರೇಮಿಗಳ ಸಹಕಾರವನ್ನು ಮರೆಯುವಂತಿಲ್ಲ. ಸಂಸ್ಥೆಯ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರು, ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ – ಜಯ ಕೆ. ಶೆಟ್ಟಿ
ಅಧ್ಯಕ್ಷರು : ನವೋದಯ ಕನ್ನಡ ಸೇವಾ ಸಂಘ ಥಾಣೆ ಶಿಕ್ಷಣದಲ್ಲಿ ಮಕ್ಕಳನ್ನು ತಿದ್ದುವ ಕೆಲಸವಾಗಬೇಕು: ಒಡಿಯೂರು ಶ್ರೀ
ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಪ್ರಜ್ಞಾವಂತ ಪ್ರಜೆಗಳ ನಿರ್ಮಾಣ ಶಿಕ್ಷಕರಿಂದ ಆಗಬೇಕು. ವಿದ್ಯೆ ಎಂಬುವುದು ಬದುಕನ್ನು ರೂಪಿಸಲು ಪ್ರೇರಕವಾಗಿರಬೇಕೇ ಹೊರತು ಮಾರಕವಲ್ಲ. ಶಿಕ್ಷಣದಲ್ಲಿ ಮಕ್ಕಳನ್ನು ತಿದ್ದುವ ಕೆಲಸ ಆದಾಗ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ. ಕನ್ನಡವನ್ನು ಕಟ್ಟಿಬೆಳೆಸಿದ ಈ ಸಂಸ್ಥೆ ಶಿಕ್ಷಣದ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂಘವು ಮುಂಬಯಿಯ ಕನ್ನಡಿಗರ ಸಾಮರ್ಥ್ಯವನ್ನು ತೋರಿಸುತ್ತದೆ. ಕನ್ನಡ ಎನ್ನುವಾಗ ನಮಗೆ ತಾಯಿಯ ಪ್ರೇಮ ಹುಟ್ಟಿಕೊಳ್ಳುತ್ತದೆ. ನವೋದಯ ಕನ್ನಡ ಸೇವಾ ಸಂಘವು ನೂರಾರು ವರ್ಷ ತಮ್ಮ ಸೇವೆಯನ್ನು ಮಾಡುತ್ತಾ, ಸುಸಂಸ್ಕೃತ ಸಮಾಜವನ್ನು ನಿರ್ಮಿಸಲಿ ಎಂದು ಹಾರೈಸಿದರು. ಚಿತ್ರ-ವರದಿ : ಸುಭಾಷ್ ಶಿರಿಯಾ