Advertisement

ಸಚಿವ ನವಜೋತ್‌ ಸಿಂಗ್‌ ಸಿಧು ಬ್ಯಾಂಕ್‌ ಖಾತೆ ಜಪ್ತಿ

06:00 AM Mar 31, 2018 | Team Udayavani |

ಹೊಸದಿಲ್ಲಿ: ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ಬ್ಯಾಂಕ್‌ ಖಾತೆಯನ್ನು ಆದಾಯ ತೆರಿಗೆ ಇಲಾಖೆ ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ. ಸುಮಾರು 57 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಐಟಿ ಇಲಾಖೆ ಈ ಕ್ರಮ ಕೈಗೊಂಡಿದೆ. 28.38 ಲಕ್ಷ ರೂ. ಮೌಲ್ಯದ ವಸ್ತ್ರ ಖರೀದಿ, 38.24 ಲಕ್ಷ ರೂ. ಪ್ರವಾಸ ವೆಚ್ಚ, 47.11 ಲಕ್ಷ ರೂ. ವೇತನ ವೆಚ್ಚ, 17.80 ಲಕ್ಷ ರೂ. ಇಂಧನ ವೆಚ್ಚದ ಮೇಲಿನ ತೆರಿಗೆಯನ್ನು ಪಾವತಿಸಿಲ್ಲ. ಸರಿಯಾದ ದಾಖಲೆಗಳನ್ನೂ ಒದಗಿಸಿಲ್ಲ ಎಂದಿದೆ ಇಲಾಖೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next