Advertisement

ನಾನು ರಾಹುಲ್‌ ಗಾಂಧಿಯ ಸೈನಿಕ: ಕೈ ಗೆಲುವಿನ ಸಂಭ್ರಮದಲ್ಲಿ ಸಿಧು 

12:37 PM Mar 11, 2017 | |

ಅಮೃತ ಸರ : ಪಂಜಾಬ್‌ನಲ್ಲಿ  ಪ್ರಕಾಶ್‌ ಸಿಂಗ್‌ ಬಾದಲ್‌ ನೇತೃತ್ವದ ಎನ್‌ಡಿಎ ಸರ್ಕಾರದ ಕುರಿತಾಗಿನ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಸ್ಥಿತ್ವವನ್ನು ಉಳಿಸಲು ಸಹಕಾರಿಯಾಗಿದ್ದು, ವಿಧಾನಸಭಾ ಚುನಾವಣಾ ಫ‌ಲಿತಾಂಶದಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. 

Advertisement

ಗೆಲುವಿನ ಸಂಭ್ರಮದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ವಿಜೇತ ಅಭ್ಯರ್ಥಿ ನವಜೋತ್‌ಸಿಂಗ್‌ ಸಿಧು ‘ಇದು ಕಾಂಗ್ರೆಸ್‌ನ ಅಸ್ಥಿತ್ವದ ಪ್ರಶ್ನೆಯಾಗಿತ್ತು, ನಮ್ಮ ಪೇಟದ ಅಸ್ಥಿತ್ವದ ಪ್ರಶ್ನೆಯಾಗಿತ್ತು.  ಗೆಲುವು ಪಂಜಾಬ್‌ನ ಕಾಂಗ್ರೆಸ್‌ನದ್ದು, ರಾಹುಲ್‌ ಗಾಂಧಿ, ಅಮರಿಂದರ್‌ ಸಿಂಗ್‌ ಅವರ ನಾಯಕತ್ವಕ್ಕೆ ಸಂದ ಜಯವಾಗಿದೆ’ ಎಂದರು. 

‘ಸಂಭ್ರಮಾಚರಣೆ ಈಗ ನಡೆಸುವುದಲ್ಲ 6 ತಿಂಗಳ ಬಳಿಕ ನಮ್ಮ ಸರ್ಕಾರದ ಕೆಲಸಗಳನ್ನು ನಿರ್ಣಯಿಸಿ  ಆ ಬಳಿಕ ಸಂಭ್ರಮಾಚರಣೆ ನಡೆಸುವ’ ಎಂದರು. 

ಎಂದಿನಂತೆ ಮಾತಿನ ಮೂಲಕ ಮೋಡಿ ಮಾಡಿದ ಸಿಧು’ ನಮ್ಮ ನೀತಿ, ನಿಯತ್ತಿಗೆ ಗೆಲುವಾಗಿದೆ. ಕೆಲವರು (ಕೇಜ್ರಿವಾಲ್‌ ಹೆಸರು ಉಲ್ಲೇಖ ಮಾಡಿ) ಅವರಿಗಾಗಿ ಬಂದರು.ಅವರಿಗೆ ಗೆಲುವು ಸಿಗಲಿಲ್ಲ, ನಾವು ಪಂಜಾಬ್‌ಗಾಗಿ ಹೋರಾಟ ಮಾಡಿದೆವು ಉಳಿದುಕೊಂಡೆವು’ ಎಂದರು. 

ಅಮೃತಸರ ಪೂರ್ವ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಸಿಧು ‘ನಾನು ರಾಹುಲ್‌ ಗಾಂಧಿ ಅವರ ಸೈನಿಕ. ನನ್ನ, ಪತ್ನಿಯ ಸ್ಥಾನಮಾನದ ಬಗ್ಗೆ ಚಿಂತಿಸಿಲ್ಲ’ ಎಂದರು. 

Advertisement

117 ಸ್ಥಾನಗಳ ಪೈಕಿ 73 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡು ಪ್ರಚಂಡ ಬಹುಮತದತ್ತ ಕಾಂಗ್ರೆಸ್‌ ಮುನ್ನುಗ್ಗುತ್ತಿದ್ದು, ಈ ಹಿಂದೆ ಬಿಂಬಿತವಾಗಿರುವ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ. 

ಬಿಜೆಪಿ ತೊರೆದಿದ್ದ ಸಿಧು ಸ್ವಂತ ಪಕ್ಷವೊಂದನ್ನು ಕಟ್ಟಿ ಚುನಾವಣೆ ಘೋಷಣೆಯಾಗುವ 2 ತಿಂಗಳ ಮುಂಚೆ ಬಿಜೆಪಿ ಸೇರ್ಪಡೆಯಾಗಿದ್ದರು. 

ಸಿಧುಗೆ ಅಮರೀಂದರ್‌ ಸಿಂಗ್‌ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. 

ಅಧಿಕಾರಕ್ಕೇರಲು ಶತಪ್ರಯತ್ನ ನಡೆಸಿದ್ದ ಆಪ್‌ 2 ನೇ ಸ್ಥಾನ ಪಡೆದುಕೊಂಡಿದ್ದು, ಶಿರೋಮಣಿ ಅಕಾಲಿದಳ -ಬಿಜೆಪಿ ಮೈತ್ರಿಕೂಟ ಕೇವಲ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಪ್‌ 25 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next