Advertisement

ನವಿಮುಂಬಯಿ ಅಂ. ವಿಮಾನ ನಿಲ್ದಾಣನಾಮಕರಣ ಸಮಿತಿಯಿಂದ ಪ್ರತಿಭಟನೆ

01:57 PM Jun 25, 2021 | Team Udayavani |

ನವಿಮುಂಬಯಿ, ಜೂ. 24: ನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಭಾರೀ ಸಂಖ್ಯೆಯಲ್ಲಿ ಜನರು ಗುರುವಾರ ನವಿಮುಂಬಯಿಯಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ನವಿಮುಂಬಯಿ ಪೊಲೀಸರು ಭಾರೀ ಭದ್ರತೆಯನ್ನು ನಿಯೋಜಿಸಿದ್ದರು. ನವಿಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಕರಣ ಸಮಿತಿ ಅವರ ಆಶ್ರಯದಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

Advertisement

ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸಮಿತಿಯ ಧ್ವಜದ ಅಡಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಯಾವುದೇ ರಾಜಕೀಯ ಧ್ವಜವನ್ನು ಬಳಸಿರಲಿಲ್ಲ. ನವಿಮುಂಬಯಿ ವಿಮಾನ ನಿಲ್ದಾಣಕ್ಕೆ ಸಮಾಜವಾದಿ ನಾಯಕ ದಿಂಕರ್‌ ಬಾಲು ಪಾಟೀಲ್‌ ಹೆಸರಿಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸುತ್ತಿದ್ದರೆ, ಶಿವಸೇನೆ ನೇತೃತ್ವದ ಎಂವಿಎ ಸರಕಾರ ಈ ಹಿಂದೆ ವಿಮಾನ ನಿಲ್ದಾಣಕ್ಕೆ ತಮ್ಮ ಸಂಸ್ಥಾಪಕ ಬಾಲಾಸಾಹೇಬ್‌ ಠಾಕ್ರೆ ಹೆಸರಿಡಲು ಉದ್ದೇಶಿಸಿದೆ ಎಂದು ಘೋಷಿಸಿತ್ತು.

ಸ್ಥಳೀಯ ಬಿಜೆಪಿ ಶಾಸಕ ಪ್ರಶಾಂತ್‌ ಠಾಕೂರ್‌ ಮಾತನಾಡಿ, ಅಭಿವೃದ್ಧಿ ಯೋಜನೆಗಳಿಗಾಗಿ ತಮ್ಮ ಭೂಮಿಯನ್ನು  ಸ್ವಾಧೀನಪಡಿಸಿ ಕೊಳ್ಳತ್ತಿರುವ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವಲ್ಲಿ ಡಿ.ಬಿ. ಪಾಟೀಲ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ರಾಜಕೀಯ ಜೀವನ ಮತ್ತು ಇತರ ಹಿಂದುಳಿದ ವರ್ಗಗಳ ಹಕ್ಕುಗಳ ಹೋರಾಟದಲ್ಲಿ ಅವರ ಪಾತ್ರ (ಒಬಿಸಿಗಳು) ಪ್ರಮುಖವಾಗಿರುವುದರಿಂದ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕು ಎಂದು ಆಗ್ರಹಿಸಿದರು.

ಇಂದಿನ ಪ್ರತಿಭಟನೆಯು ಶಾಂತಿಯುತ ವಾಗಿದೆ. ಸರಕಾರ ನವಿಮುಂಬಯಿಯ ನಾಗರಿಕರ ಆಗ್ರಹಕ್ಕೆ ಮಣಿಯದಿದ್ದಲ್ಲಿ ಭವಿಷ್ಯದಲ್ಲಿ ಉಗ್ರ ಪ್ರತಿಭಟನೆ ನಡೆಯ ಲಿದೆ ಎಂದು ಅವರು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next