Advertisement

ನವಿಮುಂಬಯಿ: ಬಿಜೆಪಿ ಕನ್ನಡ ಘಟಕದಿಂದ ವಿಜಯೋತ್ಸವ

04:32 PM May 19, 2018 | Team Udayavani |

ನವಿಮುಂಬಯಿ: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು ಆತೀ ಹೆಚ್ಚು ಸ್ಥಾನಗಳಿಸಿ ಹೊರಹೊಮ್ಮಿರುವ ನಿಮಿತ್ತ  ಭಾರತೀಯ ಜನತಾ ಪಾರ್ಟಿ  ಕನ್ನಡ ಘಟಕದ ವತಿಯಿಂದ ವಿಜಯೋತ್ಸವ ಆಚರಣೆಯು ನವಿಮುಂಬಯಿಯಲ್ಲಿ ನಡೆಯಿತು.

Advertisement

ಕನ್ನಡ ಘಟಕ ನವಿ ಮುಂಬಯಿ ಜಿಲ್ಲಾ  ಅಧ್ಯಕ್ಷ  ಹರೀಶ್‌ ಪೂಜಾರಿ ಅವರು ಮಾತನಾಡಿ, ಕರ್ನಾಟಕದ ಆಡಳಿತದಿಂದ ಬೇಸತ್ತ ಜನತೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಇದು ಕರ್ನಾಟಕದ ಜನತೆ ನಮ್ಮ ನೆಚ್ಚಿನ ಪ್ರದಾನ ಮಂತ್ರಿಗೆ ಕೊಟ್ಟ ಉಡುಗೊರೆಯಾಗಿದೆ ಎಂದರು.

ನವಿಮುಂಬಯಿ ಬಿಜೆಪಿ ಜಿÇÉಾಧ್ಯಕ್ಷ  ರಾಮಚಂದ್ರ ಘರತ್‌ ಮಾತಾನಾಡಿ, ಬೃಹತ್‌ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ತಮ್ಮ ಅಮೂಲ್ಯ ಮತ ಹಾಕಿ ಆರಿಸದಕ್ಕೆ ಕರ್ನಾಟಕ ಜನತೆಗೆ ಅಭಿನಂದನೆ ಸಲ್ಲಿಸಿದರು, ಅಲ್ಲದೆ ಸರಕಾರ ರಚಿಸಲು ಸ್ವಲ್ಪವೇ ಸೀಟು ಬೇಕಿದಾದರೂ ಸರಕಾರ ಮಾತ್ರ ಬಿಜೆಪಿ ರಚಿಸುವುದು ಶತಸಿದದ್ಧವಾಗಿದೆ ಎಂದು ನುಡಿದರು.

ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ  ಗಣೇಶ್‌ ಶೇರಿಗಾರ್‌  ಮಾತಾನಾಡಿ, ಇದೇ ಮಾದರಿಯನ್ನು ನವಿಮುಂಬಯಿಯಲ್ಲೂ ಮಾಡಬೇಕೆಂದು ತಿಳಿಸಿ ನವಿಮುಂಬಯಿಯ ಕನ್ನಡಿಗರಿಗೆ ಜಿÇÉಾ ಬಿಜೆಪಿ ವತಿಯಿಂದ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.

ಕನ್ನಡ ಘಟಕದ ಮಹಿಳಾ ಅಧ್ಯಕ್ಷ  ಪೂರ್ಣಿಮಾ  ದೇವಾಡಿಗ ಮಾತಾನಾಡಿ, ಕರ್ನಾಟಕ ಜನತೆ ಮೋದಿಯ ಕಾರ್ಯ ಶೈಲಿಯನ್ನು ಮೆಚ್ಚಿ ಯಾವುದೇ ಜಾತಿ ಮತ ನೋಡದೇ ಬಿಜೆಪಿಗೆ ಮತ ಹಾಕಿದ್ದಾರೆ ಎಂದರು.

Advertisement

ಕನ್ನಡ ಘಟಕದ ಉಪಾಧ್ಯಕ್ಷರುಗಳಾದ  ರಾಜಾರಾಮ ಅಚಾರ್ಯ, ರಮೇಶ್‌ ಸಾಲ್ಯಾನ್‌ ಬಜೆಗೋಳಿ, ದೆಪ್ಪುಣಿಗುತ್ತು ಜಗದೀಶ ಶೆಟ್ಟಿ, ಸದಸ್ಯರುಗಳಾದ  ಪ್ರಭಾಕರ ಬಂಗೇರಾ, ಸಂಜೀವ ಶೆಟ್ಟಿ, ದಯನಂದ ದೇವಾಡಿಗ,  ಸುರೇಶ ದೇವಾಡಿಗ, ಮನೋಹರ ನಾಯ್ಕ, ವಿಶ್ವನಾಥ ಪೂಜಾರಿ, ಗಂಗಾಧರ  ಬಂಗೇರ, ರಾಘು ಮೂಲ್ಯ,   ಭೋಜ ದೇವಾಡಿಗ, ಕಲಾ ಶೇರಿಗಾರ್‌,  ಮಹಿಳಾ ವಿಭಾಗ ಕಾರ್ಯದರ್ಶಿ  ಪ್ರೇಮಾ  ಮೂಲ್ಯ,   ಬಿಜೆಪಿ ಜಿಲ್ಲಾ  ಉಪಾಧ್ಯಕ್ಷರುಗಳಾದ ನಿತೀನ್‌ ಕಾಂದಾರಿ, ಆನಂದ ಸನೋತ್ರ ಹಾಗೂ ಜಿಲ್ಲಾ  ಉಪ ಸಮಿತಿಯ ಹಲಾವಾರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಡೋಲು ಬಾರಿಸಿ ಕುಣಿದು ಸಂಭ್ರಮಿಸಿದರು. ಸದಸ್ಯರೆಲ್ಲರಿಗೂ ಸಿಹಿ ಹಂಚಿ ದಕ್ಷಿಣ ಭಾರತ ಶೈಲಿಯ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next