ಭುವನೇಶ್ವರ: ಒಡಿಶಾದಲ್ಲಿ ಪಕ್ಷದ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಿಜೆಡಿ ನಾಯಕ ವಿ.ಕೆ.ಪಾಂಡ್ಯನ್ ಅವರು ಸಕ್ರಿಯ ರಾಜಕೀಯವನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ,
ನಾನು ‘ಹೊರಗಿನವನು’ ಎಂದು ಲೇಬಲ್ ಮಾಡಿದ ಬಿಜೆಪಿಯ ಆಕ್ರಮಣಕಾರಿ ಪ್ರಚಾರವನ್ನು ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಡಿಯ ಆಘಾತಕಾರಿ ಸೋಲಿನ ನಂತರ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪಾಂಡ್ಯನ್ ಅವರೇ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ವದಂತಿಗಳ ಬಗ್ಗೆ ನವೀನ್ ಪಟ್ನಾಯಕ್ ಅವರು ಮಾತನಾಡಿ ‘ಪಾಂಡ್ಯನ್ ಅವರು ನನ್ನ ಉತ್ತರಾಧಿಕಾರಿ ಅಲ್ಲ. ನನ್ನ ಉತ್ತರಾಧಿಕಾರಿಯನ್ನು ಜನರೇ ತೀರ್ಮಾನಿಸಲಿದ್ದಾರೆ’ ಎಂದು ಹೇಳಿದ್ದರು.
‘ಪಾಂಡ್ಯನ್ ವಿರುದ್ಧ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ಆಕ್ಷೇಪ ಮಾಡಿದ ಪಟ್ನಾಯಕ್ ‘ಪಾಂಡ್ಯನ್ ಅವರು, ಪ್ರಾಮಾಣಿಕ ವ್ಯಕ್ತಿ ಮತ್ತು ನಿಯತ್ತು ಇರುವ ವ್ಯಕ್ತಿ. ಅಂಥವ ಬಗ್ಗೆ ಸಲ್ಲದ ಮಾತುಗಳು ಖಂಡನೀಯ’ ಎಂದು ಹೇಳಿದ್ದರು. ಪಾಂಡ್ಯನ್ ಹುದ್ದೆಯ ಆಕಾಂಕ್ಷಿಯಾಗಿ ಬಿಜೆಡಿಯನ್ನು ಸೇರಿಕೊಂಡಿಲ್ಲ. ಐಎಎಸ್ ಅಧಿಕಾರಿಯಾಗಿ 10 ವರ್ಷಗಳಿಂದ ಕೋವಿಡ್ ಅವಧಿಯಲ್ಲಿ, ಒಡಿಶಾಕ್ಕೆ ಅಪ್ಪಳಿಸಿದ್ದ 2 ಚಂಡಮಾರುತದ ಸಂದರ್ಭದಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು ಎಂದು ಭಾರೀ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಬಿಜೆಪಿ ಒಡಿಶಾದಲ್ಲಿ ಪ್ರಾಬಲ್ಯ ತೊರೆದಿದ್ದು ಬಿಜೆಡಿಯ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.