Advertisement
ರಾಜ್ಯ ಸರಕಾರದ ಸೀಮಿತ ಮನಸ್ಥಿತಿಯಿಂದಾಗಿ ಕೇಂದ್ರ ಸರಕಾರದ ಯೋಜನೆಗಳು ಇಲ್ಲಿನ ಬಡಕುಟುಂಬಗಳಿಗೆ ಸಿಗದಂತಾಗಿದೆ ಎಂದವರು ಹೇಳಿದರು. ನರೇಂದ್ರ ಮೋದಿಯವರ ಚರಿಷ್ಮಾ ಒಡಿಶಾದಲ್ಲಿ ಹೆಚ್ಚಾಗಬಹುದು ಎಂಬ ಒಂದೇ ಒಂದು ಕಾರಣಕ್ಕಾಗಿ ಪಟ್ನಾಯಕ್ ಸರಕಾರವು ಆಯುಷ್ಮಾನ್ ಭಾರತ ಯೋಜನೆಗೆ ಸೇರ್ಪಡೆಗೊಳ್ಳಲು ನಿರಾಕರಿಸಿದೆ ಎಂಬ ವಿಷಯವನ್ನು ಶಾ ಅವರು ಸಭೆಯಲ್ಲಿ ಬಹಿರಂಗಗೊಳಿಸಿದರು. ಒಡಿಶಾದ ಜನರೆಲ್ಲರೂ ಶ್ರಮಜೀವಿಗಳು ಮತ್ತು ಈ ರಾಜ್ಯವೂ ಪ್ರಾಕೃತಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ ಆದರೂ ರಾಜ್ಯವು ಹಿಂದುಳಿಯಲು ರಾಜ್ಯಸರಕಾರದ ನಿರಾಸಕ್ತಿಯೇ ಕಾರಣ ಎಂದವರು ದೂರಿದರು.
ಬುಡಕಟ್ಟು ಸುಮದಾಯ ಸಹಿತ ಎಲ್ಲಾ ವರ್ಗಗಳ ಜನಸಮುದಾಯಕ್ಕೆ ಬೇಕಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ‘ಮೋದಿಜಿಯವರ ನೇತೃತ್ವದಲ್ಲಿ ನಾವು ನವ ಒಡಿಶಾ ರೂಪುಗೊಳ್ಳುವಂತೆ ಮಾಡುತ್ತೇವೆ. ನಿರುದ್ಯೋಗ ರಹಿತ, ಉತ್ತಮ ಆರೋಗ್ಯ ಸೇವೆಗಳನ್ನು ಒಳಗೊಂಡಿರುವ ಮತ್ತು ಎಲ್ಲರೂ ಬಡತನ ರೇಖೆಗಿಂತ ಮೇಲಿರುವ ಆದರ್ಶ ಒಡಿಶಾ ನಿರ್ಮಾಣ ನಮ್ಮ ಧ್ಯೇಯವಾಗಿದೆ..’ ಎಂದು ಶಾ ನುಡಿದರು.