ಮಣಿಪಾಲ ಕೆಎಂಸಿ ಗ್ರೀನ್ಸ್‌ನಿಂದ ಮ್ಯಾರಥಾನ್ ಪ್ರಾರಂಭಗೊಂಡು ಅಲ್ಲಿಯೇ ಸಮಾಪನಗೊಂಡಿತು. ದೇಶ, ವಿದೇಶದ ಮಂದಿ ಸಹಿತ ಉಭಯ ಜಿಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹೀಗೆ 6,000ಕ್ಕೂ ಅಧಿಕ ಮಂದಿ ಓಟದಲ್ಲಿ ಪಾಲ್ಗೊಂಡರು.
ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಆಳ್ವಾಸ್‌ನ ನವೀನ್ ದಗರ್ ಅವರು 21.1 ಕಿ.ಮೀ. ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ಆಳ್ವಾಸ್‌ನ ಕಿರಣ್ ಜಿತುರ್ ಪಂಜಾಬ್ ಅವರು ಪ್ರಶಸ್ತಿ ಗೆದ್ದರು. ಅವರಿಬ್ಬರು ತಲಾ 70 ಸಾವಿರ ರೂ. ನಗದು ಬಹುಮಾನ ಪಡೆದರು. ಹಾಫ್ ಮ್ಯಾರಥಾನ್‌ನಲ್ಲಿ ಮಹಿಳೆಯರಲ್ಲಿ ಪ್ರಥಮ, ದ್ವಿತೀಯ ಹಾಗೂ ಪುರುಷರಲ್ಲಿ ಮೊದಲ ಮೂರು ಸ್ಥಾನಗಳ ಸಹಿತ ಹೆಚ್ಚಿನ ಪ್ರಶಸ್ತಿಯನ್ನು ಆಳ್ವಾಸ್‌ನವರೇ ಪಡೆದುಕೊಂಡರು.
Advertisement
ಬಹುಮಾನ ವಿತರಣಾ ಸಮಾರಂಭದಲ್ಲಿ ಮಣಿಪಾಲ ವಿವಿಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಡಾ| ಎಚ್. ವಿನೋದ್ ಭಟ್, ಕುಲಸಚಿವ ಡಾ| ನಾರಾಯಣ ಸಭಾಹಿತ್, ಸಹಕುಲಪತಿ ಸುರೇಂದ್ರ ವಿ. ಶೆಟ್ಟಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್, ಜನರಲ್ ಮ್ಯಾನೇಜರ್‌ಗಳಾದ ಕೆ.ಟಿ. ರೈ, ಅಜಯ್ ಶರ್ಮಾ, ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಅದಾನಿ ಯುಪಿಸಿಎಲ್ ಜಂಟಿ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಕಾರ್ಯಾಧ್ಯಕ್ಷ ರಘುರಾಮ ನಾಯಕ್, ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಣಿಪಾಲ ಎಂಐಟಿಯ ಬಿ.ಎಚ್.ವಿ. ಪೈ, ನಿರ್ದೇಶಕ ಡಾ| ಜಿ.ಕೆ. ಪ್ರಭು, ಸಂಘಟಕ ಗಿರೀಶ್ ಮೆನನ್, ಮ್ಯಾರಥಾನ್ ಸಮಿತಿ ಕಾರ್ಯದರ್ಶಿ ಡಾ| ವಿನೋದ್ ಸಿ. ನಾಯಕ್ ಉಪಸ್ಥಿತರಿದ್ದರು. ಮ್ಯಾರಥಾನ್ ಸಮಿ ಅಧ್ಯಕ್ಷ ಕೆ. ರಘುಪತಿ ಭಟ್ ಸ್ವಾಗತಿಸಿದರು.
ಪುರುಷರ ಹಾಫ್ ಮ್ಯಾರಥಾನ್‌ನಲ್ಲಿ ನವೀನ್ ಪ್ರಥಮವಾದರೆ ರಂಜೀತ್ ಸಿಂಗ್ (ದ್ವಿ), ಸಂತೋಷ್ (ತೃ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕಿರಣ್ ಜಿತುರ್ ಪ್ರಥಮವಾದರೆ ತಿಪ್ಪವ್ವ ಸಣ್ಣಕ್ಕಿ (ದ್ವಿ), ಅರ್ಚನಾ (ತೃ) ಸ್ಥಾನ ಪಡೆದರು. 10 ಕಿ.ಮೀ.ನಲ್ಲಿ ಮಮತಾ ವಾರಾಣಸಿ (ಪ್ರ), ಸುಪ್ರೀತಾ (ದ್ವಿ), ದೀಕ್ಷಾ (ತೃ). ಪುರುಷರ ವಿಭಾಗದಲ್ಲಿ ಪ್ರವೀಣ್ ಖಂಬಲ್ (ಪ್ರ), ವಿಜಯ್ (ದ್ವಿ), ಚೇತನ್ ಜಿ.ಜೆ. (ತೃ), 10 ಕಿ.ಮೀ. ಸೀನಿಯರ್ ಮಹಿಳಾ ವಿಭಾಗದಲ್ಲಿ ಯೂಲಿಯಾ (ಪ್ರ), ರೇಖಾ (ದ್ವಿ), ಪ್ರಮೀಳಾ (ತೃ). ಪುರುಷರ ವಿಭಾಗದಲ್ಲಿ ಶಂಕರ್ (ಪ್ರ), ವಿಶ್ವನಾಥ ಕೋಟ್ಯಾನ್ (ದ್ವಿ) ಮತ್ತು ದಿವಾಕರ್ (ತೃ) ಬಹುಮಾನ ಪಡೆದರು.
Related Articles
Advertisement