Advertisement

ನವದೀಪ್ ಸೈನಿಗೆ ಕೈ ತಪ್ಪಿತು ಮೂರು ಕೌಂಟಿ ಪಂದ್ಯ

03:18 PM Jun 24, 2023 | Team Udayavani |

ಮುಂಬೈ: ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಕಾರಣ ನವದೀಪ್‌ ಸೈನಿ ಅವರಿಗೆ ಇಂಗ್ಲಿಷ್‌ ಕೌಂಟಿಯಲ್ಲಿ ಆಡುವ ಅವಕಾಶ ಭಾಗಶಃ ತಪ್ಪಿದೆ. ವೂರ್ಸ್ಟರ್‌ಶೈರ್‌ ಪರ ಆಡು¤ರುವ ಅವರು ಜುಲೈ ತಿಂಗಳ 3 ಪಂದ್ಯಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿ ಜು. 12ರಿಂದ ಜು. 24ರ ತನಕ ಸಾಗಲಿದೆ.

Advertisement

ನವದೀಪ್‌ ಸೈನಿ ಕೌಂಟಿ ಪಂದ್ಯಾವಳಿಯಲ್ಲಿ ಆಡುತ್ತಿರುವುದು ಇದೇ ಮೊದಲು. ಭಾನುವಾರ ಅವರು ಡರ್ಬಿಶೈರ್‌ ವಿರುದ್ಧ ನ್ಯೂ ರೋಡ್‌ನ‌ಲ್ಲಿ ಕೌಂಟಿ ಪದಾರ್ಪಣೆ ಮಾಡಲಿದ್ದಾರೆ. ಆದರೆ ಯಾರ್ಕಶೈರ್‌ (ಜು. 10-13), ಲೀಸೆಸ್ಟರ್‌ಶೈರ್‌ (ಜು. 19-22) ಮತ್ತು ಗ್ಲೂಸ್ಟರ್‌ಶೈರ್‌ (ಜು. 26-29) ವಿರುದ್ಧದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದು.

ನವದೀಪ್‌ ಸೈನಿ ಸೇರ್ಪಡೆಯಿಂದ ವೂರ್ಸ್ಟರ್‌ಶೈರ್‌ ಕೌಂಟಿಯ ಬೌಲಿಂಗ್‌ ವಿಭಾಗಕ್ಕೆ ಹೆಚ್ಚಿನ ಬಲ ಬಂದಿತ್ತು. ತಂಡದ ಪ್ರಮುಖ ಬೌಲರ್‌ಗಳು ನಾನಾ ಕಾರಣದಿಂದ ಬೇರ್ಪಟ್ಟಿದ್ದರು. ಚಾರ್ಲಿ ಮಾರಿಸ್‌ ಗಾಯದ ಕಾರಣ ನಿವೃತ್ತರಾದರೆ, ಜೋಶ್‌ ಟಂಗ್‌ ಇಂಗ್ಲೆಂಡ್‌ ತಂಡಕ್ಕೆ ಕರೆ ಪಡೆದಿದ್ದರು. ದಿಲ್ಲೋನ್‌ ಪೆನ್ನಿಂಗ್ಟನ್‌ ಮತ್ತು ಆ್ಯಡಂ ಫಿಂಚ್‌ ಇತ್ತೀಚೆಗಷ್ಟೇ ಗಾಯಾಳುಗಳ ಯಾದಿಗೆ ಸೇರಿದ್ದರು.

ಈ ಹಿಂದೆ ಕಪಿಲ್‌ದೇವ್‌, ಜಹೀರ್‌ ಖಾನ್‌, ಆರ್‌. ಅಶ್ವಿ‌ನ್‌ ಅವರಂಥ ಶ್ರೇಷ್ಠ ಬೌಲರ್‌ಗಳು ಯಶಸ್ಸು ಸಾಧಿಸಿದ ಕೌಂಟಿಯಲ್ಲಿ ಆಡಲು ಹೆಮ್ಮೆಯಾಗುತ್ತಿದೆ’ ಎಂದು ನವದೀಪ್‌ ಸೈನಿ ವೂಸ್ಟರ್‌ಶೈರ್‌ ಕ್ಲಬ್‌ ವೆಬ್‌ ಸೈಟ್‌ನಲ್ಲಿ ಇತ್ತೀಚೆಗೆ ಬರೆದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next